Site icon Vistara News

IPL 2024: 13 ವರ್ಷದ ಐಪಿಎಲ್​ ದಾಖಲೆ ಮುರಿದ ಮಾರ್ಕಸ್​ ಸ್ಟೋಯಿನಿಸ್

Marcus Stoinis

ಚೆನ್ನೈ: ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ವಿರುದ್ಧದ ಮಂಗಳವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಅಜೇಯ 124 ರನ್​ ಗಳಿಸಿ ಶತಕ ಬಾರಿಸಿದ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡದ, ಆಸ್ಟ್ರೇಲಿಯಾ ಆಟಗಾರ ಮಾರ್ಕಸ್​ ಸ್ಟೋಯಿನಿಸ್(Marcus Stoinis)​ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ಮಾಜಿ ಆಟಗಾರ ಪಾಲ್​ ವಾಲ್ತಾಟಿ ದಾಖಲೆಯನ್ನು ಮುರಿದಿದ್ದಾರೆ.

ಸ್ಟೋಯಿನಿಸ್​ ಅವರು ಅಜೇಯ 124 ರನ್​ ಬಾರಿಸುವ ಮೂಲಕ ಚೇಸಿಂಗ್​ ವೇಳೆ ಐಪಿಎಲ್​ನಲ್ಲಿ ಅ್ಯಧಿಕ ವೈಯಕ್ತಿಕ ರನ್​ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಇದಕ್ಕೂ ಮುನ್ನ ಈ ದಾಖಲೆ ಪಾಲ್​ ವಾಲ್ತಾಟಿ ಹೆಸರಿನಲ್ಲಿತ್ತು. ಕಾಕತಾಳಿಯವೆಂದರೆ ವಾಲ್ತಾಟಿ ಕೂಡ ಚೆನ್ನೈ ವಿರುದ್ಧವೇ ಈ ದಾಖಲೆ ಬರೆದಿದ್ದರು. 2011ರಲ್ಲಿ ಪಂಜಾಬ್​ ಪರ ಆಡಿದ ವಾಲ್ತಾಟಿ ಅಜೇಯ 120 ರನ್​ ಬಾರಿಸಿದ್ದರು. ಇದೀಗ 13 ವರ್ಷಗಳ ಬಳಿಕ ಈ ದಾಖಲೆಯನ್ನು ಸ್ಟೋಯಿಸಿಸ್​ ಮುರಿದಿದ್ದಾರೆ.

ಇದನ್ನೂ ಓದಿ IPL 2024 Points Table: ಚೆನ್ನೈಗೆ ಹೀನಾಯವಾಗಿ ಸೋಲುಣಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಲಕ್ನೋ

ಚೇಸಿಂಗ್​ ವೇಳೆ ಅತ್ಯಧಿಕ ರನ್​ ಗಳಿಸಿದ ಆಟಗಾರರು


ಮಾರ್ಕಸ್​ ಸ್ಟೋಯಿನಿಸ್​-124* ರನ್​, ಚೆನ್ನೈ ವಿರುದ್ಧ (2024)

ಪಾಲ್​ ವಾಲ್ತಾಟಿ-120* ರನ್​, ಚೆನ್ನೈ ವಿರುದ್ಧ (2011)

ವೀರೇಂದ್ರ ಸೆಹವಾಗ್​-119 ರನ್​, ಡೆಕ್ಕನ್​ ಚಾರ್ಜಸ್​ ವಿರುದ್ಧ (2011)

ಸಂಜು ಸ್ಯಾಮ್ಸನ್​-119 ರನ್​, ಪಂಜಾಬ್​ ವಿರುದ್ಧ (2021)

ಶೇನ್​ ವಾಟ್ಸನ್​-117* ರನ್​, ಸನ್​ರೈಸರ್ಸ್​ ವಿರುದ್ಧ (2018)

ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಲಕ್ನೋ 19.3 ಓವರ್‌ ಗಳಲ್ಲಿ 4 ವಿಕೆಟ್‌ಗೆ 213 ರನ್‌ ಗಳಿಸಿ, 6 ವಿಕೆಟ್‌ ಗಳಿಂದ ಜಯಭೇರಿ ಬಾರಿಸಿತು.

ಚೇಸಿಂಗ್​ ವೇಳೆ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಮಾರ್ಕಸ್‌ ಸ್ಟಾಯಿನಿಸ್‌ 63 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್‌ಗಳ ಸಮೇತ ಅಜೇಯ 124 ರನ್‌ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ಅಂತಿಮ ಓವರ್​ ತನಕ ಪಂದ್ಯ ಚೆನ್ನೈ ತಂಡದ ಕೈಯಲ್ಲಿತ್ತು. ಮುಸ್ತಫಿಜುರ್‌ ಎಸೆದ ಈ ಓವರ್​ನಲ್ಲಿ 20 ರನ್‌ ಹರಿದು ಬಂತು. ಇದು ಚೆನ್ನೈ ಸೋಲಿಗೆ ಪ್ರಮುಖ ಕಾರಣ. ಋತುರಾಜ್‌ 60 ಎಸೆತ ಎದುರಿಸಿ, 12 ಬೌಂಡರಿ , 3 ಸಿಕ್ಸರ್‌ಗಳೊಂದಿಗೆ 108 ರನ್‌ ಚಚ್ಚಿ ಶತಕ ಬಾರಿಸಿದರು. ಆದರೆ ಸೋಲಿನಿಂದ ಅವರ ಶತಕ ವ್ಯರ್ಥಗೊಂಡಿತು.

Exit mobile version