ರಾಂಚಿ : ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ (INDvsNZ T20) ಮೊದಲ ಪಂದ್ಯದಲ್ಲಿ ಭಾರತ ತಂಡ 21 ರನ್ಗಳ ಸೋಲಿಗೆ ಒಳಗಾಗಿದೆ. ಭಾರತ ತಂಡದ ಬ್ಯಾಟರ್ಗಳ ವೈಫಲ್ಯವೇ ಸೋಲಿಗೆ ಕಾರಣ. ಆದರೆ, ಟೀಮ್ ಇಂಡಿಯಾದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಮಾತ್ರ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದರು. ಅದರಲ್ಲೂ ಅವರು ಅದ್ಭುತ ರಿಟರ್ನ್ ಕ್ಯಾಚ್ ಹಿಡಿಯುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಶಹಬ್ಬಾಸ್ ಗಿಟ್ಟಿಸಿಕೊಂಡರು.
ನ್ಯೂಜಿಲ್ಯಾಂಡ್ ಇನಿಂಗ್ಸ್ನ ಐದನೇ ಓವರ್ ಎಸೆದಿದ್ದು ವಾಷಿಂಗ್ಟನ್ ಸುಂದರ್. ಆ ಓವರ್ನ ಎರಡನೇ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ಫಿನ್ ಅಲೆನ್ ವಿಕೆಟ್ ಕಬಳಿಸಿದ್ದರು. ಅಂತೆಯೇ ಕೊನೇ ಎಸೆತದಲ್ಲಿ ಕಿವೀಸ್ ಬ್ಯಾಟರ್ ಚಾಪ್ಮನ್ ನೀಡಿದ ರಿಟರ್ನ್ ಕ್ಯಾಚ್ ಅನ್ನು ಡೈವ್ ಮಾಡಿ ಹಿಡಿದರು. ಇದು ಅವರ ಜೀವನ ಶ್ರೇಷ್ಠ ಕ್ಯಾಚ್ ಎನಿಸಿಕೊಂಡಿದೆ.
ಇದನ್ನೂ ಓದಿ | INDvsNZ T20 : ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 21 ರನ್ ಸೋಲು, ಸರಣಿಯಲ್ಲಿ 0-1 ಹಿನ್ನಡೆ
ಬ್ಯಾಟಿಂಗ್ನಲ್ಲಿಯೂ ವಾಷಿಂಗ್ಟನ್ ಸುಂದರ್ ಅಬ್ಬರಿಸಿದ್ದಾರೆ. 28 ಎಸೆತಗಳಲ್ಲಿ 50 ರನ್ ಬಾರಿಸಿ ಕೊನೇ ತನಕವೂ ಹೋರಾಟ ನಡೆಸಿದರು. ಬೌಲಿಂಗ್ನಲ್ಲಿ 22 ರನ್ಗಳಿಗೆ 2 ವಿಕೆಟ್ ಪಡೆದಿದ್ದ ವಾಷಿಂಗ್ಟನ್ ಬ್ಯಾಟಿಂಗ್ನಲ್ಲೂ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದರು.