ಬೆಂಗಳೂರು: 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ(Pro Kabaddi Season 10) ಆಟಗಾರರ ಹರಾಜು ಇಂದು (ಸೋಮವಾರ) ಹಾಗೂ ನಾಳೆ (ಮಂಗಳವಾರ) ಮುಂಬೈನಲ್ಲಿ ನಡೆಯಲಿದೆ. ರಾತ್ರಿ 8.15ಕ್ಕೆ ಹರಾಜು(pro kabaddi league 2023 auction) ಪ್ರಕ್ರಿಯೆ ಆರಂಭಗೊಳ್ಳಲಿದೆ. ಸ್ಟಾರ್ ಆಟಗಾರರಾದ ಪವನ್ ಶೆರಾವತ್, ವಿಕಾಸ್ ಖಂಡೋಲಾ, ಇರಾನ್ ಫಜಲ್ ಅತ್ರಾಚಲಿ ಸೇರಿ ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಗೆದ್ದ ತಂಡದ ಆಟಗಾರರು ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಸೇಲಾಗುವ ನಿರೀಕ್ಷೆ ಇದೆ. ಇವರ ಜತೆಗೆ ಖೇಲೋ ಇಂಡಿಯಾ ಗೇಮ್ಸ್‌ನ ಫೈನಲ್ ಆಡಿದ ಆಗ್ರ 2 ತಂಡಗಳ 24 ಆಟಗಾರರೂ ಕೂಡ ರೇಸ್ನಲ್ಲಿದ್ದಾರೆ.
ಪೂರ್ವ ನಿಗದಿಯಂತೆ ಆಟಗಾರರ ಹರಾಜು(pro kabaddi league 2023 auction date) ಸೆಪ್ಟೆಂಬರ್ 8 ರಿಂದ 9 ರವರೆಗೆ ಮುಂಬೈಯಲ್ಲಿ ನಡೆಯಬೇಕಿತ್ತು. ಆದರೆ ಏಷ್ಯನ್ ಗೇಮ್ಸ್ಗೆ ರಾಷ್ಟ್ರೀಯ ತಂಡದ ಆಟಗಾರರ ತರಬೇತಿ ಶಿಬಿರದ ಸಿದ್ಧತೆಗಳಿಗೆ ನೆರವಾಗುವಂತೆ ಕೋರಿ ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಶನ್(Amateur Kabaddi Federation of India) ಸಲ್ಲಿಸಿದ ಮನವಿಯ ಮೇರೆಗೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ ಎಲ್ಲ 12 ತಂಡಗಳು 22 ಎಲೈಟ್ ಆಟಗಾರರ ಸಹಿತ ಒಟ್ಟು 84 ಆಟಗಾರರನ್ನು ರಿಟೇನ್ ಮಾಡಿಕೊಂಡಿವೆ.
500ಕ್ಕೂ ಹೆಚ್ಚು ಆಟಗಾರರು
ಹರಾಜು ಪ್ರಕ್ರಿಯೆಯಲ್ಲಿ ದೇಶೀಯ ಮತ್ತು ವಿದೇಶಿ ಆಟಗಾರರನ್ನು ಎ, ಬಿ, ಸಿ ಮತ್ತು ಡಿ. ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗದಲ್ಲಿ ಆಟಗಾರರನ್ನು ‘ಆಲ್ ರೌಂಡರ್ಸ್’, ‘ಡಿಫೆಂಡರ್ಸ್’ ಮತ್ತು ‘ರೈಡರ್ಸ್’ ಎಂದು ವಿಂಗಡಿಸಲಾಗುವುದು. ಪ್ರವರ್ಗ ಎ- 30 ಲಕ್ಷ ರೂ., ಬಿ ವರ್ಗಕ್ಕೆ 20 ಲಕ್ಷ ರೂ., ವರ್ಗ ಸಿಗೆ 13 ಲಕ್ಷ ರೂ., ಡಿ ವರ್ಗಕ್ಕೆ 9 ಲಕ್ಷ ರೂ. ಹೊಂದಿರುತ್ತಾರೆ. ಒಟ್ಟು 500ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
Not kidding, we were 𝐬𝐮𝐩𝐞𝐫 𝐞𝐱𝐜𝐢𝐭𝐞𝐝 for this Monday 🤩
— ProKabaddi (@ProKabaddi) October 9, 2023
