ಕೋಲ್ಕೊತಾ : ಭಾರತ ಮಹಿಳೆಯರ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಜೂಲನ್ ಗೋಸ್ವಾಮಿ ಶನಿವಾರ ತಮ್ಮ ಕೊನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ೨೦ ಸರಣಿಯ ಕೊನೇ ಪಂದ್ಯದ ಮೂಲಕ ಅವರ ವೃತ್ತಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೊದಲು ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು. ಜತೆಗೆ ಭಾರತ ತಂಡದ ಆಟಗಾರ್ತಿಯರು ಭಾವನಾತ್ಮಕ ವಿದಾಯವನ್ನೂ ಹೇಳಿದರು. ಹಿರಿಯ ಆಟಗಾರ್ತಿಯ ಕ್ರಿಕೆಟ್ ಸೇವೆಯನ್ನು ಪರಿಗಣಿಸಿ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಕೋಲ್ಕೊತಾದ ಐತಿಹಾಸಿಕ ಈಡನ್‌ಗಾರ್ಡನ್ಸ್ ಸ್ಟೇಡಿಯಮ್‌ನ ಗ್ಯಾಲರಿಯೊಂದಕ್ಕೆ ಜೂಲನ್ ಅವರ ಹೆಸರು ನಾಮಕರಣ ಮಾಡುವುದಾಗಿ ಪ್ರಕಟಿಸಿದೆ.
ಜೂಲನ್ ಗೋಸ್ವಾಮಿ ಅವರು ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ. ಅವರ ಭಾರತ ಮಹಿಳೆಯರ ಕ್ರಿಕೆಟ್ ತಂಡದ ಪರ ೨೦ ವರ್ಷ ಆಡಿದ್ದಾರೆ. ಈ ಎಲ್ಲ ಸಾಧನೆಯನ್ನು ಪರಿಗಣಿಸಿ ಅವರ ಹೆಸರನ್ನು ಈಡನ್ ಗಾರ್ಡನ್ಸ್‌ನ ಪ್ರೇಕ್ಷಕರ ಗ್ಯಾಲರಿಗೆ ಇಡಲು ನಿರ್ಧರಿಸಿದೆ.
“ನಾನು ಈಡನ್ ಗಾರ್ಡನ್ಸ್‌ನ ಸ್ಟಾಂಡ್ ಒಂದಕ್ಕೆ ಜೂಲನ್ ಅವರ ಹೆಸರಿಡಲು ನಿರ್ಧರಿಸಿದ್ದೇವೆ. ಅವರೊಬ್ಬರು ವಿಶೇಷ ಕ್ರಿಕೆಟರ್. ಅನುಮತಿಗಾಗಿ ನಾನು ಸೇನೆಯ ಜತೆ ಮಾತುಕತೆ ನಡೆಸಲಿದ್ದೇವೆ. ಅದೇ ರೀತಿ ನಮ್ಮ ವಾರ್ಷಿಕೋತ್ಸವದ ದಿನ ಜೂಲನ್ ಅವರಿಗೆ ಸನ್ಮಾನ ಮಾಡಲಾಗುವುದು,” ಎಂಬುದಾಗಿ ಸಿಎಬಿ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಅವರು ಹೇಳಿದ್ದಾರೆ.
ಜೂಲನ್ ಗೋಸ್ವಾಮಿ ಅವರ ಕೊನೇ ಪಂದ್ಯವನ್ನು ಸಿಎಬಿ ನಗರದ ಚಿತ್ರಮಂದಿರವೊಂದರಲ್ಲಿ ನೇರ ಪ್ರದರ್ಶನ ಮಾಡಿದೆ.
ಇದನ್ನೂ ಓದಿ | Jhulan Goswami | ಜೂಲನ್‌ಗೆ ಇಂದು ಕೊನೇ ಅಂತಾರಾಷ್ಟ್ರೀಯ ಪಂದ್ಯ, ಇಲ್ಲಿವೆ ಕೆಲವು ದಾಖಲೆಗಳು