Site icon Vistara News

Cricket Australia: ವಿಶ್ವಕಪ್​ಗೂ ಮುನ್ನ ಆಸೀಸ್​ ಆಟಗಾರರಿಗೆ ನೂತನ ನಿಯಮ ಜಾರಿ; ತಪ್ಪಿದ್ದಲ್ಲಿ ನಿಷೇಧ ಶಿಕ್ಷೆ

Australian cricketer Steve Smith

ಸಿಡ್ನಿ: ಐಸಿಸಿ ಏಕದಿನ ವಿಶ್ವಕಪ್​ಗೆ(ICC World Cup 2023) ಇನ್ನೇನು ಮೂರು ವಾರಗಳು ಮಾತ್ರ ಬಾಕಿ ಉಳಿದಿವೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್​ ಆಟಗಾರರಿಗೆ ಕ್ರಿಕೆಟ್​ ಆಸ್ಟ್ರೇಲಿಯಾ(Cricket Australia) ನಿಯಮವೊಂದನ್ನು ಜಾರಿ ಮಾಡಲು ನಿರ್ಧರಿಸಿದೆ. ಒಂದೊಮ್ಮೆ ಈ ನಿಯಮ ಉಲ್ಲಂಘನೆ ಮಾಡಿದರೆ ಆಟಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದೆ.

ನವೆಂಬರ್ 25, 2014 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನ್ಯೂ ಸೌತ್ ವೇಲ್ಸ್ ವಿರುದ್ಧದ ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ವೆಸ್ಟ್ ಎಂಡ್ ರೆಡ್‌ಬ್ಯಾಕ್ಸ್ ಪರ ಬ್ಯಾಟಿಂಗ್ ಮಾಡುತಿದ್ದ ಆಸ್ಟ್ರೇಲಿಯಾದ ಆಟಗಾರ ಫಿಲಿಪ್ ಹ್ಯೂಸ್(Phillip Hughes) ಬೌನ್ಸರ್‌ನಿಂದ ಕತ್ತಿನ ಹಿಂಭಾಗಕ್ಕೆ ಪೆಟ್ಟು ತಿಂದು ಸಾವನ್ನಪ್ಪಿದ್ದರು. ಇದಾದ ಬಳಿಕ ಆಟಗಾರರು ಕುತ್ತಿಗೆ ರಕ್ಷಕಗಳನ್ನು(Neck Guards) ಧರಿಸಿ ಆಡಬೇಕು ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ಆಟಗಾರರಿಗೆ ಸೂಚನೆ ನೀಡುತ್ತು. ಆದರೆ ಆಟಗಾರರು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅದನ್ನು ಹಾಕಲು ಹಿಂಜರಿದ್ದರು. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ ಕಟ್ಟುನಿಟ್ಟಾಗಿ ಈ ನಿಯಮವನ್ನು ಜಾರಿಗೆ ತಂದಿದೆ. ಐಸಿಸಿ ಕೂಡ ಈ ನಿಯಮ ಜಾರಿಗೆ ತರಲು ಮುಂದಾಗಿತ್ತು.

ಖಡಕ್​ ಎಚ್ಚರಿಕೆ

ಎಲ್ಲ ಆಟಗಾರರು ಕೇವಲ ಅಂತಾರಾಷ್ಟ್ರೀಯ ಪಂದ್ಯ ಮಾತ್ರವಲ್ಲದೆ. ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿಯೂ ಹೆಲ್ಮೆಟ್‌ಗೆ ನೆಕ್ ಗಾರ್ಡ್ ಕಡ್ಡಾಯವಾಗಿ ಧರಿಸಬೇಕು ಎಂದು ಹೊಸ ನಿಯಮಗಳನ್ನು ಕ್ರಿಕೆಟ್​ ಆಸ್ಟ್ರೇಲಿಯಾ ಪ್ರಕಟಿಸಿದೆ. ಒಂದೊಮ್ಮೆ ಆಟಗಾರರು ನಿಯಮಗಳನ್ನು ಅನುಸರಿಸದಿದ್ದರೆ ನಿಷೇಧ ಮತ್ತು ದಂಡದ ಶಿಕ್ಷೆಗೆ ಒಳಗಾಗಬಹುದು ಎಂದು ಖಡಕ್​ ಎಚ್ಚರಿಕೆಯನ್ನು ಸಹ ನೀಡಿದೆ.

