Site icon Vistara News

IND vs SL: ಶ್ರೀಲಂಕಾ ಪ್ರವಾಸಕ್ಕೆ ಇಂದು ಭಾರತ ತಂಡ ಪ್ರಕಟ ಸಾಧ್ಯತೆ: ಯಾರಿಗೆಲ್ಲ ಸಿಗಲಿದೆ ಅವಕಾಶ?

IND vs SL

IND vs SL: India Squad Announcement for Sri Lanka Tour; Teams to be Picked Today

ಮುಂಬಯಿ: ಮುಂಬರುವ ಶ್ರೀಲಂಕಾ(IND vs SL) ಪ್ರವಾಸಕ್ಕೆ ಭಾರತ(India tour of Sri Lanka) ತಂಡದ ಆಯ್ಕೆ ಇಂದು ಅಥವಾ ನಾಳೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ರೋಹಿತ್​ ಮತ್ತು ಕೊಹ್ಲಿ ಸೇರಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ಖಚಿತ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕನ್ನಡಿಗ ಕೆ.ಎಲ್​ ರಾಹುಲ್ ಏಕದಿನ, ಹಾರ್ದಿಕ್​ ಪಾಂಡ್ಯ ಟಿ20ಯಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.

ರೋಹಿತ್ ಶರ್ಮಾ ವಿರಾಮ ತೆಗೆದುಕೊಳ್ಳದೆ ಸುಮಾರು ಆರು ತಿಂಗಳು ಕಳೆದಿದೆ. ಸುದೀರ್ಘವಾಗಿ ಆಡುತ್ತಿರುವ ಕಾರಣದಿಂದ ಅವರಿಗೆ ಬಿಸಿಸಿಐ ವಿಶ್ರಾಂತಿ ನೀಡಲು ಬಯಸಿದೆ ಎನ್ನಲಾಗಿದೆ. ಜತೆಗೆ ಕೊಹ್ಲಿಯೂ ವಿಶ್ರಾಂತಿ ನೀಡಲಾಗುವುದು ಎಂದು ವರದಿಯಾಗಿದೆ. ತವರಿನ ದೀರ್ಘ ಟೆಸ್ಟ್ ಋತುವಿನ ಹಿನ್ನಲೆಯಲ್ಲಿ ಉಭಯ ಆಟಗಾರರಿಗೆ ವಿಶ್ರಾಂತಿ ನೀಡಲು ಯೋಚಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಕ್ರಿಕ್​ಇನ್ಫೋ ತನ್ನ ವರದಿಯಲ್ಲಿ ತಿಳಿಸಿದೆ. ಜಸ್​ಪ್ರೀತ್​ ಬುಮ್ರಾ ಮತ್ತು ಮೊಹಮ್ಮದ್​ ಸಿರಾಗ್​ಗೂ ವಿಶ್ರಾಂತಿ ನೀಡುವ ಸಾಧ್ಯತೆ ಕಂಡುಬಂದಿದೆ.

ಕೆಎಲ್ ರಾಹುಲ್ ಟಿ 20 ವಿಶ್ವಕಪ್​​ ಗೆ ಹೋಗಿದ್ದ ಭಾರತದ ತಂಡದಿಂದ ಹೊರಗುಳಿದಿದ್ದರು. ಆದರೆ ಈಗ ಶ್ರೀಲಂಕಾ ಪ್ರವಾಸದ ಏಕದಿನ ಹಂತದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ನಾಯಕತ್ವದ ಪಾತ್ರವನ್ನು ಸಹ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ವರದಿ ಪ್ರಕಾರ ಸಂಜು ಸ್ಯಾಮ್ಸನ್ ಕೂಡ ಏಕದಿನ ಮತ್ತು ಟಿ20 ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆದಿದ್ದರೂ ಕೂಡ ಅಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಜಿಂಬಾಬ್ವೆ ಸರಣಿಯಲ್ಲಿ ಒಂದು ಅರ್ಧಶತಕ ಬಾರಿಸಿ ಮಿಂಚಿದ್ದರು. ಹೀಗಾಗಿ ಲಂಕಾ ಸರಣಿಗೂ ಆಯ್ಕೆಯಾಗಬಹುದು. ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದ ತಂಡದಲ್ಲಿ ಸ್ಥಾನ ಪಡೆದಿದ್ದ ರಿಯಾನ್ ಪರಾಗ್, ಸಾಯಿ ಸುದರ್ಶನ್ ಮತ್ತು ಜಿತೇಶ್ ಶರ್ಮಾಗೂ ಅವಕಾಶ ಸಿಗುವುದು ಕಷ್ಟ ಸಾಧ್ಯ.

ಇದನ್ನೂ ಓದಿ KL Rahul : ಕೆ. ಎಲ್ ರಾಹುಲ್​ ಎಲ್​ಎಸ್​ಜಿ ತಂಡದಿಂದ ಹೊರಕ್ಕೆ, ಆಂತರಿಕ ಗುಟ್ಟು ಬಿಟ್ಟುಕೊಟ್ಟ ಅಮಿತ್ ಮಿಶ್ರಾ

ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ 26ರಿಂದ ಟಿ20 ಪಂದ್ಯ ಆರಂಭವಾಗಬೇಕಿತ್ತು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಬೇಕಿತ್ತು. ಏಕದಿನ ಆಗಸ್ಟ್​ 1ರದ ಬದಲಾಗಿ ಆಗಸ್ಟ್​ 2ರಿಂದ ಆರಂಭಗೊಳ್ಳಲಿದೆ. ಉಳಿದ ಪಂದ್ಯಗಳ ದಿನಾಂಕ ಬದಲಾಗಲಿಲ್ಲ. ಈ ಹಿಂದಿನಂತೆ ಆಗಸ್ಟ್​ 4 ಮತ್ತು 7ರಂದೇ ನಡೆಯಲಿದೆ.

2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಉಭಯ ತಂಡಗಳು ಹೊಸ ಕೋಚ್​ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ. ಗಂಭೀರ್‌ಗೆ ಶ್ರೀಲಂಕಾ ವಿರುದ್ಧದ ಸರಣಿ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಲಂಕಾ, ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಆಡಲಿದೆ.

Exit mobile version