ಬೆಂಗಳೂರು: ಎಡ ಪಾದದ ಗಾಯಕ್ಕೀಡಾಗಿ (left ankle) ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ರಜತ್ ಪಾಟಿದಾರ್ ಹೊರಬಿದ್ದಿದ್ದಾರೆ. ಪಾಟಿದಾರ್ ಗಾಯಗೊಂಡಿರುವುದು ಆರ್ಸಿಬಿಗೆ ಚಿಂತೆಗೀಡು ಮಾಡಿದೆ. ಇನ್ನೆರಡು ವಾರಗಳಲ್ಲಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಅದರದಲ್ಲೂ ಮಾರ್ಚ್ 22ರಂದು ನಡೆಯುವ ಉದ್ಘಾಟನ ಪಂದ್ಯದಲ್ಲಿ ಆರ್ಸಿಬಿ ಬದ್ಧ ಎದುರಾಳಿ ಚೆನ್ನೈ ವಿರುದ್ಧ ಆಡಲಿದೆ.
ಹಿಮ್ಮಡಿ ಗಾಯದ ಕಾರಣದಿಂದ ರಜತ್ ಪಾಟಿದಾರ್ ಅವರು 2023ರ ಐಪಿಎಲ್ನಿಂದಲೂ ಸಂಪೂರ್ಣವಾಗಿ ಹೊರಗುಳಿದಿದ್ದರು. ಇದೀಗ ಮತ್ತೆ ಗಾಯಗೊಂಡ ಅವರು ಈ ಬಾರಿಯ ಟೂರ್ನಿಗೂ ಅಲಭ್ಯರಾಗಲಿದ್ದಾರಾ ಎಂದು ಆರ್ಸಿಬಿಗೆ ಆತಂಕವೊಂದು ಸೃಷ್ಟಿಯಾಗಿದೆ. ಭಾರತ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟೆಸ್ಟ್ನಲ್ಲಿ ಆಡಿದ್ದ ಪಾಟಿದಾರ್ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿರಲಿಲ್ಲ.
UPDATE: Rajat Patidar got hit on his left ankle during Team India's practice session on 6th March, 2024. He pulled up sore on the morning of the game and was not available for selection for the 5th Test.#TeamIndia | #INDvENG | @IDFCFIRSTBank
— BCCI (@BCCI) March 7, 2024
ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಇದನ್ನೂ ಓದಿ IPL 2024: ಟಾಟಾ ಐಪಿಎಲ್ 2024ಗಾಗಿ ಕೈಜೋಡಿಸಿದ ಜಿಯೋ ಸಿನಿಮಾ, ಎಂ.ಎಸ್.ಧೋನಿ; ಹೊಸ ಅವತಾರದಲ್ಲಿ ಕೂಲ್ ಕ್ಯಾಪ್ಟನ್!
ಆರ್ಸಿಬಿ ಪಂದ್ಯಗಳ ವಿವರ ಇಲ್ಲಿದೆ
- ಪಂದ್ಯ ಸಂಖ್ಯೆ 1: ಸಿಎಸ್ಕೆ-ಆರ್ಸಿಬಿ, ಮಾರ್ಚ್ 22; ಸಮಯ: ರಾತ್ರಿ 8.00ಗೆ, ಸ್ಥಳ: ಚೆನ್ನೈ
- ಪಂದ್ಯ ಸಂಖ್ಯೆ 6: ಪಂಜಾಬ್-ಆರ್ಸಿಬಿ, ಮಾರ್ಚ್ 25; ಸಮಯ: ರಾತ್ರಿ: 7.30; ಸ್ಥಳ ಬೆಂಗಳೂರು
- ಪಂದ್ಯ ಸಂಖ್ಯೆ 10: ಕೆಕೆಆರ್-ಆರ್ಸಿಬಿ, ಮಾರ್ಚ್ 29, ಸಮಯ: ರಾತ್ರಿ 7.30; ಸ್ಥಳ: ಬೆಂಗಳೂರು
- ಪಂದ್ಯ ಸಂಖ್ಯೆ 15: ಎಲ್ಎಸ್ಜಿ-ಆರ್ಸಿಬಿ, ಏಪ್ರಿಲ್ 2; ಸಮಯ 7.30; ಸ್ಥಳ: ಬೆಂಗಳೂರು
- ಪಂದ್ಯ ಸಂಖ್ಯೆ 19: ರಾಜಸ್ಥಾನ್-ಆರ್ಸಿಬಿ, ಏಪ್ರಿಲ್ 6, ಸಮಯ 7.30; ಸ್ಥಳ ಜೈಪುರ
ತಂಡದ ವಿವರ ಇಲ್ಲಿವೆ
ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ, ಕ್ಯಾಮರಾನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.