Site icon Vistara News

IND vs ENG: ಸೌರವ್ ಗಂಗೂಲಿ ದಾಖಲೆ ಹಿಂದಿಕ್ಕಿದ ರವೀಂದ್ರ ಜಡೇಜಾ

Ravindra Jadeja was subdued in his celebration after century

ರಾಜ್​ಕೋಟ್​: ಇಂಗ್ಲೆಂಡ್(IND vs ENG)​ ವಿರುದ್ಧದ ಮೂರನೇ ಟೆಸ್ಟ್​ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ ಭಾರತ ತಂಡ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರು ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅವರ ದಾಖಲೆಯೊಂದನ್ನು ಹಿಂದಿಕ್ಕಿದ್ದಾರೆ. ಇಂಗ್ಲೆಂಡ್ ವಿರುದ್ಧ 1000 ಟೆಸ್ಟ್ ರನ್ ಗಳಿಸಿದ 15ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

110 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಜಡೇಜಾ 2 ರನ್​ ಗಳಿಸಿ ಜೋ ರೂಟ್‌ಗೆ ವಿಕೆಟ್​ ಒಪ್ಪಿಸಿದರು. 225 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 112 ರನ್ ಗಳಿಸಿ ನಿರ್ಗಮಿಸಿದರು.

ಇದನ್ನೂ ಓದಿ IND vs ENG: ಭಾರತಕ್ಕೆ ಐದು ರನ್‌ ದಂಡ ವಿಧಿಸಿದ ಅಂಪೈರ್​; ಕಾರಣವೇನು?


ಇಂಗ್ಲೆಂಡ್ ವಿರುದ್ಧ 1000ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿದ ಭಾರತೀಯ ಬ್ಯಾಟರ್​ಗಳು

ಆಟಗಾರರನ್​
ಸಚಿನ್​ ತೆಂಡೂಲ್ಕರ್​2,535
ಸುನಿಲ್​ ಗವಾಸ್ಕರ್​2,483
ವಿರಾಟ್​ ಕೊಹ್ಲಿ1,991
ರಾಹುಲ್​ ದ್ರಾವಿಡ್​1,950
ಗುಂಡಪ್ಪ ವಿಶ್ವನಾಥ್1,880
ಚೇತೇಶ್ವರ ಪೂಜಾರ1,778
ದಿಲೀಪ್ ವೆಂಗ್ ಸರ್ಕಾರ್1,589
ಕಪಿಲ್​ ದೇವ್​1,355
ಮೊಹಮ್ಮದ್ ಅಜರುದ್ದೀನ್1,278
ವಿಜಯ್ ಮಂಜ್ರೇಕರ್1,181
ಎಂಎಸ್ ಧೋನಿ1,157
ಫಾರೂಖ್‌ ಎಂಜಿನಿಯರ್‌1,113
ರವಿಚಂದ್ರನ್​ ಅಶ್ವಿನ್​1,048*
ರವಿಶಾಸ್ತ್ರಿ1,026


ಟೆಸ್ಟ್‌ನಲ್ಲಿ 250 ವಿಕೆಟ್‌, 3000 ರನ್

ಟೆಸ್ಟ್‌ ಕ್ರಿಕೆಟ್‌ನಲ್ಲಿ ಜಡೇಜಾ 3000 ರನ್‌ ಹಾಗೂ 250 ವಿಕೆಟ್‌ ಸಾಧನೆ ಮಾಡಿದ ಭಾರತದ ಕೇವಲ 3ನೇ ಹಾಗೂ ವಿಶ್ವದ 12ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ಪರ ಈ ಮೊದಲು ಕಪಿಲ್‌ ದೇವ್‌(5248 ರನ್‌, 434 ವಿಕೆಟ್‌), ಆರ್‌.ಅಶ್ವಿನ್‌(3271 ರನ್‌, 499 ವಿಕೆಟ್‌) ಈ ಸಾಧನೆ ಮಾಡಿದ್ದಾರೆ.

ಆಸ್ಟ್ರೇಲಿಯಾದ ಶೇನ್‌ ವಾರ್ನ್‌, ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌, ನ್ಯೂಜಿಲ್ಯಾಂಡ್​ನ ರಿಚರ್ಡ್‌ ಹಾರ್ಡ್ಲೀ, ದಕ್ಷಿಣ ಆಫ್ರಿಕಾದ ಶಾನ್‌ ಪೊಲಾಕ್‌, ಇಂಗ್ಲೆಂಡ್‌ನ ಇಯಾನ್‌ ಬೋಥಂ, ಪಾಕಿಸ್ತಾನದ ಇಮ್ರಾನ್ ಖಾನ್‌, ನ್ಯೂಜಿಲ್ಯಾಂಡ್​ನ ವೆಟೋರಿ, ಶ್ರೀಲಂಕಾದ ಚಾಮಿಂಡಾ ವಾಸ್‌, ದಕ್ಷಿಣಆಫ್ರಿಕಾದ ಜ್ಯಾಕ್‌ ಕಾಲೀಸ್‌ ಈ ಸಾಧನೆ ಮಾಡಿದ ವಿಶ್ವ ಕ್ರಿಕೆಟಿಗರು.

ಭಾರತಕ್ಕೆ ಐದು ರನ್‌ ದಂಡ


ಎರಡನೇ ದಿನದಾಟದಲ್ಲಿ ಭಾರತಕ್ಕೆ ಐದು(India handed five-run penalty) ರನ್‌ಗಳ ದಂಡ ವಿಧಿಸಲಾಗಿದೆ. ಇದಕ್ಕೆ ಕಾರಣ ಆರ್​.ಅಶ್ವಿನ್​ ಅವರು(Ravichandran Ashwin) ಪಿಚ್​ನಲ್ಲಿ ಅಡ್ಡಾದಿಡ್ಡಿ ಓಡಾಡಿದ್ದು. ಭಾರತದ ಮೊದಲ ಇನಿಂಗ್ಸ್‌ನ 102 ನೇ ಓವರ್‌ನಲ್ಲಿ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಬೌಲಿಂಗ್ ಮಾಡುವಾಗ ಈ ಘಟನೆ ಸಂಭವಿಸಿದೆ. ಇಂಗ್ಲೆಂಡ್​ ತಂಡಕ್ಕೆ ಬ್ಯಾಟಿಂಗ್​ ಇನಿಂಗ್ಸ್​ ಆರಂಭಿಸುವ ಮುನ್ನವೇ 5 ರನ್​ಗಳು ಲಭಿಸಿದೆ. ಎಂಸಿಸಿಯ ಕಾನೂನು 41.14.1 ಪ್ರಕಾರ ಉದ್ದೇಶಪೂರ್ವಕ ಪ್ರಕರಣ ಇದಾಗಿದೆ.

Exit mobile version