Site icon Vistara News

ಶತಕ ಬಾರಿಸಿ ತಂಡವನ್ನು ಕಾಪಾಡಿದ ರಾಹುಲ್​ಗೆ ಕ್ರಿಕೆಟ್​ ದೇವರು ಸಚಿನ್​ ಮೆಚ್ಚುಗೆ

KL Rahul celebrates a quite classy eighth Test ton

ಮುಂಬಯಿ: ದಕ್ಷಿಣ ಆಫ್ರಿಕಾ ವಿರುದ್ಧ ಸಾಗುತ್ತಿರುವ ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ, ಏಕಾಂಗಿಯಾಗಿ ಹೋರಾಟ ನಡೆಸಿ ಶತಕ ಬಾರಿಸುವ ಮೂಲಕ ನೆರವಾದ ಕೆ.ಎಲ್​ ರಾಹುಲ್(KL Rahul)​ ಅವರ ಪ್ರದರ್ಶನಕ್ಕೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್(Sachin Tendulkar)​ ಮೆಚ್ಚುಗೆ ಸೂಚಿಸಿದ್ದಾರೆ.

ರಾಹುಲ್​ ಅವರು ಶತಕ ಬಾರಿಸಿದ ತಕ್ಷಣ ಸಚಿನ್​ ತಮ್ಮ ಸಾಮಾಜಿಕ ಜಾಲತಾಣವಾದ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಮೆಚ್ಚುಗೆಯ ಸಂದೇಶವನ್ನು ಹಂಚಿಕೊಂಡಿದ್ದಾರೆ. “ನಿಮ್ಮ ಆಲೋಚನಾ ಸ್ಪಷ್ಟತೆ ನನ್ನನ್ನು ಪ್ರಭಾವಿತಗೊಳಿಸಿತು. ನಿನ್ನೆ ನಿಮ್ಮ ಬ್ಯಾಟಿಂಗ್​ ಶೈಲಿಯನ್ನು ನೋಡುವಾಗಲೇ ನಾನು ನಿಮ್ಮ ನಿಖರ ಗುರಿ ಏನೆಂಬುದನ್ನು ಮನಗಂಡೆ. ಒಬ್ಬ ಬ್ಯಾಟರ್​ ಸರಿಯಾಗಿ ಯೋಚಿಸಿದಾಗ ಏನು ಬೇಕಾದರು ಸಂಭವಿಸುತ್ತದೆ. ಅದಕ್ಕೆ ನಿಮ್ಮ ಈ ಬ್ಯಾಟಿಂಗ್​ ವೈಭವವೇ ಸಾಕ್ಷಿ. ಈ ಶತಕದಿಂದಾಗಿ ಇಂದು ಭಾರತ 245ರನ್​ ಗಳಿಸಿದೆ. ನಿಜಕ್ಕೂ ಸಂತಸವಾಗುತ್ತಿದೆ” ಎಂದು ಸಚಿನ್​ ಅವರು ರಾಹುಲ್​ ಬ್ಯಾಟಿಂಗ್​ ಕೊಂಡಾಡಿದ್ದಾರೆ.

8 ವಿಕೆಟ್​ ಕಳೆದುಕೊಂಡು 208 ಗಳಿಸಿದ್ದಲ್ಲಿಂದ ಎರಡನೇ ದಿನದಾಟ ಆರಂಭಿಸಿದ ಭಾರತ 245 ರನ್​ ಗಳಿಸಿ ಆಲೌಟ್​ ಆಯಿತು. 70 ರನ್​ ಗಳಿಸಿದ್ದ ರಾಹುಲ್(KL Rahul)​ ದ್ವಿತೀಯ ದಿನದಾಟದಲ್ಲಿ 31 ರನ್​ ಬಾರಿಸಿ ಶತಕ ಪೂರ್ತಿಗೊಳಿಸಿದರು.

ಇದನ್ನೂ ಓದಿ IND vs SA: ರಾಹುಲ್ ಅಮೋಘ​ ಶತಕ; 245 ರನ್​ ಗಳಿಸಿದ ಭಾರತ

ದ್ವಿತೀಯ ದಿನದಾಟದಲ್ಲಿ ಬಿರುಸಿನ ಆಟಕ್ಕೆ ಒತ್ತು ಕೊಟ್ಟ ರಾಹುಲ್​ ಶತತ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿದರು. ದ್ವಿತೀಯ ದಿನದಾಟದಲ್ಲಿ 2 ಸಿಕ್ಸರ್​ ಮತ್ತು 4 ಬೌಂಡರಿ ಬಾರಿಸಿದರು. ಅದರಲ್ಲೂ ಸಿಕ್ಸರ್​ ಮೂಲಕವೇ ಶತಕ ಪೂರ್ತಿಗೊಳಿಸಿದರು. ಇದು ಅವರ 8ನೇ ಟೆಸ್ಟ್​ ಶತಕವಾಗಿದೆ. ಅಲ್ಲದೆ ಸೆಂಚುರಿಯನ್​ನಲ್ಲಿ 2ನೇ ಶತಕ. 2021ರಲ್ಲಿಯೂ ರಾಹುಲ್​ ಇಲ್ಲಿ ಶತಕ ಬಾರಿಸಿದ್ದರು. ಆದರೆ ಆ ಪಂದ್ಯದಲ್ಲಿ ಆರಂಭಿಕನಾಗಿ ಅವರು ಈ ಸಾಧನೆ ಮಾಡಿದ್ದರು. 123 ರನ್​ ಬಾರಿಸಿದ್ದರು.

ಸೆಂಚುರಿಯನ್​ನಲ್ಲಿ ಪ್ರವಾಸಿ ತಂಡದ ಆಟಗಾರನೊಬ್ಬ ಸತತವಾಗಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ರಾಹುಲ್​ ಪಾತ್ರವಾಗಿದ್ದಾರೆ. ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಒಟ್ಟು 14 ಬೌಂಡರಿ ಮತ್ತು 4 ಸೊಗಸಾದ ಸಿಕ್ಸರ್​ ನೆರವಿನಿಂದ 101 ರನ್​ ಗಳಿಸಿ ಬರ್ಗರ್​ಗೆ ವಿಕೆಟ್​ ಒಪ್ಪಿಸಿದರು. ಅವರು ನಿಂತು ಆಡದೇ ಹೋಗಿದ್ದರೆ ಭಾರತ 150 ರನ್​ಗಳಿಸುವುದು ಕೂಡ ಕಷ್ಟವಾಗುತ್ತಿತ್ತು. ತಂಡದ ಬಹುಪಾಲು ಮೊತ್ತ ರಾಹುಲ್​ ಅವರದ್ದೇ ಆಗಿತ್ತು.

Exit mobile version