Site icon Vistara News

Team India | ಕೆ ಎಲ್‌ ರಾಹುಲ್‌ ವಿಶ್ವ ಕ್ರಿಕೆಟ್‌ನ ಮಹಾನ್‌ ಮೋಸಗಾರ ಎಂದ ಕ್ರಿಕೆಟ್‌ ಅಭಿಮಾನಿಗಳು

IND vs AUS

ಅಡಿಲೇಡ್ : ಭಾರತ ತಂಡ (Team India) ಹಾಲಿ ವಿಶ್ವ ಕಪ್‌ನ ಚಾಂಪಿಯನ್‌ ರೇಸ್‌ನಿಂದ ಗುರುವಾರ ಹೊರಕ್ಕೆ ಬಿದ್ದಿದೆ. ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ 10 ವಿಕೆಟ್‌ ಹೀನಾಯ ಸೋಲು ಕಾಣುವುದರೊಂದಿಗೆ ಭಾರತ ತಂಡದ ಕಪ್‌ ಗೆಲ್ಲುವ ಆಸೆ ಕಮರಿ ಹೋಗಿದೆ. ಭಾರತ ತಂಡ ಪರಾಜಯಗೊಳ್ಳುತ್ತಿದ್ದಂತೆ ಅಭಿಮಾನಿಗಳ ಆಕ್ರೋಶವೂ ಏಕಾಏಕಿ ಹೆಚ್ಚಾಗಿದ್ದು, ಟೀಮ್‌ ಇಂಡಿಯಾದ ಸದಸ್ಯರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಟೀಮ್‌ ಇಂಡಿಯಾದ ಮ್ಯಾನೇಜ್ಮೆಂಟ್‌ ವಿರುದ್ಧದ ಬೇಸರ ವ್ಯಕ್ತಪಡಿಸಿದ್ದಾರೆ. ಪ್ಲೇಯಿಂಗ್‌ ಇಲೆವೆನ್‌ ಆಯ್ಕೆಯೂ ಸರಿಯಾಗಿರಲಿಲ್ಲ ಎಂದೆಲ್ಲ ದೂರುತ್ತಿದ್ದಾರೆ. ಏತನ್ಮಧ್ಯೆ, ಟೀಮ್‌ ಇಂಡಿಯಾದಲ್ಲಿ ಅತಿ ಹೆಚ್ಚು ದೂಷಣೆಗೆ ಒಳಗಾಗಿರುವ ಆಟಗಾರ ಎಂದರೆ ಆರಂಭಿಕ ಬ್ಯಾಟರ್‌ ಕೆ ಎಲ್‌ ರಾಹುಲ್‌. ಅವರನ್ನು ಅಭಿಮಾನಿಗಳು ವಿಶ್ವ ಕ್ರಿಕೆಟ್‌ನ ಮಹಾನ್‌ ಮೋಸಗಾರ ಎಂದು ಜರೆದಿದ್ದಾರೆ.

ಕೆ. ಎಲ್‌ ರಾಹುಲ್‌ ಅವರು ಹಾಲಿ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ ಎಂಬುದು ಅವರ ಅಭಿಪ್ರಾಯವಾಗಿದೆ. ಅದರಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯ ಹಾಗೂ ಸೆಮಿ ಫೈನಲ್‌ನಂಥ ಪ್ರಮುಖ ಪಂದ್ಯಗಳಲ್ಲಿ ಅವರ ಪ್ರದರ್ಶನ ಕಳಪೆಯಾಗಿತ್ತು ಎಂದು ಹೇಳುತ್ತಿದ್ದಾರೆ. ಯಾಕೆಂದರೆ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ ಐದು ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದರು. ಹೀಗಾಗಿ ಭಾರತ ತಂಡದ ಬ್ಯಾಟಿಂಗ್‌ ಆರಂಭ ಉತ್ತಮವಾಗಿ ಸಾಗಲಿಲ್ಲ. ಪವರ್‌ ಪ್ಲೇ ಅವಧಿಯಲ್ಲಿ ತಂಡ ಕಡಿಮೆ ಮೊತ್ತ ಪೇರಿಸುವಂತಾಗಿತ್ತು. ಬೃಹತ್‌ ಮೊತ್ತ ಪೇರಿಸಲು ಅವಕಾಶ ಇದ್ದ ಅಡಿಲೇಡ್ ಮೈದಾನದಲ್ಲಿ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಎದುರಾಳಿ ಇಂಗ್ಲೆಂಡ್‌ ತಂಡಕ್ಕೆ ಒಡ್ಡಲು ಮಾತ್ರ ಸಾಧ್ಯವಾಗಿತ್ತು. ಈ ಎಲ್ಲ ಕಾರಣಗಳಿಂದ ಭಾರತ ತಂಡ ಸೋಲು ಕಂಡಿದೆ ಎಂಬುದು ರಾಹುಲ್ ಅವರನ್ನು ದೂರುವವರ ಅಭಿಪ್ರಾಯವಾಗಿದೆ.

ಐಪಿಎಲ್‌ನಲ್ಲಿ ಉತ್ತಮವಾಗಿ ಬ್ಯಾಟ್‌ ಮಾಡುವ ಕೆ. ಎಲ್‌ ರಾಹುಲ್‌ ಭಾರತ ತಂಡದಲ್ಲಿ ಸದಾ ವೈಫಲ್ಯದ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್‌ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡುವ ಮೂಲಕ ಟೀಮ್‌ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವರು ತಂಡದ ಅಗತ್ಯಕ್ಕೆ ತಕ್ಕ ಹಾಗೆ ಆಡುವುದಿಲ್ಲ ಎಂಬುದು ಅವರೆಲ್ಲರ ಅಭಿಪ್ರಾಯ.

ಟೀಕೆಗಳ ನಡುವೆಯೂ ಕೋಚ್‌ ರಾಹುಲ್‌ ದ್ರಾವಿಡ್ ಹಾಗೂ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ಕೆ. ಎಲ್‌ ರಾಹುಲ್ ಅವರ ಸಾಮರ್ಥ್ಯವನ್ನು ಹೊಗಳಿದ್ದಾರೆ. ಅವರೊಬ್ಬ ಉತ್ತಮ ಬ್ಯಾಟರ್‌. ಹಾಗೆಂದು ಎಲ್ಲ ಪಂದ್ಯಗಳಲ್ಲಿ ಅವರು ಆಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ರಾಹುಲ್ ಅವರು ಹಾಲಿ ವಿಶ್ವ ಕಪ್‌ನಲ್ಲಿ ಎರಡು ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ| Boycott IPL | ವಿಶ್ವ ಕಪ್‌ ಸೆಮಿ ಫೈನಲ್‌ ಸೋಲಿನ ಬಳಿಕ ಬಾಯ್ಕಾಟ್‌ ಐಪಿಎಲ್‌ ಟ್ರೆಂಡಿಂಗ್‌ ಜೋರು

Exit mobile version