ಹೋಬರ್ಟ್: ಟಿ20 ವಿಶ್ವಕಪ್ನ ಜಿಂಬಾಬ್ವೆ ವಿರುದ್ಧದ ಅರ್ಹತಾ ಸುತ್ತಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ದೈತ್ಯ ರೋವ್ಮನ್ ಪೊವೆಲ್ (Rovman Powell) ಸಿಡಿಸಿದ ಸಿಕ್ಸರ್ಗೆ ಎಲ್ಲರು ಬೆಚ್ಚಿ ಬಿದ್ದಿದ್ದಾರೆ.
ಬೆಲ್ಲೆರಿವ್ ಓವಲ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್, ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಸವಾಲೊಡ್ಡಿತು. ಸಾಧಾರಣ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ 18.2 ಓವರ್ಗಳಲ್ಲಿ 122 ರನ್ಗಳಿಗೆ ಸರ್ವಪತನ ಕಂಡಿತು. ವಿಂಡೀಸ್ 31 ರನ್‌ಗಳ ಅಂತರದಿಂದ ಈ ಪಂದ್ಯವನ್ನು ಜಯಿಸಿ ಸೂಪರ್-12 ಹಂತಕ್ಕೇರುವ ಆಸೆಯನ್ನು ಜೀವಂತವಿರಿಸಿದೆ.
ಮೊದಲ ಇನಿಂಗ್ಸ್ನಲ್ಲಿ ಮುಜರಬಾನಿ ಎಸೆದ 20ನೇ ಓವರ್ನ 3ನೇ ಎಸೆತದಲ್ಲಿ ರೋವ್ಮನ್ ಪೊವೆಲ್ ಬರೋಬ್ಬರಿ 104 ಮೀ. ದೂರ ಸಿಕ್ಸರ್ ಸಿಡಿಸಿ ಚೆಂಡನ್ನು ಮೈದಾನದಿಂದ ಹೊರಗಟ್ಟಿದರು. ಈ ಸಿಕ್ಸರ್ ಕಂಡು ಕೇವಲ ಪ್ರೇಕ್ಷಕರು ಮಾತ್ರವಲ್ಲದೆ ನಾನ್ ಸ್ಟ್ರೈಕ್ನಲ್ಲಿದ ಅಕಿಲ್ ಹೊಸೈನ್ ಕೂಡ ತಲೆ ಮೇಲೆ ಕೈ ಇಟ್ಟು ಒಂದು ಕ್ಷಣ ದಂಗಾದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸ್ಕೋರ್ ವಿವರ:
ವೆಸ್ಟ್ ಇಂಡೀಸ್: 7 ವಿಕೆಟಿಗೆ 137 (ಜಾನ್ಸನ್ ಚಾರ್ಲ್ಸ್ 45, ರೋವ್‌ಮನ್ ಪೊವೆಲ್ 28, ಸಿಕಂದರ್ ರಾಜಾ 19ಕ್ಕೆ 3).
ಜಿಂಬಾಬ್ವೆ: 18.2 ಓವರ್ಗಳಲ್ಲಿ 122ಕ್ಕೆ ಆಲೌಟ್ ( ವೆಸ್ಲಿ ಮಾಧೆವೆರೆ 27, ಲ್ಯೂಕ್ ಜೊಂಗ್ವೆ 29, ಅಲ್ಜಾರಿ ಜೋಸೆಫ್ 16ಕ್ಕೆ 4 ಜಾಸನ್ ಹೋಲ್ಡರ್ 12ಕ್ಕೆ 3). ಪಂದ್ಯಶ್ರೇಷ್ಠ: ಅಲ್ಜಾರಿ ಜೋಸೆಫ್
ಇದನ್ನೂ ಓದಿ | T20 World Cup | ವಿಂಡೀಸ್ ಎದುರು ಮಂಡಿಯೂರಿದ ಜಿಂಬಾಬ್ವೆ