Site icon Vistara News

World Cup 2023: ಆಸ್ಟ್ರೇಲಿಯಾ ಪ್ರಕಟಿಸಿದ ವಿಶ್ವಕಪ್​ ತಂಡಕ್ಕೆ ವಿರಾಟ್​ ಕೊಹ್ಲಿ ನಾಯಕ

Virat Kohli

ಮುಂಬಯಿ: ವಿಶ್ವಕಪ್ ಟೂರ್ನಿಯ(ODI World Cup 2023) ಸೆಮಿಫೈನಲ್​ ಪಂದ್ಯ ಆರಂಭಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ನ್ಯೂಜಿಲ್ಯಾಂಡ್(India vs New Zealand)​ ಮುಖಾಮುಖಿಯಾಗಲಿದೆ. ನ.16ರಂದು ನಡೆಯುವ ದ್ವಿತೀಯ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ(South Africa vs Australia) ಮತ್ತು ದಕ್ಷಿಣ ಆಫ್ರಿಕಾ ಸೆಣಸಾಡಲಿದೆ. ಇದಕ್ಕೂ ಮುನ್ನ ಕ್ರಿಕೆಟ್​ ಆಸ್ಟ್ರೇಲಿಯಾ(Cricket Australia) ವಿಶ್ವಕಪ್​ ತಂಡವೊಂದನ್ನು ಪ್ರಕಟಿಸಿದೆ.

ಕೊಹ್ಲಿ ನಾಯಕ

ಕ್ರಿಕೆಟ್​ ಆಸ್ಟ್ರೇಲಿಯಾ ಪ್ರಕಟಿಸಿದ ವಿಶ್ವಕಪ್​ ತಂಡಕ್ಕೆ ವಿರಾಟ್​ ಕೊಹ್ಲಿ(Virat Kohli) ನಾಯಕನಾಗಿದ್ದಾರೆ. ಅಚ್ಚರಿ ಎಂದರೆ ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆರಂಭಿಕನಾಗಿ ಕ್ವಿಂಟನ್​ ಡಿ ಕಾಕ್​ ಮತ್ತು ಡೇವಿಡ್​ ವಾರ್ನರ್​ ಕಾಣಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್​ ತಂಡದಿಂದ ಏಕೈಕ ಆಟಗಾರನಾಗಿ ರಚಿನ್​ ರವೀಂದ್ರ ಸ್ಥಾನ ಪಡದಿದ್ದಾರೆ. ಬಹು ಪಾಲು ಭಾರತೀಯರೇ ಕಾಣಿಸಿಕೊಂಡಿದ್ದಾರೆ. ಒಟ್ಟು 4 ಮಂದಿ ಸ್ಥಾನ ಪಡೆದಿದ್ದಾರೆ.

ಕ್ರಿಕೆಟ್​ ಆಸ್ಟ್ರೇಲಿಯಾದ ಆಡುವ ಬಳಗ

ಕ್ವಿಂಟನ್​ ಡಿ ಕಾಕ್​, ಡೇವಿಡ್​ ವಾರ್ನರ್​, ರಚಿನ್​ ರವೀಂದ್ರ, ವಿರಾಟ್​ ಕೊಹ್ಲಿ(ನಾಯಕ), ಐಡೆನ್​ ಮಾರ್ಕ್ರಮ್​, ಗ್ಲೆನ್​ ಮ್ಯಾಕ್ಸ್​ವೆಲ್​, ಮಾರ್ಕೊ ಜಾನ್ಸೆನ್​, ರವೀಂದ್ರ ಜಡೇಜಾ, ಮೊಹಮ್ಮದ್​ ಶಮಿ, ಆ್ಯಡಂ ಜಂಪಾ, ಜಸ್​ಪ್ರೀತ್​ ಬುಮ್ರಾ.

ಇದನ್ನೂ ಓದಿ ವಿಶ್ವಕಪ್ ಸೆಮಿಫೈನಲ್​ ನಿಯಮ ಹೇಗಿದೆ? ಮಳೆ ಬಂದರೆ ಫಲಿತಾಂಶ ನಿರ್ಣಯ ಹೇಗೆ?

ವಿಶ್ವಕಪ್ ಸೆಮಿಫೈನಲ್​ ನಿಯಮ ಹೇಗಿದೆ?

