ರಾಂಚಿ: ಪ್ರವಾಸಿ ಇಂಗ್ಲೆಂಡ್ ಮತ್ತು ಭಾರತ ನಡುವಣ 4ನೇ ಟೆಸ್ಟ್(IND vs ENG 4th Test) ಪಂದ್ಯ ನಾಳೆಯಿಂದ ಧೋನಿಯ ತವರಾದ ರಾಂಚಿಯಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೆ ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ(JSCA International Stadium Complex, Ranchi) ಅಣಿಯಾಗಿದೆ.
ಭಾರತದ ದಾಖಲೆ
ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಇದುವರೆಗೆ 2 ಟೆಸ್ಟ್ ಪಂದ್ಯಗಳನ್ನು ಆಡಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ. ಆಸೀಸ್ ವಿರುದ್ಧ ಡ್ರಾ ಸಾಧಿಸಿದರೆ, ಹರಿಣಗಳ ಎದುರು ಗೆಲುವು ಸಾಧಿಸಿದ್ದಾರೆ. ಹೀಗಾಗಿ ಇಲ್ಲಿ ಭಾರತ ಅಜೇಯ ದಾಖಲೆ ಹೊಂದಿದೆ. ಆದರೆ ಮೂರನೇ ಪಂದ್ಯದಲ್ಲಿಯೂ ಭಾರತವೇ ಫೇವರಿಟ್ ಎನ್ನಲಾಗುದು. ಏಕೆಂದರೆ ಈ ಬಾರಿ ತಂಡದಲ್ಲಿ ಅನುಭವಿ ಆಟಗಾರರ ಕೊರತೆ ಇದೆ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ, ಫಿಟ್ ಆಗದೆ ಸರಣಿಯಿಂದ ಹಿಂದೆ ಬಿದ್ದ ರಾಹುಲ್, ಅಯ್ಯರ್, ಕೊಹ್ಲಿ ಅನುಪಸ್ಥಿತಿ ಹೀಗೆ ಹಲವು ಸವಾಲನ್ನು ಮೆಟ್ಟಿ ನಿಂತು ಭಾರತ ಈ ಪಂದ್ಯದಲ್ಲಿ ಕಣಕ್ಕಿಳಿಯಬೇಕಾದ ಪರಿಸ್ಥಿತಿಯಿದೆ.
ನಾಯಕ ರೋಹಿತ್ ಶರ್ಮ ಅವರು ಈ ಮೈದಾನದ್ಲಲಿ ಉತ್ತಮ ದಾಖಲೆ ಹೊಂದಿದ್ದಾರೆ. ಇಲ್ಲಿ ನಡೆದ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ್ದರು (212 ರನ್). ಇವರನ್ನು ಹೊರತುಪಡಿಸಿ ವೃದ್ಧಿಮಾನ್ ಸಹಾ, ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರ ಅವರಿಂದ ತಲಾ ಒಂದು ಶತಕ ಬಂದಿದೆ. ಆದರೆ ಈ ಮೂವರು ಈಗ ತಂಡದಲ್ಲಿಲ್ಲ. ರವೀಂದ್ರ ಜಡೇಜಾ ಎರಡು ಟೆಸ್ಟ್‌ಗಳಲ್ಲಿ ಎರಡು ಅರ್ಧಶತಕ ಸಿಡಿಸಿದ್ದಾರೆ. 12 ವಿಕೆಟ್ ಕೂಡ ಕಿತ್ತ ದಾಖಲೆ ಹೊಂದಿದ್ದಾರೆ. ಹೀಗಾಗಿ ರೋಹಿತ್ ಮತ್ತು ಜಡೇಜಾ ಮೇಲೆ ತಂಡ ಹೆಚ್ಚಿನ ನಂಬಿಕೆ ಇರಿಸಿದೆ.
Getting Ranchi Ready 👌 👌#TeamIndia | #INDvENG | @IDFCFIRSTBank pic.twitter.com/UiZnrbdWBc
— BCCI (@BCCI) February 21, 2024
ಇದನ್ನೂ ಓದಿ IND vs ENG: ರಾಂಚಿ ಟೆಸ್ಟ್ ಪಂದ್ಯಕ್ಕೆ ಖಲಿಸ್ತಾನಿ ಉಗ್ರನಿಂದ ಬೆದರಿಕೆ; ಸ್ಟೇಡಿಯಂಗೆ ಬಿಗಿ ಭದ್ರತೆ!
ಭಾರತ-ಇಂಗ್ಲೆಂಡ್ ಮುಖಾಮುಖಿ
ಭಾರತ ಮತ್ತು ಇಂಗ್ಲೆಂಡ್ ಇದುವರೆಗೆ ಟೆಸ್ಟ್‌ನಲ್ಲಿ ಪರಸ್ಪರ 133 ಪಂದ್ಯಗಳನ್ನು ಆಡಿವೆ. ಭಾರತ 33, ಇಂಗ್ಲೆಂಡ್ 51 ಪಂದ್ಯಗಳನ್ನು ಗೆದ್ದಿದ್ದು, 50 ಪಂದ್ಯಗಳು ಡ್ರಾ ಆಗಿವೆ.
ಪಿಚ್ ರಿಪೋರ್ಟ್
ರಾಂಚಿಯ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಆಟ ಸಾಗಿದಂತೆ ಇಲ್ಲಿ ಸ್ಪಿನ್ನರ್‌ಗಳು ಹಿಡಿತ ಸಾಧಿಸುತ್ತಾರೆ. ಹೀಗಾಗಿ ಉಭಯ ತಂಡಗಳು ಕೂಡ ಸ್ಪಿನ್ನ್ ಬೌಲಿಂಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಾಧ್ಯತೆ ಇದೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ಗೆಲುವಿನ ಶೇಕಡಾವಾರು ಹೆಚ್ಚು ಇದೆ.
ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ, ಕೇವಲ ಆರು ಇನ್ನಿಂಗ್ಸ್‌ಗಳಲ್ಲಿ 81.1 ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 545 ರನ್‌ಗಳನ್ನು ಒಟ್ಟುಗೂಡಿಸಿದ್ದಾರೆ. ಅವರು ಎರಡು ದ್ವಿಶತಕಗಳನ್ನು ಕೂಡ ಬಾರಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು ಈ ಪಂದ್ಯದಲ್ಲಿಯೂ ಜವಾಬ್ದಾರಿಯುತವಾಗಿ ಆಡಲು ಎದುರು ನೋಡುತ್ತಿದ್ದಾರೆ.
ಸಂಭಾವ್ಯ ತಂಡ
ಭಾರತ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರಜತ್ ಪಾಟಿದಾರ್/ದೇವದತ್ತ ಪಡಿಕ್ಕಲ್, ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್: ಜಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆಂಡರ್ಸನ್/ಶೋಯೆಬ್ ಬಶೀರ್.