Site icon Vistara News

IPL 2024: ಆರ್​ಸಿಬಿ ತಂಡದ ಹೀನಾಯ ಪ್ರದರ್ಶನಕ್ಕೆ ಕಾರಣ ತಿಳಿಸಿದ ಮಾಜಿ ಆಟಗಾರ

IPL 2024

ಬೆಂಗಳೂರು: ಈ ಬಾರಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ ಆರ್​ಸಿಬಿ(RCB) ತಂಡ ಅತ್ಯಂತ ಕಳಪೆ ಪ್ರದರ್ಶನದ ಮೂಲಕ ಸುದ್ದಿಯಲ್ಲಿದೆ. ತಂಡದ ಸೋಲಿಗೆ ಕಾರಣವೇನು ಎಂಬುದನ್ನು ಹಲವು ಕ್ರಿಕೆಟಿಗರು ಈಗಾಗಲೇ ತಿಳಿಸಿದ್ದಾರೆ. ಈ ಸಾಲಿಗೆ ಇದೀಗ ಟೀಮ್​ ಇಂಡಿಯಾದ ಮಾಜಿ ಡ್ಯಾಶಿಂಗ್​ ಓಪನ್​ ವೀರೇಂದ್ರ ಸೆಹವಾಗ್(Virender Sehwag)​ ಕೂಡ ಸೇರ್ಪಡೆಗೊಂಡಿದ್ದಾರೆ. ಅತಿಯಾದ ವಿದೇಶಿ ಆಟಗಾರರ ಹಾಗೂ ಸಿಬ್ಬಂದಿಗಳ ಮೋಹವೇ ಸೋಲಿಗೆ ಪ್ರಮುಖ ಕಾರಣ ಹೇಳಿದ್ದಾರೆ.

ಆರ್​ಸಿಬಿ ಈ ಬಾರಿ ಆಡಿದ 7 ಪಂದ್ಯಗಳಲ್ಲಿ ಹ್ಯಾಟ್ರಿಕ್ ಸೋಲು ಸೇರಿದಂತೆ ಒಟ್ಟು 6 ಪಂದ್ಯಗಳಲ್ಲಿ ಸೋಲು ಕಂಡಿದೆ. ಗೆದ್ದಿರುವುದು ಒಂದು ಪಂದ್ಯ ಮಾತ್ರ. ಅದರಲ್ಲೂ ತವರಿನ ಪಂದ್ಯದಲ್ಲೇ ಅತ್ಯಧಿಕ ಸೋಲು ಕಂಡ ತಂಡವೆಂಬ ಹಣೆಪಟ್ಟಿಯನ್ನು ಕೂಡ ಕಟ್ಟಿಕೊಂಡಿದೆ.

“ಆರ್​ಸಿಬಿ ತಂಡದಲ್ಲಿ 10 ವಿದೇಶಿ ಆಟಗಾರು ಅಲ್ಲದೆ ತಂಡದಲ್ಲಿರುವ ಸಂಪೂರ್ಣ ಕೋಚಿಂಗ್ ಸಿಬ್ಬಂದಿಗಳಾದ ಆಂಡಿ ಫ್ಲವರ್ ಹಾಗೂ ವೆಫ್ ಬೊಬಾಟ್ ಕೂಡ ವಿದೇಶಿಗಳಾಗಿದ್ದಾರೆ. ಇದು ಮಾತ್ರವಲ್ಲದೆ ಪ್ರತಿಭಾನ್ವಿತ ಆಟಗಾರರು ತಂಡದಲ್ಲಿದ್ದರೂ ಕೂಡ ಕಳೆದ 2 ವರ್ಷಗಳಿಂದ ಇವರು ಬೆಂಚ್​ ಮೇಲೆಯೇ ಕುಳಿತಿದ್ದಾರೆ. ಇದುವೇ ತಂಡದ ಸೋಲಿಗೆ ಪ್ರಮುಖ ಕಾರಣ” ಎಂದು ಸೆಹವಾಗ್​ ಅಭಿಪ್ರಾಯಪಟ್ಟಿದ್ದಾರೆ.

ತಂಡದದಲ್ಲಿ ಸ್ಟಾರ್​ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಆರ್​ಸಿಬಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ. ಬೌಲಿಂಗ್‌ ಪಡೆಯಂತೂ ಸಂಪೂರ್ಣ ಮೊನಚು ಕಳೆದುಕೊಂಡಿದೆ. ಇದು, ಸಹಜವಾಗಿ ಆರ್‌ಸಿಬಿಯನ್ನು ಸೋಲಿನ ಸುಳಿಗೆ ತಳ್ಳಿದೆ. ಒಟ್ಟಿನಲ್ಲಿ ಸಂಘಟನಾತ್ಮಕ ಹೋರಾಟವೇ ಬರುತ್ತಿಲ್ಲ. 

ಇದನ್ನೂ ಓದಿ IPL 2024: ಇನ್ನು ಮುಂದೆ ಐಪಿಎಲ್​ ಪಂದ್ಯದ ದಿನ ಮೈದಾನದ ಫೋಟೋ ಹಂಚಿಕೊಳ್ಳುವಂತಿಲ್ಲ; ಕಾರಣವೇನು?

ಈಗಾಗಲೇ ಆರ್​ಸಿಬಿ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.

Exit mobile version