Site icon Vistara News

IPL 2024: ಐಪಿಎಲ್‌ ಉದ್ಘಾಟನಾ ಸಮಾರಂಭದಲ್ಲಿ ಎ.ಆರ್ ರೆಹಮಾನ್, ಸೋನು ನಿಗಮ್ ಗಾನ ವೈಭವ

IPL 2024 opening ceremony

ಬೆಂಗಳೂರು: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್​ ಲೀಗ್​ ಆಗಿರುವ ಐಪಿಎಲ್​ನ​(IPL 2024) 17ನೇ ಆವೃತ್ತಿ ಮಾರ್ಚ್​ 22ರಿಂದ ಆರಂಭಗೊಳ್ಳಲಿದೆ. ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಆರ್​ಸಿಬಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಇದೀಗ ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ(IPL 2024 opening ceremony) ಎ.ಆರ್ ರೆಹಮಾನ್(AR Rahman), ಸೋನು ನಿಗಮ್(Sonu Nigam), ಟೈಗರ್ ಶ್ರಾಫ್(Tiger Shroff), ಅಕ್ಷಯ್ ಕುಮಾರ್(Akshay Kumar) ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಗೊಂಡಿದೆ. ಚುನಾವಣೆ ನಡೆಯುವ ತನಕ ಪಂದ್ಯಗಳನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ. ಇಲ್ಲಿ ನಷ್ಟವಾದ ದಿನಗಳ ಪಂದ್ಯಗಳನ್ನು ಸರಿದೂಗಿಸಲು ಹೆಚ್ಚಿನ ಡಬಲ್-ಹೆಡರ್‌ ಪಂದ್ಯಗಳನ್ನು ನಡೆಸಲು ಬಿಸಿಸಿಐ ಮತ್ತು ಐಪಿಎಲ್​ ಆಡಳಿತ ಮಂಡಳಿ ಯೋಚಿಸುತ್ತಿದೆ.

ಕಳೆದ ಬಾರಿ ಅಹಮದಾಬಾದ್​ನಲ್ಲಿ ನಡೆದಿದ್ದ ಉದ್ಘಾಟನ ಸಮಾರಂಭದಲ್ಲಿ ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ತಮನ್ನಾ ಭಾಟಿಯಾ ನೃತ್ಯ ಪ್ರದರ್ಶನ ತೋರಿದ್ದರು. ಪ್ರಸಕ್ತ ಸಾಗುತ್ತಿರುವ ಮಹಿಳಾ ಪ್ರೀಮಿಯರ್​ ಲೀಗ್​ನ 2ನೇ ಆವೃತ್ತಿಯ ಉದ್ಘಾಟನ ಸಮಾರಂಭದಲ್ಲಿ ನಟರಾದ ಶಾರುಖ್​ ಖಾನ್​, ಶಾಹಿದ್ ಕಪೂರ್, ಟೈಗರ್ ಶ್ರಾಫ್, ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ IPL 2024: ಡೆಲ್ಲಿ ತಂಡಕ್ಕೆ ಎಂಟ್ರಿ ಕೊಟ್ಟ ವಿಶ್ವ ದಾಖಲೆಯ ಶತಕ ವೀರ; ಎದುರಾಳಿಗಳಿಗೆ ನಡುಕ!