ವಿಶ್ವಕಪ್​ ಲೀಗ್​ ಹಂತದ ಯಾವುದೇ ಪಂದ್ಯಕ್ಕೂ ಮೀಸಲು ದಿನ ಇರಲಿಲ್ಲ. ಲೀಗ್ ಹಂತದ ಪಂದ್ಯಗಳು ಮಳೆಯಿಂದ ರದ್ದುಗೊಂಡರೆ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಕೆಲವು ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸಿದ್ದರೂ, ಯಾವುದೇ ಪಂದ್ಯ ಕೂಡ ರದ್ದುಗೊಂಡಿರಲಿಲ್ಲ. ಇದೀಗ ಸೆಮಿಫೈನಲ್​ಗೆ ಮಳೆ ಬಂದು ನಿಗದಿತ ದಿನದಂದು ಪಂದ್ಯ ನಡೆಯದಿದ್ದರೆ ಚಿಂತಿಸುವ ಅಗತ್ಯವಿಲ್ಲ. ಏಕಂದರೆ ಇಲ್ಲಿ ಮೀಸಲು ದಿನ ಇರಲಿದೆ. ಫೈನಲ್​ಗೂ ಮೀಸಲು ದಿನ ಇದೆ.

ಮೀಸಲು ದಿನ ಮಳೆ ಬಂದರೆ ಫಲಿತಾಂಶ ಹೇಗೆ?

ಒಂದೊಮ್ಮೆ ಸೆಮಿಫೈನಲ್ ಪಂದ್ಯಗಳು ಮಳೆಯಿಂದ ಅಡಚಣೆಯಾಗಿ ಮೀಸಲು ದಿನವೂ ನಡೆಯದಿದ್ದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎಂಬ ಪಶ್ನೆ ಎಲ್ಲ ಕ್ರಿಕೆಟ್​ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ಉತ್ತರ ಇಲ್ಲಿದೆ. ಮೀಸಲು ದಿನವೂ ಪಂದ್ಯ ಸಂಪೂರ್ಣವಾಗಿ ನಡೆಯದಿದ್ದರೆ ಆಗ ಲೀಗ್​ ಹಂತದಲ್ಲಿ ಹೆಚ್ಚು ಅಂಕ ಮತ್ತು ರನ್​ ರೇಟ್ ಹೊಂದಿರುವ ತಂಡ ಫೈನಲ್​ ಪ್ರವೇಶಿಸಲಿದೆ. ಉದಾಹರಣೆ ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡದ ಸೆಮಿ ಫೈನಲ್​ ರದ್ದುಗೊಂಡರೆ ಇದರ ಲಾಭ ಭಾರತಕ್ಕೆ ಲಭಿಸಲಿದೆ. ಏಕೆಂದರೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ. ಹೀಗಾಗಿ ಭಾರತ ಫೈನಲ್​ ಪ್ರವೇಶ ಪಡೆಯುತ್ತದೆ.

ಸಮಾನ ಅಂಕ ಹೊಂದಿದ್ದರೆ?

ಒಂದೊಮ್ಮೆ ಸೆಮಿಫೈನಲ್​ ಮುಖಾಮುಖಿಯಾಗುವ ತಂಡದ ಅಂಕಗಳು ಸಮಾನವಾಗಿದ್ದರೆ, ಆಗ ರನ್​ರೇಟ್​ನಲ್ಲಿ ಮುಂದಿರುವ ತಂಡಕ್ಕೆ ಇದರ ಲಾಭ ಸಿಗಲಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ 14 ಅಂಕ ಹೊಂದಿದೆ. ಆದರೆ ರನ್​ ರೇಟ್​ನಲ್ಲಿ ದಕ್ಷಿಣ ಆಫ್ರಿಕಾ ಮುಂದಿದೆ. ಹೀಗಾಗಿ ಈ ಪಂದ್ಯ ಮಳೆಯಿಂದ ರದ್ದುಗೊಂಡರೆ ದಕ್ಷಿಣ ಆಫ್ರಿಕಾ ನೇರವಾಗಿ ಫೈನಲ್​ ಪ್ರವೇಸಿಸಲಿದೆ.

ಅಂಕಪಟ್ಟಿ ಹೇಗಿದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ99018+2.570
ದಕ್ಷಿಣ ಆಫ್ರಿಕಾ97214+1.261
ಆಸ್ಟ್ರೇಲಿಯಾ​97214+0.841
ನ್ಯೂಜಿಲ್ಯಾಂಡ್95410+0.743
ಪಾಕಿಸ್ತಾನ9458-0.199
ಅಫಘಾನಿಸ್ತಾನ9458-0.336
ಇಂಗ್ಲೆಂಡ್​​ 9366-0.572
ಬಾಂಗ್ಲಾದೇಶ9274-1.087
ಶ್ರೀಲಂಕಾ9274-1.419
ನೆದರ್ಲ್ಯಾಂಡ್ಸ್​​​ 9274-1.825
Exit mobile version