Site icon Vistara News

IND vs AUS Super 8: ಆಸೀಸ್​ ವಿರುದ್ಧ ಭಾರತಕ್ಕೆ ಸೋಲು ಖಚಿತ ಎಂದ ಅಭಿಮಾನಿಗಳು; ಕಾರಣವೇನು?

IND vs AUS Super 8

IND vs AUS Super 8: India's nightmare comes true as UMPIRES for India vs Australia clash announced

ಸೇಂಟ್ ಲೂಸಿಯಾ: ಹಾಲಿ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ(T20 World Cup 2024) ಟೀಮ್​ ಇಂಡಿಯಾ(Team India) ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಸೆಮಿಫೈನಲ್​ ಸಮೀಪಕ್ಕೆ ಬಂದು ನಿಂತಿದೆ. ನಾಳೆ(ಸೋಮವಾರ) ನಡೆಯುವ ಅಂತಿಮ ಸೂಪರ್​-8(IND vs AUS Super 8) ಪಂದ್ಯದಲ್ಲಿ ಆಸ್ಟ್ರೇಲಿಯಾ(IND vs AUS) ವಿರುದ್ಧ ಕಣಕ್ಕಿಳಿಯಲಿದೆ. ಗೆದ್ದರೆ ಭಾರತದ ಸೆಮಿ ಫೈನಲ್​ ಟಿಕೆಟ್​ ಅಧಿಕೃತವಾಗಲಿದೆ. ಅತ್ತ ಸೆಮಿ ರೇಸ್​ ಆಸೆ ಜೀವಂತವಿರಿಸಿಕೊಳ್ಳಬೇಕಿದ್ದರೆ, ಆಸೀಸ್​ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಪಂದ್ಯಕ್ಕೂ ಮುನ್ನ ಭಾರತೀಯ ಅಭಿಮಾನಿಗಳಿಗೆ ನಡುವೊಂದು ಶುರುವಾಗಿದೆ. ಇದಕ್ಕೆ ಕಾರಣ ಈ ಪಂದ್ಯಕ್ಕೆ ಆಯ್ಕೆಯಾಗಿರುವ ಅಂಪೈರ್​.

ಭಾರತದ ಪಾಲಿಗೆ ಐರನ್ ಲೆಗ್ ಎಂದು ಕರೆಯಲ್ಪಡುವ ರಿಚರ್ಡ್‌ ಕೆಟಲ್‌ಬರೋ(Richard Kettleborough) ಈ ಪಂದ್ಯಕ್ಕೆ ಅಂಪೈರ್​ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಕೆಟಲ್‌ಬರೋ ಅಂಪೈರ್​ ಎಂದು ತಿಳಿದಾಗಲೇ ಎಲ್ಲ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕೂಡ ಈ ಬಾರಿ ಭಾರತಕ್ಕೆ ಸೋಲು ಖಚಿತ ಎಂದೇ ಹೇಳಿದ್ದರು. ಅದರಂತೆ ಈ ಭವಿಷ್ಯ ಕೂಡ ನಿಜವಾಗಿತ್ತು.

ರಿಚರ್ಡ್‌ ಕೆಟಲ್‌ಬರೋ ಕಾರ್ಯನಿರ್ವಹಿಸಿದ ಎಲ್ಲ ಮಹತ್ವದ ಪಂದ್ಯದಲ್ಲಿಯೂ ಭಾರತ ತಂಡ ಸೋಲುಕಂಡಿತ್ತು. ಕಳೆದ ಬಾರಿಯ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅವರು ಅಂಪೈರ್​ ಆದಾಗ ಅಭಿಮಾನಿಗಳು ಭಾರತಕ್ಕೆ ಸೋಲು ಖಚಿತ ಎಂದು ಹೇಳಿದ್ದರು. ಈ ಭವಿಷ್ಯ ಕೂಡ ನಿಜವಾಗಿತ್ತು. ಭಾರತ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಲೀಗ್​ನಿಂದ ಸೆಮಿಫೈನಲ್​ ತನಕ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಭಾರತ ಸಾಧಿಸಿದ ಗೆಲುವು ಫೈನಲ್​ನಲ್ಲಿ ಸೋಲು ಕಾಣುವ ಮೂಲಕ ನೀರಲ್ಲಿ ಹೋಮವಾಗಿತ್ತು. ಇದೀಗ ಮತ್ತೆ ಭಾರದ ಪಾಲಿಗೆ ಈ ಅಂಪೈರ್​ ಅಡ್ಡಗಾಲಿಕ್ಕುವ ಸಾಧ್ಯತೆ ಕಂಡು ಬಂದಿದೆ.

ಇದನ್ನೂ ಓದಿ IND vs AUS: ನಾಳೆ ನಡೆಯುವ ಭಾರತ-ಆಸೀಸ್​ ಸೂಪರ್​-8 ಪಂದ್ಯಕ್ಕೆ ಭಾರೀ ಮಳೆ ಎಚ್ಚರಿಕೆ

ಎಲ್ಲ ಪಂದ್ಯದಲ್ಲಿಯೂ ಸೋಲು


2014 ರಿಂದ ರಿಚರ್ಡ್‌ ಕೆಟಲ್‌ಬರೋ ಅಂಪೈರಿಂಗ್‌ ಮಾಡಿದ ಎಲ್ಲ ಪ್ರಮುಖ ಪಂದ್ಯಗಳಲ್ಲಿಯೂ ಟೀಮ್‌ ಇಂಡಿಯಾ ಸೋಲು ಕಂಡಿದೆ. 2014ರ ಟಿ20 ವಿಶ್ವ ಕಪ್ ಫೈನಲ್, 2015ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2016ರ ಟಿ20 ವಿಶ್ವ ಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವ ಕಪ್ ಸೆಮಿಫೈನಲ್, 2021ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್, 2023ರ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಭಾರತ ಸೋತಿತ್ತು. ಇದೀಗ ನಾಳೆ ನಡೆಯುವ ಪಂದ್ಯದಲ್ಲಿಯೂ ಭಾರತ ಸೋಲು ಕಾಣುವುದು ಖಚಿತ ಎನ್ನುತ್ತಿದ್ದಾರೆ ಅಭಿಮಾನಿಗಳು.

ವಿಶ್ವಕಪ್​ ಮುಖಾಮುಖಿ


ಭಾರತ ಮತ್ತು ಆಸ್ಟ್ರೇಲಿಯಾ ಇದುವರೆಗೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಒಟ್ಟು 5 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 3 ಪಂದ್ಯ ಗೆದ್ದರೆ, ಆಸೀಸ್​ 2 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಕಳೆದ 2 ಬಾರಿಯ ಮುಖಾಮುಖಿಯಲ್ಲಿಯೂ ಭಾರತವೇ ಗೆದ್ದು ಬೀಗಿದೆ. ಹೀಗಾಗಿ ಭಾರತ ಬಲಿಷ್ಠ ಎನ್ನಬಹುದು. ಒಟ್ಟಾರೆಯಾಗಿ ಟಿ20 ಕ್ರಿಕೆಟ್​ನಲ್ಲಿ ಇತ್ತಂಡಗಳು 31 ಪಂದ್ಯಗಳಲ್ಲಿ ಆಡಿವೆ. ಇದರಲ್ಲಿ ಭಾರತ 19 ಪಂದ್ಯ ಮತ್ತು ಆಸ್ಟ್ರೇಲಿಯ 17 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

Exit mobile version