Site icon Vistara News

IND vs ENG: ಜೈಸ್ವಾಲ್​ ಸಾಧನೆಯನ್ನು ಕೊಂಡಾಡಿದ ಇರ್ಫಾನ್​ ಪಠಾಣ್

Yashasvi Jaiswal smashed a six before the lunch break

ವಿಶಾಖಪಟ್ಟಣಂ: ಭಾರತ ತಂಡದ ಪರ ಅಮೋಘ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿರುವ ಯುವ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal)​ ಅವರ ಸಾಧನೆಗೆ ಟೀಮ್​ ಇಂಡಿಯಾದ ಮಾಜಿ ವೇಗಿ ಇರ್ಫಾನ್​ ಪಠಾಣ್​ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಹೇಳಿದ್ದಾರೆ.

ಇಂಗ್ಲೆಂಡ್(IND vs ENG)​ ವಿರುದ್ಧ ವಿಶಾಖಪಟ್ಟಣಂನಲ್ಲಿ ಸಾಗುತ್ತಿರುವ ದ್ವಿತೀಯ ಟೆಸ್ಟ್​ನ ಮೊದಲ ದಿನ ಭಾರತ 6 ವಿಕೆಟ್​ಗೆ 336 ಬಾರಿಸಿದೆ. ಈ ಮೊತ್ತ ದಾಖಲಿಸಲು ಯಶಸ್ವಿ ಜೈಸ್ವಾಲ್​ ಅವರ ಅಜೇಯ 179*ರನ್​ಗಳ ಪ್ರದರ್ಶನ ಕಾರಣ. ಆಂಗ್ಲರ ದಿಟ್ಟ ಬೌಲಿಂಗ್​ ದಾಳಿಯನ್ನು ಎದುರಿಸಿದ ನಿಂತ ಅವರು ಭಯಭೀತರಾಗಿ ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು.

ಅನುಭವಿ ಆಟಗಾರರು ಕೂಡ ಇವರ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಇರ್ಫಾನ್​ ಪಠಾಣ್​ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಜೈಸ್ವಾಲ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, “ಮನೆ ಇಲ್ಲದ ಕಾರಣಕ್ಕೆ ಮೈದಾನದಲ್ಲೇ ಮಲಗುತ್ತಿದ್ದ ಆಟಗಾರ ಇಂದು ದಿಗ್ಗಜ ಆಟಗಾರರ ಜತೆ ಮೈದನಾದಲ್ಲಿ ಆಡುತ್ತಿದ್ದಾನೆ. ತನ್ನ ಬ್ಯಾಟಿಂಗ್​ ಬಲದ ಮೂಲಕ ಹಿರಿಯ ಆಟಗಾರರನ್ನೇ ಮೈದಾನ ತುಂಬ ಓಡಾಡುವಂತೆ ಮಾಡಿದ್ದಾನೆ. ಎದುರಾಳಿಗಳ ನಿದ್ರೆ ಕೆಡಿಸಿದ್ದಾನೆ. ಅದ್ಭುತವಾಗಿ ಆಡಿದ್ದೀರಿ ಯಶಸ್ವಿ ಜೈಸ್ವಾಲ್‌” ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಊಟಕ್ಕೆ ದುಡ್ಡಿಲ್ಲದೆ, ಮಲಗಲು ಜಾಗವಿಲ್ಲದೇ ಅನಾಥವಾಗಿದ್ದ ಜೈಸ್ವಾಲಗೆ, ಮುಸ್ಲಿಂ ಯುನೈಟೆಡ್‌ ಕ್ಲಬ್‌ ಪರ ಆಡಲು ಅವಕಾಶ ದೊರೆಯಿತು. ಅಲ್ಲೇ ಮಲಗಲು ಜಾಗವೂ ಸಿಕ್ಕಿತು. ಆದರೆ, ಕ್ರಿಕೆಟ್‌ ಕಿಟ್‌, ಊಟದ ವ್ಯವಸ್ಥೆ ಈತನೇ ನೋಡಿಕೊಳ್ಳಬೇಕಿತ್ತು. ಹಾಗಾಗಿ ಬಿಡುವಿನ ವೇಳೆ ಪಾನಿಪುರಿ ಮಾರಾಟ ಮಾಡಲು ಶುರುಮಾಡಿದ್ದ. ಬಡಕುಟುಂಬದಿಂದ ಬಂದು ಇದೇ ರೀತಿಯ ಕ್ಷಣಗಳನ್ನು ಎದುರಿಸಿದ್ದ ಕೋಚ್‌ ಜ್ವಾಲಾ ಸಿಂಗ್‌, ಯುವಕನ ಪ್ರತಿಭೆಯನ್ನು ಗುರುತಿಸಿ, ಪ್ರತಿದಿನ ಬೆಳಗ್ಗೆ, ಸಂಜೆ ಕೋಚಿಂಗ್‌ ನೀಡಿ ಹಾಗೂ ಆತನಿಗೆ ಅಗತ್ಯವಿದ್ದ ಕಿಟ್‌ ಕೊಡಿಸಿ, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್‌ಗೆ 12 ನೇ ವರ್ಷ ವಯಸ್ಸಿದ್ದಾಗಲೇ ಜೈಸ್ವಾಲ್‌ ಕುಟುಂಬ ಉತ್ತರ ಪ್ರದೇಶದ ಬದೋಹಿಯಿಂದ ಮುಂಬೈಗೆ ಶಿಫ್ಟ್‌ ಆಗಿತ್ತು.

