Site icon Vistara News

IND vs CAN: ಇಂದು ಭಾರತ-ಕೆನಡಾ ಪಂದ್ಯ ಅನುಮಾನ; ಭಾರೀ ಮಳೆ ಎಚ್ಚರಿಕೆ ನೀಡಿದ ಹಮಾಮಾನ ಇಲಾಖೆ

IND vs CAN

IND vs CAN: Rain threat looms over dead rubber in Lauderhill, Florida

ಲಾಡರ್‌ಹಿಲ್‌ (ಯುಎಸ್‌ಎ): ಟೀಮ್​ ಇಂಡಿಯಾ(IND vs CAN) ತನ್ನ ಅಂತಿಮ ಲೀಗ್ ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು(ಶನಿವಾರ) ನಡೆಯುವ ಪಂದ್ಯದಲ್ಲಿ ಕೆನಾಡ ವಿರುದ್ಧ ಕಣಕ್ಕಿಳಿಯಲಿದೆ. ಈಗಾಗಲೇ ಸೂಪರ್​-8ಗೆ ಪ್ರವೇಶ ಪಡೆದಿರುವ ಕಾರಣ ರೋಹಿತ್​ ಪಡೆಗೆ ಇದೊಂದು ​ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ಆದರೆ ಈ ಪಂದ್ಯ ನಡೆಯುವುದೇ ಅನುಮಾನ ಎನ್ನಲಾಗಿದೆ.

ಇದೇ ಮೈದಾನದಲ್ಲಿ ಶುಕ್ರವಾರ ನಡೆಯಬೇಕಿದ್ದ 2 ಪಂದ್ಯಗಳು ಕೂಡ ಒಂದು ಎಸೆತ ಕಾಣದೆ ರದ್ದಾಗಿತ್ತು. ಇಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು. ಇಂದು ಕೂಡ ಭಾರೀ ಮಳೆ(IND vs CAN weather report) ಬೀಳುವ ಸಾಧ್ಯತೆ ಇದೆ. 2 ದಿನಗಳ ಹಿಂದೆಯೇ ಹವಾಮಾನ ಇಲಾಖೆ ಈ ಕುರಿತು ಎಚ್ಚರಿಕೆ ನೀಡಿತ್ತು. ಒಂದೊಮ್ಮೆ ಪಂದ್ಯ ನಡೆದರೂ ಕೂಡ ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಹಲವು ಮಹತ್ವದ ಬದಲಾವಣೆ ಮಾಡುವುದು ನಿಶ್ಚಿತ.

ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ, ರವೀಂದ್ರ ಜಡೇಜಾ ಸೇರಿ ಇನ್ನೂ ಕೆಲ ಹಿರಿಯ ಆಟಗಾರರು ವಿಶ್ರಾಂತಿ ಪಡೆಯುವ ಸಾಧ್ಯತೆ ಕಂಡು ಬಂದಿದೆ. ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌ ಕಣಕ್ಕಿಳಿಯಬಹುದು. ವಿರಾಟ್‌ ಕೊಹ್ಲಿ ಇನ್ನಿಂಗ್ಸ್‌ ಆರಂಭಿಸುವ ಕುರಿತು ಈಗಾಗಲೇ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರೋಹಿತ್‌ ಜತೆ ಜೈಸ್ವಾಲ್‌ ಬಂದು, ಕೊಹ್ಲಿ ಒನ್‌ಡೌನ್‌ಲ್ಲಿ ಆಡುವುದು ಒಳ್ಳೆಯದು ಎಂಬುದು ಇವರೆಲ್ಲರ ಅಪೇಕ್ಷೆ. ಹೀಗಾಗಿ ಈ ಪಂದ್ಯದಲ್ಲಿ ಜೈಸ್ವಾಲ್​ ಅವರನ್ನು ಆಡಿಸಿ ಅವರು ಕ್ಲಿಕ್​ ಆದರೆ ಸೂಪರ್​-8ನಲ್ಲಿಯೂ ರೋಹಿತ್​ ಜತೆ ಜೈಸ್ವಾಲ್​ ಆರಂಭಿಕನಾಗಿ ಆಡಿಸುವ ಯೋಜನೆ ಯೋಜನೆಯೊಂದನ್ನು ಬಿಸಿಸಿಐ ಹಾಕಿಕೊಂಡಂತಿದೆ.

ಇದನ್ನೂ ಓದಿ Euro 2024 : ಸ್ಕಾಟ್ಲೆಂಡ್​ ವಿರುದ್ಧ ಜರ್ಮನಿಗೆ 5-1 ಗೋಲ್​ಗಳ ಭರ್ಜರಿ ವಿಜಯ

ಸೂಪರ್​-8ಗೆ ಲಗ್ಗೆಯಿಟ್ಟ ಅಮೆರಿಕ-ಗಂಟುಮೂಟೆ ಕಟ್ಟಿದ ಪಾಕ್​

ಉತ್ತಮ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗವನ್ನು ಹೊಂದಿದ್ದರೂ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಗುವ ಜತೆಗೆ ಅದೃಷ್ಟದಾಟದಲ್ಲೂ ಹಿನ್ನಡೆ ಅನುಭವಿಸಿದ ಪಾಕಿಸ್ತಾನ ಕ್ರಿಕೆಟ್‌ ತಂಡವು (Pakistan Cricket Team) ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ ಟೂರ್ನಿಯಿಂದಲೇ (T20 World Cup 2024) ಹೊರಬಿದ್ದಿದೆ. ಸೂಪರ್‌ 8ರ ರೇಸ್‌ನಲ್ಲಿ ಹಿನ್ನಡೆ ಅನುಭವಿಸಿದ ಬಾಬರ್‌ ಅಜಂ (Babar Azam) ನೇತೃತ್ವದ ತಂಡವು ಟೂರ್ನಿಯಿಂದ ಹೊರಬಿದ್ದಿದ್ದು, ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಮೆರಿಕದ ಲೌಡರ್‌ಹಿಲ್‌ನಲ್ಲಿ ಶುಕ್ರವಾರ (ಜೂನ್‌ 14) ಯುಎಸ್‌ಎ ಹಾಗೂ ಐರ್ಲೆಂಡ್‌ ನಡುವೆ ಮಹತ್ವದ ಪಂದ್ಯ ನಡೆಯಬೇಕಿತ್ತು. ಆದರೆ, ಮಳೆಯಿಂದಾಗಿ ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಎರಡೂ ತಂಡಗಳು ತಲಾ ಒಂದು ಪಾಯಿಂಟ್‌ ಸಂಪಾದಿಸಿದವು. ಇದರೊಂದಿಗೆ ಒಟ್ಟು 5 ಅಂಕ ಗಳಿಸಿದ ಅಮೆರಿಕ ತಂಡವು ಸೂಪರ್‌ 8ಕ್ಕೆ ಲಗ್ಗೆ ಇಟ್ಟಿತು. ಮೊದಲ ಬಾರಿಗೆ ಟಿ-20 ವಿಶ್ವಕಪ್‌ನಲ್ಲಿ ಆಡುತ್ತಿರುವ ಅಮೆರಿಕ ತಂಡವು ಮೊದಲ ಪ್ರಯತ್ನದಲ್ಲಿಯೇ ಸೂಪರ್‌ 8 ಪ್ರವೇಶಿಸಿದೆ.

Exit mobile version