ಇದನ್ನೂ ಓದಿ ICC World Cup: ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಪಾಕ್​ ತಂಡದ ಸ್ಟಾರ್​ ವೇಗಿ

ಅಕ್ಟೋಬರ್​ 1ರಿಂದ ಜಾರಿ

ಈ ನಿಯಮ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ತಿಳಿಸಿದೆ. ಆಟಗಾರರ ಸುರಕ್ಷತೆಗಾಗಿ ಈ ಬಾರಿ ಕಟ್ಟುನಿಟ್ಟಿನ ನಿಯಮವನ್ನು ಜಾರಿ ಮಾಡಿದ್ದೇವೆ. ಅದರಂತೆ ನಮ್ಮ ತಂಡ ಆಟಗಾರು ವಿಶ್ವಕಪ್​ನಲ್ಲಿ ವಿಶೇಷ ಹೆಲ್ಮೆಟ್​ ಧರಿಸಿ ಕಣಕ್ಕಿಳಿಯಲಿದ್ದಾರೆ. ಈ ನಿಯಮ ಕೇವಲ ಆಸ್ಟ್ರೇಲಿಯಾ​ ಕ್ರಿಕೆಟ್​ಗೆ ಮಾತ್ರ ಸೀಮಿತವಾಗದಿರಲಿ, ಐಸಿಸಿ ಮುಂದಿನ ದಿನಗಳಲ್ಲಿ ಎಲ್ಲ ತಂಡಗಳಿಗೂ ಈ ನಿಯಮ ಪಾಲನೆಗೆ ತಂದರೆ ಉತ್ತಮ ಎಂದು ಆಸೀಸ್​ ಕ್ರಿಕೆಟ್​ ಮಂಡಳಿ ತಿಳಿಸಿದೆ.


ಭಾರತ ವಿರುದ್ಧ ಏಕದಿನ ಸರಣಿ

ಮುಂದಿನ ವಾರ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಇಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇತ್ತಂಡಗಳ ನಡುವಿನ ಮೊದಲ ಏಕದಿನ ಪಂದ್ಯ ಸೆಪ್ಟೆಂಬರ್​ 22 ರಂದು ಮೊಹಾಲಿಯಲ್ಲಿ ನಡೆಯಲಿದೆ. ಏಕದಿನ ವಿಶ್ವಕಪ್​ ಟೂರ್ನಿ(World Cup 2023) ಆರಂಭಕ್ಕೆ ಒಂದು ವಾರಗಳಿರುವಾಗ ನಡೆಯುವ ಸರಣಿ ಇದಾಗಿರುವುದರಿಂದ ಎರಡು ತಂಡಗಳಿಗೂ ಮಹತ್ವದ್ದಾಗಿದೆ. ಅಲ್ಲದೆ ಆಸ್ಟ್ರೇಲಿಯಾ ಕೂಡ ವಿಶ್ವಕಪ್​ನಲ್ಲಿ ಭಾರತ ವಿರುದ್ಧ ಆಡುವ ಮೂಲಕವೇ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯ ಅಕ್ಟೋಬರ್​ 8ರಂದು ಚೆನ್ನೈಯಲ್ಲಿ ನಡೆಯಲಿದೆ. 

ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ

ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬೋಟ್​, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್​ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್​ ಸ್ಮಿತ್, ಮಿಚೆಲ್ ಸ್ಟಾರ್ಕ್​, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.

Exit mobile version