ಬೆಂಗಳೂರು: ಭಾರತದಲ್ಲಿ ಕ್ರಿಕೆಟ್ ಆಟ ಎಂದರೆ ಎಲ್ಲರಿಗೂ ಪಂಚಪ್ರಾಣ. ಭಾರತೀಯರಿಗೆ ಕ್ರಿಕೆಟ್ ಆಡಲು ಸೂಕ್ತ ಮೈದಾನವೇ ಬೇಕಿಂದಿಲ್ಲ ಸಣ್ಣ ಒಂದು ಗಲ್ಲಿ ಸಿಕ್ಕರೂ ಸಾಕು ಅಲ್ಲೇ ಕ್ರಿಕೆಟ್ ಪಂದ್ಯ ಆಡುತ್ತಾರೆ. ಮನಸ್ಸಿದ್ದರೆ ಎಂತಹ ಸ್ಥಳದಲ್ಲಿಯೂ ಕ್ರಿಕೆಟ್ ಆಡಬಹುದು ಎಂಬುದಕ್ಕೆ ಜರ್ಮನ್ ಕಾನ್ಸುಲೇಟ್ ಅಧಿಕಾರಿಯೊಬ್ಬರು ಊಟದ ಬಿಡುವಿನಲ್ಲಿ ಭಾರತೀಯ ಸಹೋದ್ಯೋಗಿಗಳೊಂದಿಗೆ ಆಫೀಸ್ನಲ್ಲಿಯೇ ಕ್ರಿಕೆಟ್ ಆಡಿ ಇದೀಗ ಎಲ್ಲರ ಮನಗೆದ್ದಿದ್ದಾರೆ. ಈ ವಿಡಿಯೊ ಎಲ್ಲಡೆ ವೈರಲ್ ಆಗಿದೆ.
ಬೆಂಗಳೂರಿನಲ್ಲಿರುವ ಕೇರಳ ಮತ್ತು ಕರ್ನಾಟಕದ ಜರ್ಮನ್ ಕಾನ್ಸುಲೇಟ್ ಅಚಿಮ್ ಬುರ್ಕಾರ್ಟ್ ತಮ್ಮ ಭಾರತೀಯ ಸಹೋದ್ಯೋಗಳೊಂದಿಗೆ ಊಟದ ವಿರಾಮದಲ್ಲಿ ಕಚೇರಿಯೊಳಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ನಡೆಸಿದ್ದಾರೆ. ಈ ವಿಡಿಯೊವನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು “ಇದೊಂದು ಅದ್ಭುತ ಸ್ನೇಹ ಬಾಂದವ್ಯ. ನನ್ನ ದೇಶದ ಸಿಬ್ಬಂದಿಗೆ ಕ್ರಿಕೆಟ್ ಕಲಿಸಿದ ಭಾರತೀಯ ಉದ್ಯಮಿಗಳಿಗೆ ಧನ್ಯವಾದ. ಈ ಅಭ್ಯಾಸ ಹೀಗೆಯೇ ಮುಂದುವರಿಸುತ್ತೇವೆ ” ಎಂದು ಹೇಳಿದ್ದಾರೆ.
ಈ ವಿಡಿಯೊ ಕಂಡ ಅನೇಕ ಜರ್ಮನ್ ಪ್ರಜೆಗಳು ಮುಂದಿನ ದಿನದಲ್ಲಿ ಭಾರತ ವಿರುದ್ಧ ಜರ್ಮನಿಯೂ ಕ್ರಿಕೆಟ್ ಪಂದ್ಯ ಆಡುವ ಸಾಧ್ಯತೆ ಇದೆ ಎಂದು ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ | IND VS BANGLA | ಬಾಂಗ್ಲಾ ಸರಣಿಗೆ ಭಾರತ ತಂಡ ಪ್ರಕಟ; ರವೀಂದ್ರ ಜಡೇಜಾ ಅಲಭ್ಯ