Watch the LIVE Coverage of #PKLPlayerAuction, 8:15 PM onwards, only on Star Sports Network and Disney+Hotstar 📺#ProKabaddi #PKLSeason10 pic.twitter.com/XVFv27vHaF
ಲೀಗ್ ನಿಯಮಗಳ ಪ್ರಕಾರ 9ನೇ ಆವೃತ್ತಿಯಲ್ಲಿ ಆಡಿದ ಕೆಲ ಆಟಗಾರರನ್ನು ತಮ್ಮದೇ ತಂಡದಲ್ಲಿ ಉಳಿಸಿಕೊಳ್ಳುವ ಆಯ್ಕೆಯನ್ನು ಫ್ರಾಂಚೈಸಿಗಳು ಹೊಂದಿವೆ. 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಈ ಬಾರಿಯ ಏಷ್ಯಾನ್ ಕಬಡ್ಡಿ ಚಾಂಪಿಯನ್ಶಿಪ್ನಲ್ಲಿ ಗಮನ ಸೆಳೆದಿದ್ದ ಅನೇಕ ಆಟಗಾರರು ಉತ್ತಮ ಬೆಲೆಗೆ ಖರೀದಿಯಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಬೆಂಗಳೂರು ಬುಲ್ಸ್ ತಂಡದ ಮಾಜಿ ಆಟಗಾರ ಪವನ್ ಸೆಹ್ರಾವತ್ ಅವರನ್ನು ಮತ್ತೆ ಬುಲ್ಸ್ ತಂಡಕ್ಕೆ ಸೇರಿಸಿಕೊಳಲ್ಲು ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ ಎನ್ನಲಾಗಿದೆ. ಕಳೆದ ಆವೃತ್ತಿಯಲ್ಲಿ ಅವರು ದಾಖಲೆಯ ಮೊತ್ತಕ್ಕೆ ತಮಿಳ್ ತಂಡದ ಪಾಲಾಗಿದ್ದರು. ಆದರೆ ಆರಂಭಿಕ ಪಂದ್ಯದಲ್ಲೇ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು.
ಇದನ್ನೂ ಓದಿ Asian Games : ವಿವಾದಾತ್ಮಕ ಕಬಡ್ಡಿ ಫೈನಲ್ನಲ್ಲಿ ಕೊನೆಗೂ ಚಿನ್ನ ಗೆದ್ದ ಭಾರತ ತಂಡ
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಪ್ರಸಾರ
ಸೋಮವಾರ ರಾತ್ರಿ ಎ-ಬಿ ಕೆಟಗರಿಯ ಆಟಗಾರ ಹರಾಜು ಮಾತ್ರ ನಡೆಯಲಿದೆ. ಮಂಗಳವಾರ ಬೆಳಗ್ಗೆ 10ರಿಂದ
ಸಿ-ಡಿ ಕೆಟಗರಿಯ ಆಟಗಾರ ಹರಾಜು ನಡೆಯಲಿದೆ. ಹರಾಜು ಪ್ರಕ್ರಿಯೆಯ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಪ್ರಸಾರಗೊಳ್ಳಲಿದೆ.
ಹಳೇಯ ಮಾದರಿಯಲ್ಲಿ ಟೂರ್ನಿ
10ನೇ ಆವೃತ್ತಿಯ ಈ ಲೀಗ್ ಎರಡು ವರ್ಷಗಳ ಬಳಿಕ ಮತ್ತೆ ಹಳೆಯ “ಕ್ಯಾರವಾನ್ ಮಾದರಿ’ಗೆ(carvan format) ಮರಳಿದೆ. ಎಲ್ಲ 12 ಫ್ರಾಂಚೈಸಿಗಳ ತವರು ಕೇಂದ್ರಗಳಲ್ಲಿ ಪಂದ್ಯಗಳನ್ನು ಆಡಲಾಗುವುದು. ಇದರಿಂದ ತವರಿನ ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳ ಪಂದ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕೊರೊನಾ ಕಾರಣದಿಂದ 8ನೇ ಪ್ರೊ ಕಬಡ್ಡಿ ಪಂದ್ಯಾವಳಿ ಸಂಪೂರ್ಣವಾಗಿ ಬೆಂಗಳೂರಿನ “ಬಯೋ ಬಬಲ್’ ಸುರಕ್ಷೆಯಲ್ಲಿ ನಡೆದಿತ್ತು. 9ನೇ ಆವೃತ್ತಿಯ ಪ್ರೊ ಕಬಡ್ಡಿ ಪಂದ್ಯಗಳನ್ನು ಬೆಂಗಳೂರು, ಪುಣೆ, ಹೈದರಾಬಾದ್ ಮತ್ತು ಮುಂಬಯಿಯಲ್ಲಿ ಆಡಲಾಗಿತ್ತು. ಈ ಬಾರಿ ಎಲ್ಲ ತಂಡಗಳ ತವರಿನಲ್ಲಿಯೂ ನಡೆಯಲಿದೆ.