Site icon Vistara News

World Cup: ವಿಶ್ವ ಕಪ್​ ಟಿಕೆಟ್​ಗಳ ಖರೀದಿ ಹೇಗೆ? ಟಿಕೆಟ್​ ದರ ಎಷ್ಟು? ಇಲ್ಲಿದೆ ಎಲ್ಲ ವಿವರ

Worlc Cup

ಮುಂಬಯಿ : ಐಸಿಸಿ ಏಕದಿನ ವಿಶ್ವಕಪ್ 2023ರ ವೇಳಾಪಟ್ಟಿ ವೇಳಾಪಟ್ಟಿ ಜೂನ್ 27 ರಂದು ಪ್ರಕಟಗೊಂಡಿದೆ. ಅಕ್ಟೋಬರ್5 ರಿಂದ ಭಾರತದಲ್ಲಿ ಆತಿಥ್ಯದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ 48 ಪಂದ್ಯಗಳು ನಡೆಯಲಿವೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಕಳೆದ ಬಾರಿಯ (2019) ವಿಶ್ವ ಕಪ್​ನಲ್ಲಿ ಫೈನಲ್ ತಲುಪಿದ್ದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿವೆ. ಪಂದ್ಯಗಳು ಭಾರತದಾದ್ಯಂತ ಭಾರತದ 10 ತಾಣಗಳಲ್ಲಿ ಆಯೋಜನೆಗೊಂಡಿದ್ದು, ನವೆಂಬರ್ 19 ರಂದು ಫೈನಲ್​ ಪಂದ್ಯ ನಡೆಯಲಿದೆ. ಇದೀಗ ವೇಳಾಪಟ್ಟಿ ಬಿಡಗಡೆಗೊಂಡು ಎರಡು ದಿನಗಳಾಗಿದ್ದು ಕ್ರಿಕೆಟ್​ ಅಭಿಮಾನಿಗಳು ಟಿಕೆಟ್​ ಖರೀದಿ ಮತ್ತು ಲಭ್ಯತೆ ಬಗ್ಗೆ ಆಸಕ್ತಿ ತೋರಿದ್ದಾರೆ.

ಒಟ್ಟು 48 ಪಂದ್ಯಗಳ ನಡುವೆ ಅಕ್ಟೋಬರ್​ 15ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿ ಹೆಚ್ಚು ಚರ್ಚೆಗೆ ಒಳಪಟ್ಟಿದೆ. ನಾಕೌಟ್​ ಹಂತದ ಪಂದ್ಯಗಳನ್ನು ಹೊರತುಪಡಿಸಿದಂತೆ ಈ ಪಂದ್ಯದ ಟಿಕೆಟ್​ಗೆ ಅತಿ ಹೆಚ್ಚು ಬೇಡಿಕೆಗಳು ಬರಲಿವೆ. ಅಹಮದಾಬಾದ್​ನಲ್ಲಿ ಪಂದ್ಯ ನಡೆಯಲಿದ್ದು, ಅಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್​ಗಳು ಮಾರಾಟಕ್ಕೆ ಲಭ್ಯವಿದೆ. ಈ ಪಂದ್ಯ ಸೇರಿದಂತೆ ಟೂರ್ನಿಯ ಪಂದ್ಯಗಳ ಟಿಕೆಟ್​ ಪಡೆಯುವುದು ಹೇಗೆ ಎಂಬುದರ ವಿವರ ಇಲ್ಲಿದೆ.

ಟಿಕೆಟ್​ ಎಲ್ಲಿ ಲಭ್ಯ

ಐಸಿಸಿ ವಿಶ್ವಕಪ್ 2023 ರ ಟಿಕೆಟ್​ಗಳು ಶೀಘ್ರದಲ್ಲೇ ಆನ್​ಲೈನ್​ನಲ್ಲಿ ಲಭ್ಯವಿರುತ್ತವೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ವಿಶ್ವದಾದ್ಯಂತದ ಕ್ರಿಕೆಟ್ ಉತ್ಸಾಹಿಗಳು ಮತ್ತು ಅಭಿಮಾನಿಗಳು ಅಧಿಕೃತ ಐಸಿಸಿ ಕ್ರಿಕೆಟ್ ವಿಶ್ವಕಪ್ ವೆಬ್​ಸೈಟ್​ನಿಂದ ತಮ್ಮ ಟೆಕೆಟ್​​ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದು. ಇದಲ್ಲದೆ, ಬುಕ್ ಮೈಶೋ, ಪೇಟಿಎಂ, ಪೇಟಿಎಂ ಇನ್ಸೈಡರ್ಸ್​​ನಲ್ಲಿಯೂ ಟಿಕೆಟ್​ಗಳು ಲಭ್ಯವಿರುತ್ತವೆ. ಬಹುತೇಕ ಟಿಕೆಟ್​ಗಳು ಆನ್​​ ಲೈನ್ ಮೂಲಕವೇ ಲಭ್ಯವಿರುತ್ತವೆ. ಸೀಮಿತ ಟಿಕೆಟ್​ಗಳು ಸ್ಟೇಡಿಯಮ್ ಬಳಿಕ ಬಾಕ್ಸ್​ಆಫೀಸ್​ನಲ್ಲಿ ಮಾರಾಟವಾಗಲಿವೆ. ಟಿಕೆಟ್ ದರ 500ರಿಂದ ಹಿಡಿದು 10,000 ರೂ.ವರೆಗೆ ಇರಲಿದೆ. ಬೆಲೆಗಳು ಸ್ಥಳ ಮತ್ತು ಪಂದ್ಯದ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ : ICC World Cup 2023: ವಿಶ್ವಕಪ್‌ಗಾಗಿ ನವೀಕರಣಗೊಳ್ಳುತ್ತಿದೆ ಅರುಣ್ ಜೇಟ್ಲಿ ಸ್ಟೇಡಿಯಂ

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಮೂಲಕ ಏಕದಿನ ವಿಶ್ವಕಪ್ 2023 ರ ಅಭಿಯಾನವನ್ನು ಪ್ರಾರಂಭಿಸಲಿದೆ. ಅದಾದ ನಂತರ ಭಾರತವು ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ಎರಡು ನಿರ್ಣಾಯಕ ಪಂದ್ಯಗಳನ್ನು ಆಡಲಿದೆ. ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 15 ರಂದು ನಡೆಯಲಿದೆ.

ವಿಶ್ವಕಪ್ 2023 ರಲ್ಲಿ ಭಾರತದ ಪಂದ್ಯಗಳು

Exit mobile version