Site icon Vistara News

CSK vs GT: ಕಳೆದ ಬಾರಿಯ ಫೈನಲಿಸ್ಟ್​ಗಳ ಮಧ್ಯೆ ನಾಳೆ ಐಪಿಎಲ್​ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಲಕ್​!

Shubman Gill vs Ruturaj Gaikwad

ಚೆನ್ನೈ: ಕಳೆದ ಬಾರಿಯ ಫೈನಲಿಸ್ಟ್​ಗಳಾದ ಚೆನ್ನೈ ಸೂಪರ್​ ಕಿಂಗ್ಸ್​(Chennai Super Kings) ಮತ್ತು ಗುಜರಾತ್​ ಟೈಟಾನ್ಸ್(CSK vs GT)​ ತಂಡಗಳು 2024ರ ಐಪಿಎಲ್​ನಲ್ಲಿ(IPL 2024) ನಾಳೆ ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಉಭಯ ತಂಡಗಳು ಕೂಡ ಈಗಾಗಲೇ ಆಡಿದ ಮೊದಲ ಪಂದ್ಯವನ್ನು ಗೆದ್ದಿರುವ ಕಾರಣ ನಾಳೆ ಒಂದು ತಂಡಕ್ಕೆ ಸೋಲು ಖಚಿತ. ಈ ತಂಡ ಯಾವುದು ಎನ್ನುವುದು ಪಂದ್ಯದ ಕೌತುಕ.

ಇತ್ತಂಡಗಳಿಗೂ ಭಾರತ ಕ್ರಿಕೆಟ್​ ತಂಡದ ಯುವ ಆಟಗಾರರು ನಾಯಕರಾಗಿದ್ದಾರೆ. ಶುಭಮನ್​ ಗಿಲ್(Shubman Gill)​ ಗುಜರಾತ್ (Gujarat Titans​ ತಂಡದ ನಾಯಕನಾದರೆ, ಋತುರಾಜ್​ ಗಾಯಕ್ವಾಡ್(Ruturaj Gaikwad)​ ಚೆನ್ನೈ ತಂಡದ ನಾಯಕನಾಗಿದ್ದಾರೆ. ಭವಿಷ್ಯದ ಆಟಗಾರರಾಗಿ ಗುರುತಿಸಿಕೊಂಡಿರುವ ಇವರು ಈ ಬಾರಿ ಕಪ್​ ಗೆದ್ದರೆ, ಮುಂದಿನ ದಿನದಲ್ಲಿ ಟೀಮ್​ ಇಂಡಿಯಾದ ನಾಯಕನಾದರೂ ಅಚ್ಚರಿಯಿಲ್ಲ.

ಗುಜರಾತ್​ ಯುವ ಪಡೆ


ಚೆನ್ನೈ ತಂಡಕ್ಕೆ ಹೋಲಿಸಿದರೆ ಗುಜರಾತ್​ ತಂಡದಲ್ಲಿ ಅಷ್ಟಾಗಿ ಅನುಭವಿ ಆಟಗಾರರಿಲ್ಲ. ಹಾಗಂತ ಯುವ ಪಡೆಯನ್ನೇ ನೆಚ್ಚಿಕೊಂಡ ಈ ತಂಡದ ಸವಾಲನ್ನು ಅಷ್ಟಾಗಿ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಭಾನುವಾರದ ಪಂದ್ಯದಲ್ಲಿ ಗಿಲ್​ ಪಡೆ ಬಲಿಷ್ಠ ತಂಡವಾದ ಮುಂಬೈಗೆ ಸೋಲುಣಿಸಿತ್ತು. ಆದ್ದರಿಂದ ಚೆನ್ನೈ ಎಚ್ಚರಿಕೆಯಿಂದ ಆಡಬೇಕಿದೆ.

ಇದನ್ನೂ ಓದಿ IPL 2024: ಐಪಿಎಲ್​ನ 2 ಗುಂಪು ಪ್ರಕಟ; ಒಂದೇ ಗುಂಪಿನಲ್ಲಿ ಆರ್​ಸಿಬಿ-ಚೆನ್ನೈ

ಮುಖಾಮುಖಿ


ಉಭಯ ತಂಡಗಳು ಇದುವರೆಗೆ 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಗುಜರಾತ್​ 3 ಪಂದ್ಯ ಗೆದ್ದಿದೆ. ಚೆನ್ನೈ 2 ಪಂದ್ಯ ಮಾತ್ರ ಗೆದ್ದಿದೆ. ಇದರಲ್ಲೊಂದು ಕಳೆದ ಬಾರಿಯ ಫೈನಲ್​ ಪಂದ್ಯದ ಗೆಲುವು. ನಾಳೆ ನಡೆಯುವ ಪಂದ್ಯ ಚೆನ್ನೈಗೆ ತವರಿನ ಪಂದ್ಯವಾದ ಕಾರಣ ಈ ತಂಡಕ್ಕೆ ಹೆಚ್ಚಿನ ಅವಕಾಶ. ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನ ಪಿಚ್​ ಸ್ಪಿನ್ ಸ್ನೇಹಿ ಜತೆಗೆ ಬ್ಯಾಟಿಂಗ್​ಗೂ ನೆರವಾಗಲಿದೆ. ಇಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ 200ರನ್​ಗಳ ಗಡಿ ದಾಟಿದೆ.

ಚೆನ್ನೈನ(Chennai) ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ(MA Chidambaram Stadium) ಇದುವರೆಗೆ ಒಟ್ಟು 89 ಐಪಿಎಲ್​ ಪಂದ್ಯಗಳು ಏರ್ಪಡಿದೆ. ಇದರಲ್ಲಿ 48 ಬಾರಿ ಚೇಸಿಂಗ್​ ನಡೆಸಿದ ತಂಡ ಗೆದ್ದರೆ, 37 ಸಲ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಜಯಶಾಲಿಯಾಗಿದೆ. 4 ಪಂದ್ಯಗಳು ಫಲಿತಾಂಶ ಕಾಣದೆ ಅಂತ್ಯಕಂಡಿದೆ. ಈ ಸ್ಟೇಡಿಯಂನ ಗರಿಷ್ಠ ಮೊತ್ತ 263. ಕನಿಷ್ಠ ಮೊತ್ತ 82.

ಸಂಭಾವ್ಯ ತಂಡಗಳು


ಗುಜರಾತ್​: ಶುಭಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಸಾಯಿ ಸುದರ್ಶನ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ಸಾಯಿ ಕಿಶೋರ್, ಸ್ಪೆನ್ಸರ್ ಜಾನ್ಸನ್.

ಚೆನ್ನೈ: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್​ ಕೀಪರ್​), ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ.

Exit mobile version