Site icon Vistara News

Shikhar Dhawan: ಕ್ರಿಕೆಟಿಗ ಧವನ್ ಮಾನಹಾನಿ ಮಾಡದಂತೆ ವಿಚ್ಛೇದಿತ ಪತ್ನಿಗೆ ಕೋರ್ಟ್‌ ಸೂಚನೆ

shikhar dhawan

#image_title

ನವದೆಹಲಿ: ಟೀಮ್​ ಇಂಡಿಯಾ ಕ್ರಿಕೆಟಿಗ ಶಿಖರ್‌ ಧವನ್(Shikhar Dhawan) ಅವರ ಪ್ರತಿಷ್ಠೆಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ನೀಡದಂತೆ ಅವರ ವಿಚ್ಛೇದಿತ ಪತ್ನಿ, ಆಸ್ಟ್ರೇಲಿಯಾ ಪ್ರಜೆ ಆಯೆಷಾ ಮುಖರ್ಜಿ ಅವರಿಗೆ ದೆಹಲಿಯ ಪಟಿಯಾಲ ಹೌಸ್‌ನ ಕೌಟುಂಬಿಕ ನ್ಯಾಯಾಲಯ ತಿಳಿಸಿದೆ.

ಶಿಖರ್​ ಧವನ್​ ಅವರು ತಮ್ಮ ವಿಚ್ಛೇದಿತ ಪತ್ನಿ ಆಯೆಷಾ ಮುಖರ್ಜಿ ಅವರು, ತಮ್ಮ ವೃತ್ತಿಜೀವನವನ್ನು ಹಾಳುಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಐಪಿಎಲ್ ಫ್ರಾಂಚೈಸ್ ‘ಡೆಲ್ಲಿ ಕ್ಯಾಪಿಟಲ್ಸ್’ ಮಾಲೀಕ ಧೀರಜ್ ಮಲ್ಹೋತ್ರಾ ಅವರಿಗೆ ನನ್ನ ವಿರುದ್ಧ ಕೆಲ ಕಟ್ಟ ಸಂದೇಶಗಳನ್ನು ಕಳುಹಿಸಿದ್ದಾರೆ. ಇದು ನನ್ನ ಖ್ಯಾತಿಗೆ ಧಕ್ಕೆ ತರಲೆಂದೇ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಧವನ್ ವಿರುದ್ಧದ ಯಾವುದೇ ಆರೋಪ, ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮ ಸೇರಿ ಇತರ ಯಾವುದೇ ವೇದಿಕೆಗಳಲ್ಲಿ ಮಾನಹಾನಿಕರ ಮತ್ತು ಸುಳ್ಳು ವಿಷಯವನ್ನು ಪ್ರಸಾರ ಮಾಡದಂತೆ ಮುಂದಿನ ಆದೇಶದವರೆಗೆ ಆಯೆಷಾ ಅವರನ್ನು ನಿರ್ಬಂಧಿಸಲಾಗಿದೆ ಎಂದು ನ್ಯಾಯಾಧೀಶ ಹರೀಶ್ ಕುಮಾರ್ ಹೇಳಿದರು.

ಇದನ್ನೂ ಓದಿ PT Usha: ಅಥ್ಲೆಟಿಕ್ಸ್ ಅಕಾಡೆಮಿಯಲ್ಲಿ ಅತಿಕ್ರಮಣ: ಪಿ.ಟಿ.ಉಷಾ ಗಂಭೀರ ಆರೋಪ

ಧವನ್‌ ಮತ್ತು ಆಯೆಷಾ 2021ರ ಸೆ‍ಪ‍್ಟೆಂಬರ್‌ನಲ್ಲಿ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ವಿಚಾರವನ್ನು ಆಯಿಷಾ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದರು. ಇಬ್ಬರಿಗೂ ಒಬ್ಬ ಮಗನಿದ್ದಾನೆ. ಆತ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಆಯೆಷಾ ಅವರ ಜತೆಗಿದ್ದಾನೆ. ವಿಚ್ಛೇದನ ಬಳಿಕವೂ ಧವನ್​ ತಮ್ಮ ಮಗನನ್ನು ಭೇಟಿಯಾಗಲು ಅವಕಾಶ ನೀಡಬೇಕೆಂದು ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಹಲವು ಬಾರಿ ಧವನ್​ ಆಸ್ಟ್ರೇಲಿಯಾಕ್ಕೆ ತೆರಳಿ ತಮ್ಮ ಮಗನನ್ನು ಭೇಟಿಯಾಗಿ ಬಂದಿದ್ದರು.

Exit mobile version