ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವ ಕಪ್ (T20 World Cup)ಗೆ ಕ್ಷಣಗಣನೆ ಆರಂಭವಾಗಿದೆ. ಚುಟುಕು ಮಹಾಸಮರ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದೆ. ಅಕ್ಟೋಬರ್ 16ರಂದು ವಿಶ್ವಕಪ್‌ಗೆ ಅಧಿಕೃತ ಚಾಲನೆ ಸಿಗಲಿದ್ದು, ಅದಕ್ಕೂ ಮುನ್ನ 16 ತಂಡದ ನಾಯಕರು ಒಂದೆಡೆ ಸೇರಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತನ್ನ ಇನ್ಸ್ಟಾಗ್ರಾಮ್ನಲ್ಲಿ ಶನಿವಾರ ಟಿ20 ವಿಶ್ವ ಕಪ್‌ನೊಂದಿಗೆ 16 ತಂಡಗಳ ನಾಯಕರು ಪೋಸ್ ನೀಡಿರುವ ಫೋಟೊವೊಂದನ್ನು ಪೋಸ್ಟ್ ಮಾಡಿದ್ದು “ಸೆಲ್ಫಿ ಟೈಂ” ಎಂಬ ಶೀರ್ಷಿಕೆಯನ್ನು ನೀಡಿದೆ. ಇನ್ನು ಇದೇ ವೇಳೆ 28 ವಸಂತಕ್ಕೆ ಕಾಲಿಟ್ಟಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಎಲ್ಲ ಕ್ರಿಕೆಟ್ ತಂಡದ ನಾಯಕರ ಎದುರು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 23ರಂದು ಮುಖಾಮುಖಿಯಾಗುವ ಮೂಲಕ ತಮ್ಮ ವಿಶ್ವ ಕಪ್ ಅಭಿಯಾನವನ್ನು ಆರಂಭಿಸಲಿವೆ.
ಈ ಬಾರಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದ ಏಳು ನಗರಗಳಲ್ಲಿ ನಡೆಯಲಿದೆ. ಈ ವರ್ಷ ಟೂರ್ನಿ ಮೂರು ಹಂತಗಳಲ್ಲಿ ನಡೆಯಲಿದ್ದು, ಪಂದ್ಯಾವಳಿಯು ಅರ್ಹತಾ ಪಂದ್ಯಗಳೊಂದಿಗೆ ಆರಂಭವಾಗಲಿದೆ. ಅದರಲ್ಲಿ ನಾಲ್ಕು ತಂಡಗಳು ಅಂದರೆ ಎರಡು ಗುಂಪುಗಳಲ್ಲಿ ಅಗ್ರ ಸ್ಥಾನ ಪಡೆದ ಎರಡು ತಂಡಗಳು ಸೂಪರ್ 12 ಹಂತಕ್ಕೆ ಅರ್ಹತೆ ಪಡೆಯುತ್ತವೆ.
ಬಹುಮಾನದ ಮೊತ್ತ
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್ ವಿಜೇತ ತಂಡಕ್ಕೆ ಸಿಗುವ ಮೊತ್ತವನ್ನು ಐಸಿಸಿ ಈಗಾಗಲೇ ಘೋಷಣೆ ಮಾಡಿದೆ. ಅದರಂತೆ ವಿಜೇತ ತಂಡ 1.6 ಮಿಲಿಯನ್ ಯುಎಸ್ ಡಾಲರ್ ನಗದು ಬಹುಮಾನ, ರನ್ನರರ್‌ಅಪ್ ತಂಡಕ್ಕೆ 8 ಲಕ್ಷ ಡಾಲರ್ ಸಿಗಲಿದೆ. ಇನ್ನು ಸೆಮಿಫೈನಲ್ ಆಡುವ ತಂಡಗಳಿಗೆ 4 ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಐಸಿಸಿ ಪ್ರಕಟಣೆ ಹೊರಡಿಸಿದೆ.
ಅರ್ಹತಾ ಪಂದ್ಯದ ತಂಡ
ಗುಂಪು A: ನಮೀಬಿಯಾ, ನೆದರ್ಲೆಂಡ್ಸ್ , ಶ್ರೀಲಂಕಾ, ಯುನೈಟೆಡ್ ಅರಬ್ ಎಮಿರೇಟ್ಸ್,
ಗುಂಪು B: ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್, ಜಿಂಬಾಬ್ವೆ. ಈ ಎರಡು ಗುಂಪುಗಳಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ಸೂಪರ್ 12 ಗೆ ಅರ್ಹತೆ ಪಡೆಯುತ್ತವೆ. ಈ ಹಂತದಲ್ಲಿ, ಎರಡು ಗುಂಪುಗಳ ತಂಡಗಳು ರೌಂಡ್ ರಾಬಿನ್ ಆಡುತ್ತವೆ. ಆ ಬಳಿಕ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುತ್ತವೆ.
ಇದನ್ನೂ ಓದಿ | Team India | ಎಲ್ಲಿದ್ದಿಯಪ್ಪಾ ರೋಹಿತ್, ಕ್ರಿಕೆಟ್ ಅಭಿಮಾನಿಗಳ ಸೋಶಿಯಲ್ ಮೀಡಿಯಾ ಅಭಿಯಾನ!