ಹರಾರೆ : ಜಿಂಬಾಬ್ವೆ ವಿರುದ್ಧದ ಏಕ ದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡದ ನಾಯಕ ಕೆ. ಎಲ್ ರಾಹುಲ್ ಟಾಸ್ ಗೆದ್ದಿದ್ದು, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಸಿರಾಜ್‌ಗೆ ವಿಶ್ರಾಂತಿ ಕಲ್ಪಿಸಿ ಆವೇಶ್ ಖಾನ್‌ಗೆ ಅವಕಾಶ ನೀಡಲಾಗಿದೆ. ಅಂತೆಯೆ ಮೊದಲ ಪಂದ್ದಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ದೀಪಕ್ ಚಾಹರ್ ಮತ್ತೆ ಆಡುವ ಹನ್ನೊಂದರ ಬಳಗಕ್ಕೆ ಎಂಟ್ರಿ ಪಡೆದುಕೊಂಡಿದ್ದಾರೆ. ಅವರು ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆ ಪಂದ್ಯದಲ್ಲಿ ಶಾರ್ದುಲ್ ಠಾಕೂರ್ ಆಡಿದ್ದರು. ಇವರಿಗೆ ಪ್ರಸಿದ್ಧ್ ಕೃಷ್ಣ ಜಾಗ ಕಲ್ಪಿಸಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಗೆದ್ದಿರುವ ಭಾರತ ತಂಡ ಮೂರು ಪಂದ್ಯಗಳ ಸರಣಿಯಲ್ಲಿ ೨-೧ರ ಮುನ್ನಡೆ ಪಡೆದುಕೊಂಡಿದ್ದು, ಈ ಪಂದ್ಯವನ್ನು ಗೆದ್ದರೆ ಸರಣಿ ಕ್ಲೀನ್ ಸ್ವೀಪ್ ಆಗಲಿದೆ. ಭಾರತ ತಂಡ ಟಾಸ್ ಗೆಲ್ಲುವುದರೊಂದಿಗೆ ಹಂಗಾಮಿ ನಾಯಕ ಕೆ. ಎಲ್ ರಾಹುಲ್ ಮೂರೂ ಪಂದ್ಯಗಳಲ್ಲಿ ಟಾಸ್ ಗೆದ್ದಂತಾಗಿದೆ.
ಭಾರತ ತಂಡ :
ಕೆ. ಎಲ್ ರಾಹುಲ್(ನಾಯಕ), ಶಿಖರ್ ಧವನ್, ಶುಬ್ಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ದೀಪಕ್ ಚಾಹರ್, ಶಾರ್ದುಲ್ ಠಾಕೂರ್, ಕುಲ್ದೀಪ್ ಯಾದವ್, ಆವೇಶ್ ಖಾನ್.