Site icon Vistara News

IPL 2024: ಸಿಕ್ಸರ್​ ಮೂಲಕ ದಾಖಲೆ ಬರೆದ ಹಿಟ್​ಮ್ಯಾನ್​ ರೋಹಿತ್​

IPL 2024

ಮುಂಬಯಿ: ಪಂಜಾಬ್(Punjab Kings)​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ 250ನೇ ಐಪಿಎಲ್(IPL 2024)​ ಪಂದ್ಯಗಳನ್ನು ಪೂರ್ತಿಗೊಳಿಸಿದ ಹಿಟ್​ ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು ಇದೇ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಮುಂಬೈ ಇಂಡಿಯನ್ಸ್(Mumbai Indians)​ ತಂಡದ ಪರ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ.

ರೋಹಿತ್​ ಶರ್ಮ ಪಂಜಾಬ್​ ವಿರುದ್ಧ ಮೂರು ಸಿಕ್ಸರ್​ ಬಾರಿಸಿಸುವ ಮೂಲಕ ಮುಂಬೈ ತಂಡದ ಪರ ಅತ್ಯಧಿಕ ಸಿಕ್ಸರ್​ ಬಾರಿಸಿದ್ದ ಮಾಜಿ ಆಟಗಾರ ಕೈರಾನ್​ ಪೊಲಾರ್ಡ್ ಅವರ ದಾಖಲೆಯನ್ನು ಮುರಿದರು. ಪೊಲಾರ್ಡ್​ ಮುಂಬೈ ಪರ 223 ಸಿಕ್ಸರ್​ ಬಾರಿಸಿ ಇದುವರೆಗೆ ಅಗ್ರಸ್ಥಾನದಲ್ಲಿದ್ದರು. ಈ ದಾಖಲೆಯನ್ನು ರೋಹಿತ್​ ಮುರಿದಿದ್ದಾರೆ. ಸದ್ಯ ರೋಹಿತ್​ ಮುಂಬೈ ಪರ 224* ಸಿಕ್ಸರ್​ ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಹಾರ್ದಿಕ್​ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಪಾಂಡ್ಯ 104* ಸಿಕ್ಸರ್​ ಸಿಡಿಸಿದ್ದಾರೆ. ಇಶಾನ್​ ಕಿಶನ್​(104*) ಮತ್ತು ಸೂರ್ಯಕುಮಾರ್​(97*) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

ಮುಂಬೈ ಪರ ಅತ್ಯಧಿಕ ಸಿಕ್ಸರ್​ ಬಾರಿಸಿದ ಬ್ಯಾಟರ್​ಗಳು


ರೋಹಿತ್​ ಶರ್ಮ-224*

ಕೈರಾನ್​ ಪೊಲಾರ್ಡ್​-223

ಹಾರ್ದಿಕ್​ ಪಾಂಡ್ಯ-104*

ಇಶಾನ್​ ಕಿಶನ್​-103*

ಸೂರ್ಯಕುಮಾರ್​ ಯಾದವ್​-97*

ಮುಂಬೈ ಪರ ಮಾತ್ರವಲ್ಲದೆ ಈ ಬಾರಿಯ ಐಪಿಎಲ್​ನಲ್ಲಿ ತಂಡವೊಂದು ಪವರ್​ ಪ್ಲೇಯಲ್ಲಿ ಬಾರಿಸಿದ ಸಿಕ್ಸರ್​ಗಳಿಗಿಂತ ಹೆಚ್ಚು ರೋಹಿತ್​ ಒಬ್ಬರೆ ಹೆಚ್ಚಿನ ಸಿಕ್ಸರ್​ ಬಾರಿಸಿದ್ದಾರೆ. ರೋಹಿತ್​ ಈ ಬಾರಿ ಪವರ್​ ಪ್ಲೇಯಲ್ಲಿ 13 ಸಿಕ್ಸರ್​ ಬಾರಿಸಿದ್ದಾರೆ. ಲಕ್ನೋ ತಂಡ 12 ಸಿಕ್ಸರ್​ ಬಾರಿಸಿದೆ.

ಇದನ್ನೂ ಓದಿ IPL 2024: ಮುಂಬೈ ಗೆದ್ದರೂ ಪಾಂಡ್ಯಗಿಲ್ಲ ಖುಷಿ; ನಿಧಾನಗತಿಯ ಓವರ್​ಗೆ ಬಿತ್ತು 12 ಲಕ್ಷ ದಂಡ


ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಆಕ್ಷೇಪ


ಐಪಿಎಲ್​ನಲ್ಲಿ(IPL 2024) ಕಳೆದ ವರ್ಷ ಜಾರಿಗೆ ತಂದ ವಿನೂತನ ಇಂಪ್ಯಾಕ್ಟ್ ಪ್ಲೇಯರ್(Impact Player) ನಿಯಮದ ಬಗ್ಗೆ ಟೀಮ್​ ಇಂಡಿಯಾದ ನಾಯಕ, ಮುಂಬೈ ಇಂಡಿಯನ್ಸ್​ನ ಆಟಗಾರ ರೋಹಿತ್​ ಶರ್ಮ(Rohit Sharma) ಶರ್ಮ ​ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿಯಮದಿಂದ ಭಾರತೀಯ ಕ್ರಿಕೆಟ್‌ಗೆ ದೊಡ್ಡ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ರೋಹಿತ್​, ‘ಕ್ರಿಕೆಟ್ 11 ಜನ ಆಡುವ ಆಟ, 12 ಜನರಿಂದಲ್ಲ, ಇಂಪ್ಯಾಕ್ಟ್ ಆಟಗಾರ ನಿಯಮದಿಂದಾಗಿ ನೈಜ ಕ್ರಿಕೆಟ್​ಗೆ ಹಾನಿಯಾಗಿದೆ. ಇದು ಮನರಂಜನೆ ಒದಗಿಸಬಹುದೇ ಹೊರತು ಕ್ರಿಕೆಟ್​ ಬೆಳವಣಿಗೆಗೆ ಅಪಾಯಕಾರಿ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇಂಪ್ಯಾಕ್ಟ್ ನಿಯಮದಿಂದ ಓರ್ವ ಆಟಗಾರನಿಗೆ ತನ್ನ ಸಾಮರ್ಥ್ಯವನ್ನು ತೋರ್ಪಡಿಸುವ ಅವಕಾಶ ಸಿಗುತಿಲ್ಲ. ಉದಾಹರಣೆಗೆ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಸೇರಿದಂತೆ ಅನೇಕ ಆಲ್ರೌಂಡರ್‌ಗಳಿಗೆ ಬ್ಯಾಟಿಂಗ್​ ಸಿಕ್ಕರೆ ಬೌಲಿಂಗ್​ ಸಿಗುತ್ತಿಲ್ಲ. ಬೌಲಿಂಗ್​ ಸಿಕ್ಕರೆ ಬ್ಯಾಟಿಂಗ್​ ಸಿಗುತ್ತಿಲ್ಲ ಎಂದು ರೋಹಿತ್ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version