ಇದನ್ನೂ ಓದಿ IND vs ENG: ಯಶಸ್ವಿ ಜೈಸ್ವಾಲ್​ ಅಜೇಯ ಶತಕ; ಬೃಹತ್​ ಮೊತ್ತದತ್ತ ಭಾರತ

ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಯಶಸ್ವಿ ಜೈಸ್ವಾಲ್​ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಒತ್ತ ನೀಡಿದರು. ಕ್ರೀಸ್​ಗೆ ಅಂಟಿಕೊಂಡ ತಕ್ಷಣ ಆಂಗ್ಲರ ಬೌಲಿಂಗ್​ ದಾಳಿಯನ್ನು ಪುಡಿಗಟ್ಟಲು ಆರಂಭಿಸಿದ ಅವರು ಸಿಕ್ಸರ್​ ಮೂಲಕವೇ ತಮ್ಮ ಶತಕವನ್ನು ಪೂರ್ತಿಗೊಳಿಸಿದರು. ಈ ಶತಕ ಬಾರಿಸುವ ಮೂಲಕ 23 ವರ್ಷ ತುಂಬುವ ಮೊದಲು ತವರು ಮತ್ತು ವಿದೇಶದ ಟೆಸ್ಟ್​ನಲ್ಲಿ ಶತಕ ಬಾರಿಸಿದ 4ನೇ ಭಾರತೀಯ ಆಟಗಾರ ಎನಿಸಿಕೊಂಡರು. ರವಿ ಶಾಸ್ತ್ರಿ(Ravi Shastri), ಸಚಿನ್ ತೆಂಡೂಲ್ಕರ್(Shastri,Sachin Tendulkar), ವಿನೋದ್ ಕಾಂಬ್ಳಿ(Vinod Kambli) ಈ ಸಾಧನೆ ಮಾಡಿದ ಉಳಿದ ಮೂವರು ಆಟಗಾರರಾಗಿದ್ದಾರೆ. ಅಚ್ಚರಿ ಎಂದರೆ ಈ ಸಾಧನೆ ಮಾಡಿದ ನಾಲ್ಕು ಮಂದಿ ಆಟಗಾರರು ಕೂಡ ಮುಂಬೈ ಪರ ರಣಜಿ ಆಡಿದ ಆಟಗಾರರಾಗಿದ್ದಾರೆ.

ಜೈಸ್ವಾಲ್​ ಶತಕ ಬಾರಿಸುವ ಮೂಲಕ ಟೆಸ್ಟ್‌ನ ಮೊದಲ ದಿನವೇ ಅತಿ ಹೆಚ್ಚು ರನ್ ಬಾರಿಸಿದ 6ನೇ ಭಾರತೀಯ ಎಂಬ ಹಿರಿಮೆಗೆ ಪಾತ್ರರಾದರು. ವೀರೇಂದ್ರ ಸೆಹವಾಗ್​ ಮೊದಲಿಗ. ಸೆಹವಾಗ್​ ಪಾಕಿಸ್ತಾನ ವಿರುದ್ಧ 2004ರಲ್ಲಿ ಮುಲ್ತಾನ್​ನಲ್ಲಿ ನಡೆದ ಟೆಸ್ಟ್​ ಪಂದ್ಯದ ಮೊದಲ ದಿನವೇ 228 ರನ್​ ಬಾರಿಸಿದ್ದರು. ದ್ವಿತೀಯ ಸ್ಥಾನದಲ್ಲಿಯೂ ಸೆಹವಾಗ್​ ಕಾಣಿಸಿಕೊಂಡಿದ್ದಾರೆ 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೊರ್ನ್​ನಲ್ಲಿ ನಡೆದಿದ್ದ ಟೆಸ್ಟ್​ನಲ್ಲಿ ಅವರು 195 ರನ್​ ಗಳಿಸಿದ್ದರು. ಇದೀಗ ಜೈಸ್ವಾಲ್​ ಟೆಸ್ಟ್​ನ ಮಪದಲ ದಿನವೇ 179* ಬಾರಿಸಿ ಈ ಸಾಧನೆ ಮಾಡಿದ 6ನೇ ಭಾರತೀಯ ಬ್ಯಾಟರ್​ ಎನಿಸಿಕೊಂಡಿದ್ದಾರೆ.

Exit mobile version