Site icon Vistara News

IND vs ENG 5th Test: ಭಾರತವನ್ನು ಮಣಿಸಲು ದಲೈ ಲಾಮಾ ಆಶೀರ್ವಾದ ಪಡೆದ ಇಂಗ್ಲೆಂಡ್​ ಕ್ರಿಕೆಟಿಗರು

England team players meet Dalai Lama in Dharamsala

ಧರ್ಮಶಾಲಾ: ಭಾರತ ಮತ್ತು​ ಇಂಗ್ಲೆಂಡ್(IND vs ENG)​​ ನಡುವಣ ಟೆಸ್ಟ್​ ಸರಣಿಯ(IND vs ENG 5th Test) ಅಂತಿಮ ಹಾಗೂ 5ನೇ ಪಂದ್ಯ ನಾಳೆಯಿಂದ(ಮಾ.7) ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ (ಎಚ್‌ಪಿಸಿಎ)ನಲ್ಲಿ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೂ ಮುನ್ನ ದಿನವಾದ ಬುಧವಾರ ಇಂಗ್ಲೆಂಡ್​ ಕ್ರಿಕೆಟಿಗರು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ(Dalai Lama) ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ದಲೈ ಲಾಮಾ ಅವರನ್ನು ಭೇಟಿಯಾದ ಫೋಟೊವನ್ನು ಈ ಆಟಗಾರರು ತಮ್ಮ ಟ್ವಿಟರ್ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ರಮಣೀಯ ತಾಣವಾದ ಧರ್ಮಶಾಲಾದಲ್ಲಿ 2017ರ ಬಳಿಕ ನಡೆಯುತ್ತಿರುವ ಟೆಸ್ಟ್​ ಪಂದ್ಯ ಇದಾಗಿದೆ. ಜತೆಗೆ ಇದು ಇಲ್ಲಿ ನಡೆಯುವ 2ನೇ ಟೆಸ್ಟ್​ ಪಂದ್ಯವೂ ಹೌದು. ಟೀಮ್ ಇಂಡಿಯಾದ ಕ್ರಿಕೆಟಿಗ ಶುಭಮನ್​ ಗಿಲ್ ಕೂಡ ಮಂಗಳವಾರ ಇಲ್ಲಿ ಬೌದ್ಧ ಮಂದಿರವೊಂದಕ್ಕೆ ಭೇಟಿ ನೀಡಿ ಕೆಲ ಕಾಶ ಧ್ಯಾನ ಮಾಡಿದ್ದರು.

ಇದನ್ನೂ ಓದಿ IND vs ENG 5th Test: ಅಂತಿಮ ಟೆಸ್ಟ್​ಗೆ ಆಡುವ ಬಳಗ ಪ್ರಕಟಿಸಿದ ಇಂಗ್ಲೆಂಡ್​; ಒಂದು ಬದಲಾವಣೆ

ಕಳೆದ ವರ್ಷದ ಐಪಿಎಲ್ ಸಂದರ್ಭದಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡದ ಆಟಗಾರ ಜೋ ರೂಟ್​ ಅವರು ​ದಲೈ ಲಾಮಾ ಅವರನ್ನು ಭೇಟಿ ಮಾಡಿ ಕ್ರಿಕೆಟ್​ ಚೆಂಡನ್ನು ವಿಶೇಷ ಸ್ಮರಣಿಯಾಗಿ ನೀಡಿದ್ದರು.

ಅಂತಿಮ ಟೆಸ್ಟ್(IND vs ENG 5th Test)​ ಪಂದ್ಯಕ್ಕೆ ಪ್ರವಾಸಿ ಇಂಗ್ಲೆಂಡ್​ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ಒಂದು ಬದಲಾವಣೆ ಮಾಡಿದ್ದು, ಓಲಿ ರಾಬಿನ್ಸನ್(Ollie Robinson) ಬದಲಿಗೆ ಮಾರ್ಕ್​ ವುಡ್(Mark Wood) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಪಂದ್ಯ  ಪಂದ್ಯ ಜಾನಿ ಬೇರ್​ಸ್ಟೊ(Jonny Bairstow) ಅವರಿಗೆ 100ನೇ ಟೆಸ್ಟ್​ ಪಂದ್ಯವಾಗಿದೆ.

​ಇಂಗ್ಲೆಂಡ್​ ಆಡುವ ಬಳಗ

ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೇರ್​ಸ್ಟೊ, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜೇಮ್ಸ್ ಆ್ಯಂಡರ್ಸನ್​, ಶೋಯೆಬ್ ಬಶೀರ್.

ವಿಶ್ವ ದಾಖಲೆ ನಿರ್ಮಿಸಲು ಆ್ಯಂಡರ್ಸನ್ ಸಜ್ಜು

ಟೆಸ್ಟ್​ ಕ್ರಿಕೆಟ್​ನಲ್ಲಿ 700 ವಿಕೆಟ್​ಗಳ ಸನಿಹದಲ್ಲಿರುವ ಆ್ಯಂಡರ್ಸನ್​ಗೆ ಈ ಮೈಲುಗಲ್ಲು ನಿರ್ಮಿಸಲು ಇನ್ನು ಕೇವಲ 2 ವಿಕೆಟ್​ಗಳ ಅಗತ್ಯವಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್​ನಲ್ಲಿ(India vs England 5th Test) ಅವರು ಈ ದಾಖಲೆ ಬರೆಯುವ ವಿಶ್ವಾಸದಲ್ಲಿದ್ದಾರೆ. 700 ವಿಕೆಟ್​ ಪೂರ್ತಿಗೊಳಿಸಿದರೆ ಈ ಸಾಧನೆ ಮಾಡಿದ ವಿಶ್ವದ ಮೊದಲ ವೇಗಿ ಹಾಗೂ ವಿಶ್ವದ ಮೂರನೇ ಬೌಲರ್​ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮತ್ತು ಆಸ್ಟ್ರೇಲಿಯಾದ, ದಿವಂಗತ ಶೇನ್ ವಾರ್ನ್ 700ಕ್ಕೂ ಅಧಿಕ ಟೆಸ್ಟ್​ ವಿಕೆಟ್​ ಕಿತ್ತ ಉಳಿದಿಬ್ಬರು ಆಟಗಾರರು.

2002ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಜೇಮ್ಸ್​ ಆ್ಯಂಡರ್ಸನ್​ ಅವರು ಇಂಗ್ಲೆಂಡ್​ ಕಂಡ ಶ್ರೇಷ್ಠ ಬೌಲರ್​ಗಳಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. 2003ರಲ್ಲಿ ಅವರು ಟೆಸ್ಟ್​ ಕ್ರಿಕೆಟ್​ಗೆ ಅಡಿ ಇರಿಸಿದ್ದರು. ಇದುವರೆಗೆ ಇಂಗ್ಲೆಂಡ್​ ಪರ ಅವರು 186 ಟೆಸ್ಟ್​ ಪಂದ್ಯ ಆಡಿ 698* ವಿಕೆಟ್​ ಕಿತ್ತಿದ್ದಾರೆ. 32 ಬಾರಿ 5 ವಿಕೆಟ್​ ಗೊಂಚಲು ಪಡೆದ ಸಾಧನೆ ಮಾಡಿದ್ದಾರೆ. ಮೂರು ಸಲ 10 ವಿಕೆಟ್​ ಪಡೆದಿದ್ದಾರೆ.

Exit mobile version