Site icon Vistara News

Cricket League | ಆರ್‌ಸಿಬಿಯಲ್ಲಿ ಇದ್ದುಕೊಂಡೇ ಚೆನ್ನೈ ಸೇರಿದ ಫಾಫ್‌ ಡು ಪ್ಲೆಸಿಸ್‌, ಇದು ಸರಿಯೇ?

Cricket league

ಕೇಪ್‌ಟೌನ್‌ : ರಶೀದ್‌ ಖಾನ್‌ ಗುಜರಾತ್‌ ಟೈಟನ್ಸ್‌ ತಂಡದ ಅಟಗಾರ. ಫಾಡ್‌ ಡು ಪ್ಲೆಸಿಸ್‌ ಆರ್‌ಸಿಬಿ ತಂಡದ ನಾಯಕ. ಅದೂ ಅಲ್ಲದೆ, ಐಪಿಎಲ್‌ ಹರಾಜು ಇನ್ನೂ ನಡೆದಿಲ್ಲ. ಹೀಗಿರುವಾಗ ಅವರಿಬ್ಬರು ತಂಡಗಳನ್ನು ಬದಲಾಯಿಸಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಆದರೆ, ಇದು ಸತ್ಯ. ಅವರಿಬ್ಬರೂ ತಂಡಗಳನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ, ಐಪಿಎಲ್‌ನಲ್ಲಿ ಅಲ್ಲ. ಮುಂದಿನ ವರ್ಷ ನಡೆಯಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಲೀಗ್‌ನಲ್ಲಿ. (Cricket League)

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆ ಹೊಸದಾಗಿ ಕ್ರಿಕೆಟ್‌ ಲೀಗ್‌ ಒಂದನ್ನು ಆರಂಭಿಸಲಿದ್ದು, ಅದರ ಎಲ್ಲ ಆರು ತಂಡಗಳನ್ನು ಐಪಿಎಲ್‌ ಫ್ರಾಂಚೈಸಿಗಳೇ ಖರೀದಿಸಿವೆ. ಆ ಫ್ರಾಂಚೈಸಿಗಳು ಪ್ರಮುಖ ಕೆಲವು ಆಟಗಾರರನ್ನು ತಮ್ಮ ತಮ್ಮ ತಂಡಗಳಿಗೆ ಸೇರಿಸಿಕೊಂಡಿವೆ. ಆ ಪಟ್ಟಿಯಲ್ಲಿ ಐಪಿಎಲ್‌ನಲ್ಲಿ ಆಡುವ ಸ್ಟಾರ್ ಆಟಗಾರರು ಇದ್ದಾರೆ. ಆದರೆ ಅಲ್ಲಿ ಅವರು ಬೇರೆಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಇಲ್ಲಿ ಆರ್‌ಸಿಬಿ ಪರ ಆಡುವ ಫಾಫ್‌ ಡು ಪ್ಲೆಸಿಸ್‌ ಅವರು ಅಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಲೀಕತ್ವದದ ಜೊಹಾನ್ಸ್‌ ಬರ್ಗ್‌ ತಂಡದ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.

ಇನ್ನು ಗುಜರಾತ್‌ ಟೈಟನ್ಸ್‌ ಪರ ಆಡುತ್ತಿರುವ ಆಫ್ಘನ್‌ ಸ್ಪಿನ್ನರ್‌ ರಶೀದ್ ಖಾನ್‌, ಮುಂಬಯಿ ಇಂಡಿಯನ್ಸ್‌ ಮಾಲೀಕತ್ವದ ಮುಂಬಯಿ ಇಂಡಿಯನ್ಸ್‌ ಕೇಪ್‌ಟೌನ್‌ ತಂಡದ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇವರ ಜತೆಗೆ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಪರ ಆಡುವ ಲಿಯಾಮ್‌ ಲಿವಿಂಗ್‌ಸ್ಟನ್‌ ಹಾಗೂ ಕಗಿಸೊ ರಬಾಡ ಕೂಡ ಒಪ್ಪಂದ ಮಾಡಿಕೊಂಡಿದ್ದಾರೆ. ಡೀವಾಲ್ಡ್‌ ಬ್ರೇವಿಸ್‌ ಹಾಗೂ ಇಂಗ್ಲೆಂಡ್‌ ಆಲ್‌ರೌಂಡರ್‌ ಸ್ಯಾಮ್‌ ಕರ್ರನ್‌ ಕೂಡ ಮುಂಬಯಿ ಪಾಲಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ತನ್ನ ಫ್ರಾಂಚೈಸಿಗೆ ವೇಗದ ಬೌಲರ್‌ ಆನ್ರಿಚ್ ನೋರ್ಜೆ ಅವರನ್ನು ಸೇರಿಸಿಕೊಂಡಿದ್ದಾರೆ. ಅಂತಯೇ ಸನ್‌ ರೈಸರ್ಸ್ ಹೈದರಾಬಾದ್‌ ತಂಡ ಏಡನ್‌ ಮಾರ್ಕ್ರಮ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ರಾಜಸ್ಥಾನ್‌ ರಾಯಲ್ಸ್‌ ತಂಡ ಸ್ಟಾರ್ ಬ್ಯಾಟರ್‌ ಜೋಸ್‌ ಬಟ್ಲರ್‌ ಅವರನ್ನು ತನ್ನ ತೆಕ್ಕೆ ಸೇರಿಸಿಕೊಂಡಿದ್ದರೆ, ಕ್ವಿಂಟನ್‌ ಡಿ ಕಾಕ್‌ ಅವರು ಲಖನೌ ಸೂಪರ್‌ ಜಯಂಟ್ಸ್‌ ತಂಡ ಸೇರಿಕೊಂಡಿದ್ದಾರೆ.

ಎಲ್ಲ ಫ್ರಾಂಚೈಸಿಗಳಿಗೆ ತಲಾ ೫ ತಂಡಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಉಳಿದ ಆಟಗಾರರನ್ನು ಹರಾಜಿನ ಮೂಲಕ ಖರೀದಿ ಮಾಡಬೇಕು. ಒಟ್ಟಾರೆಯಾಗಿ ತಂಡದಲ್ಲಿ ೧೦ ದಕ್ಷಿಣ ಆಫ್ರಿಕಾದ ಆಟಗಾರರು ಹಾಗೂ ೭ ವಿದೇಶಿ ಆಟಗಾರರು ಇರಬೇಕು. ಆಡುವ ಬಳಗದಲ್ಲಿ ೭ ದಕ್ಷಿಣ ಆಫ್ರಿಕಾದ ಆಟಗಾರರಿಗೆ ಅವಕಾಶ ನೀಡಬೇಕು.

ಇದನ್ನೂ ಓದಿ | Cricket League | ಯುಎಇ ಮತ್ತು ದಕ್ಷಿಣ ಆಫ್ರಿಕಾದ ಲೀಗ್‌ಗಳಲ್ಲಿ ತಂಡ ಖರೀದಿಸಿದ ಮುಂಬಯಿ ಇಂಡಿಯನ್ಸ್

Exit mobile version