ಮೊದಲ ಹಂತದ ವೇಳಾಪಟ್ಟಿ

ಮಾ.22: ರಾತ್ರಿ 7:30: ಆರ್​ಸಿಬಿ vsಚೆನ್ನೈ ಸೂಪರ್‌ ಕಿಂಗ್ಸ್‌ -ಚೆನ್ನೈ

ಮಾ.23: ಮಧ್ಯಾಹ್ನ 3:30: ಪಂಜಾಬ್​ vsಡೆಲ್ಲಿ – ಮೊಹಾಲಿ

ಮಾ.23: ರಾತ್ರಿ 7:30 : ಕೆಕೆಆರ್​ vs ಸನ್​ರೈಸರ್ಸ್​, – ಕೋಲ್ಕತ್ತಾ

ಮಾ. 24 ಮಧ್ಯಾಹ್ನ 3:30: ರಾಜಸ್ಥಾನ್​ vs ಲಕ್ನೋ, ಜೈಪುರ್‌

ಮಾ. 24 ರಾತ್ರಿ 7:30: ಗುಜರಾತ್‌ vs ಮುಂಬೈ ಇಂಡಿಯನ್ಸ್‌, ಅಹಮದಾಬಾದ್

ಮಾ.25 ರಾತ್ರಿ 7:30:ಆರ್​ಸಿಬಿ vs ಪಂಜಾಬ್​, ಬೆಂಗಳೂರು

ಮಾ.26: ರಾತ್ರಿ 7:30: ಸಿಎಸ್ ಕೆ vs ಗುಜರಾತ್‌ ,ಚೆನ್ನೈ

ಮಾ.27: ರಾತ್ರಿ 7:30: ಸನ್​ರೈಸರ್ಸ್vs ಮುಂಬೈ , ಹೈದರಾಬಾದ್‌

ಮಾ.28: ರಾತ್ರಿ 7:30: ರಾಜಸ್ಥಾನ್​ vs ಡೆಲ್ಲಿ, ಜೈಪುರ್

ಮಾ.29: ರಾತ್ರಿ 7:30 ಆರ್​ಸಿಬಿ vs ಕೆಕೆಆರ್​ ,ಬೆಂಗಳೂರು

ಮಾ.30: ರಾತ್ರಿ 7:30 ಲಕ್ನೋ vs ಪಂಜಾಬ್​ ,ಲಕ್ನೋ

ಮಾ.31 ಮಧ್ಯಾಹ್ನ 3:30: ಗುಜರಾತ್​ vs ಸನ್​ರೈಸರ್ಸ್ ,ಅಹಮದಬಾದ್‌

ಮಾ.31 ರಾತ್ರಿ: 7:30 : ಡೆಲ್ಲಿ vs ಚೆನ್ನೈ -ವಿಶಾಖಪಟ್ಟಣಂ

ಎಪ್ರಿಲ್​ 1 ಮುಂಬೈ vs ರಾಜಸ್ಥಾನ್ ಸಂಜೆ 7:30 ಮುಂಬೈ

ಎಪ್ರಿಲ್​ 2 ಆರ್​ಸಿಬಿ vs ಲಕ್ನೋ ಸಂಜೆ 7:30 ಬೆಂಗಳೂರು

ಎಪ್ರಿಲ್​ 3 ಡೆಲ್ಲಿ vs ಕೆಕೆಆರ್ ಸಂಜೆ 7:30 ವೈಜಾಗ್

ಎಪ್ರಿಲ್​ 4 ಗುಜರಾತ್ vs ಪಂಜಾಬ್ ಸಂಜೆ 7:30 ಅಹಮದಾಬಾದ್

ಎಪ್ರಿಲ್​ 5 ಹೈದರಾಬಾದ್ vs ಚೆನ್ನೈ ಸಂಜೆ 7:30 ಹೈದರಾಬಾದ್

ಎಪ್ರಿಲ್​ 6 ರಾಜಸ್ಥಾನ್ vs ಆರ್​ಸಿಬಿ ಸಂಜೆ 7:30 ಜೈಪುರ

ಎಪ್ರಿಲ್​ 7 ಮುಂಬೈ vs ಡೆಲ್ಲಿ ಮಧ್ಯಾಹ್ನ 3:30 ಮುಂಬೈ

ಎಪ್ರಿಲ್​ 7 ಲಕ್ನೋ vs ಗುಜರಾತ್ ಸಂಜೆ 7:30 ಲಕ್ನೋ

Exit mobile version