Site icon Vistara News

Actor Darshan: ಕೀಳುಮಟ್ಟದ ಟ್ವೀಟ್‌: ʻದರ್ಶನ್ʼ​ ಫ್ಯಾನ್ಸ್ ವಿರುದ್ಧ ದೂರು ನೀಡಲು ಮುಂದಾದ ಅಪ್ಪು ಅಭಿಮಾನಿಗಳು!

Actor Darshan Fans Vulgur Comments

ಬೆಂಗಳೂರು: ಈ ಬಾರಿ ಆರ್‌ಸಿಬಿ ತಂಡ ನಾಲ್ಕು ಪಂದ್ಯಗಳಲ್ಲಿ ಮೂರು ಸೋತು, ಒಂದು ಮ್ಯಾಚ್​ ಗೆದ್ದಿದೆ. ಇದರ ಬೆನ್ನಲ್ಲೇ ದರ್ಶನ್‌ (Actor Darshan) ಕೆಲ ಫ್ಯಾನ್ಸ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ (Ashwini Puneeth Rajkumar) ಅವರನ್ನು ದೂರುತ್ತಿದ್ದಾರೆ. ‘ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್​ಸಿಬಿ ಸೋಲುತ್ತಿದೆ’ ಎಂದು ‘ಗಜಪಡೆ’ (@GAJAPADE6) ಹೆಸರಿನ ಟ್ವಿಟರ್ ಅಕೌಂಟ್ ಕೀಳು ಮಟ್ಟದ ಟ್ವೀಟ್ ಮಾಡಿದೆ. ಆರ್​ಸಿಬಿ ಸೋಲುವುದಕ್ಕೂ, ಅಶ್ವಿನಿ ಪುನೀತ್​ ರಾಜ್​ಕುಮಾರ್​ಗೂ ಏನು ಸಂಬಂಧ? ಎಂದು ಅಪ್ಪು ಫ್ಯಾನ್ಸ್‌ ಆಕ್ರೋಶ ಹೊರಹಾಕುತ್ತಿದ್ದು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಆರ್​ಸಿಬಿ ಅನ್​ಬಾಕ್ಸಿಂಗ್ ಇವೆಂಟ್​ಗೆ ಅಶ್ವಿನಿ ಅವರು ಕೂಡ ತೆರಳಿದ್ದರು. ‘ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದು ಸರಿ ಅಲ್ಲ, ಇದಕ್ಕಾಗಿಯೇ ಆರ್​ಸಿಬಿ ಸೋಲುತ್ತಿದೆ’ ಎಂದು ‘ಗಜಪಡೆ’ (@GAJAPADE6) ಹೆಸರಿನ ಟ್ವಿಟರ್ ಅಕೌಂಟ್ ಮೂಲಕ ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ: Actor Darshan: ಇಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಆಪರೇಷನ್‌!

ಈ ಟ್ವೀಟ್​ನಿಂದ ಪುನೀತ್ ರಾಜಕುಮಾರ್ ಫ್ಯಾನ್ಸ್ ಸದ್ಯ ಕೋಪಗೊಂಡಿದ್ದಾರೆ. ಕಾನೂನು ಕ್ರಮಕ್ಕೆ ಅಪ್ಪು ಅಭಿಮಾನಿಗಳು ಮುಂದಾಗಿದ್ದಾರೆ. ಈಗಾಗಲೇ ಟ್ವಿಟರ್‌ನಲ್ಲಿ ಈ ಬಗೆಗಿನ ಸ್ಕ್ರೀನ್‌ ಶಾಟ್‌ಗಳು ವೈರಲ್‌ ಆಗುತ್ತಿದೆ.

ಆರ್​ಸಿಬಿ ದಾಖಲೆ ಮುರಿದು ಐಪಿಎಲ್​ನ 2ನೇ ಗರಿಷ್ಠ ರನ್​ ರೆಕಾರ್ಡ್ ಮಾಡಿದ ಕೆಕೆಆರ್​

ಬುಧವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ಮೂಲಕ ಸದ್ದು ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ತಂಡ 272 ರನ್​ ಬಾರಿಸಿ ​ಐಪಿಎಲ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ಎರಡನೇ ತಂಡ ಎಂಬ ದಾಖಲೆ ಬರೆದಿದೆ. 2ನೇ ಸ್ಥಾನದಲ್ಲಿದ್ದ ಆರ್​ಸಿಬಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವಾರವಷ್ಟೇ ಸನ್​ರೈಸರ್ಸ್​ ಹೈದರಾಬಾದ್​ ತಂಡ ಮುಂಬೈ ವಿರುದ್ಧ 277 ರನ್​ ಬಾರಿಸಿ ಐಪಿಎಲ್​ನಲ್ಲಿ ಅತ್ಯಧಿಕ ರನ್​ ಗಳಿಸಿದ ದಾಖಲೆ ನಿರ್ಮಿಸಿತ್ತು. ಇದೀಗ ಒಂದೇ ವಾರದ ಅಂತರದಲ್ಲಿ ಈ ಟೂರ್ನಿಯಲ್ಲಿ ಮತ್ತೊಂದು ದ್ವಿತೀಯ ಗರಿಷ್ಠ ಮೊತ್ತ ದಾಖಲಾಯಿತು.

Exit mobile version