Site icon Vistara News

ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘನೆ: ಬಾಂಗ್ಲಾ ಆಲ್​ರೌಂಡರ್​ಗೆ 2 ವರ್ಷ ನಿಷೇಧ ಹೇರಿದ ಐಸಿಸಿ

Bangladesh all-rounder Nasir Hossain

ದುಬೈ: ಬಾಂಗ್ಲಾದೇಶದ ಕ್ರಿಕೆಟ್​ ತಂಡದ ಆಲ್‌ರೌಂಡರ್ ನಾಸಿರ್ ಹೊಸೈನ್(Nasir Hossain) ಅವರು ಐಸಿಸಿ(ICC) ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ(Anti-Corruption Code) ಆರೋಪದ ಮೇಲೆ 2 ವರ್ಷಗಳ ನಿಷೇಧ ಶಿಕ್ಷಗೆ ಗುರಿಯಾಗಿದ್ದಾರೆ. ಮಂಗಳವಾರ ಐಸಿಸಿ ಅವರಿಗೆ ಶಿಕ್ಷೆ ಪ್ರಕಟಿಸಿತು. ಹೊಸೈನ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದಾರೆ.

ಸೆಪ್ಟೆಂಬರ್ 2023ರಲ್ಲಿ ಐಸಿಸಿಯಿಂದ ಆರೋಪ ಹೊರಿಸಲ್ಪಟ್ಟ ಮೂರು ಆರೋಪಗಳನ್ನು ಹೊಸೈನ್​ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರನ್ನು ಆರು ತಿಂಗಳ ಅಮಾನತುಗೊಳಿಸುವುದರೊಂದಿಗೆ ಎರಡು ವರ್ಷಗಳ ನಿಷೇಧವನ್ನು ನೀಡಲಾಗಿದೆ. 2021ರ ಅಬುಧಾಬಿ ಟಿ10 ಲೀಗ್‌ನಲ್ಲಿ ನಡೆದ ಘಟನೆಗಳಿಂದ ಅವರ ವಿರುದ್ಧದ ಆರೋಪಗಳು ಉದ್ಭವಿಸಿವೆ, ಅಲ್ಲಿ ಅವರು ಆಟಗಾರರು, ಅಧಿಕಾರಿಗಳು ಮತ್ತು ತಂಡದ ಮಾಲೀಕರು ಸೇರಿದಂತೆ ಏಳು ಇತರ ವ್ಯಕ್ತಿಗಳೊಂದಿಗೆ ಭ್ರಷ್ಟಾಚಾರ-ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.

ಹೊಸೈನ್​ ವಿರುದ್ಧದ ಆರೋಪಗಳು 750 ಡಾಲರ್​ಗಿಂತ ಹೆಚ್ಚು ಮೌಲ್ಯದ ಉಡುಗೊರೆಯ ಸ್ವೀಕೃತಿಯದ್ದಾಗಿದೆ. ಅವರು ಈ ವಿವರಗಳನ್ನು ವರದಿ ಮಾಡದಿರುವುದು ಮತ್ತು ನಿಯೋಜಿತ ಭ್ರಷ್ಟಾಚಾರ ವಿರೋಧಿ ಅಧಿಕಾರಿ (DACO) ನಡೆಸಿದ ತನಿಖೆಯೊಂದಿಗೆ ಸಹಕರಿಸಲು ನಿರಾಕರಿದ್ದಕ್ಕೆ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.

ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ECB) ಪರವಾಗಿ ಕಾರ್ಯನಿರ್ವಹಿಸುತ್ತಿರುವ ಐಸಿಸಿಯ ಭ್ರಷ್ಟಾಚಾರ ವಿರೋಧಿ ಘಟಕವು ಲೀಗ್‌ನಲ್ಲಿ ಪಂದ್ಯಗಳನ್ನು ಭ್ರಷ್ಟಗೊಳಿಸುವ ಪ್ರಯತ್ನಗಳು, ಮ್ಯಾಚ್ ಫಿಕ್ಸಿಂಗ್ ಸಂಭವಿಸಿದೆ ಎಂದು ಸೂಚಿಸುವ ಯಾವುದೇ ಪುರಾವೆಗಳಿಲ್ಲ. ಅದೇನೇ ಇದ್ದರೂ, ವಿಧಿಸಲಾದ ಆರೋಪಗಳು ಕ್ರೀಡೆಯೊಳಗಿನ ನಂಬಿಕೆ ಮತ್ತು ಸಮಗ್ರತೆಯ ಗಂಭೀರ ಉಲ್ಲಂಘನೆಯನ್ನು ಪ್ರತಿಬಿಂಬಿಸುತ್ತವೆ ಎಂದು ತಿಳಿಸಿದೆ.

ಹೊಸೈನ್ ಅವರು 2011 ಮತ್ತು 2018 ರ ನಡುವೆ ಬಾಂಗ್ಲಾದೇಶ ಪರ 115 ಪಂದ್ಯಗಳನ್ನು ಆಡಿದ್ದಾರೆ. 2695 ರನ್ ಮತ್ತು 39 ವಿಕೆಟ್​ಗಳನ್ನು ಪಡೆದಿದ್ದಾರೆ. ಅವರು ಹೆಚ್ಚಾಗಿ ಪ್ರೀಮಿಯರ್ ಲೀಗ್​ನಲ್ಲಿ ಆಡುತ್ತಿದ್ದರು. ಹೊಸೈನ್​ಗೆ 2025 ರ ಏಪ್ರಿಲ್ 7 ರಂದು ನಿಷೇಧ ಶಿಕ್ಷೆ ಕೊನೆಗೊಳ್ಳಲಿದೆ. ಇಲ್ಲಿ ತನಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ದೂರ ಉಳಿಯಬೇಕಾಗಿದೆ. 32 ವರ್ಷದ ಹೊಸೈನ್ ನಿಷೇಧ ಮುಗಿಸಿ ಬರುವಾಗ 34 ವರ್ಷ ಕಳೆದಿರುತ್ತದೆ. ಆಗ ಅವರ ಫಾರ್ಮ್​ ಕೂಡ ಪರಿಗಣನೆಗ ಬರುತ್ತದೆ. ಹಳೆಯ ಫಾರ್ಮ್​ ಉಳಿಕೊಂಡಿದ್ದರೆ ಅವರು ಮತ್ತೆ ಬಾಂಗ್ಲಾ ಪರ ಆಡಬಹುದು ಇಲ್ಲವಾದಲ್ಲಿ ಅವರ ಕ್ರಿಕೆಟ್ ಬದುಕು ಕೊನೆಗೊಳ್ಳಬಹುದು.

Exit mobile version