Site icon Vistara News

IPL 2024: ಐಪಿಎಲ್​ನ 2 ಗುಂಪು ಪ್ರಕಟ; ಒಂದೇ ಗುಂಪಿನಲ್ಲಿ ಆರ್​ಸಿಬಿ-ಚೆನ್ನೈ

IPL 2024

ಮುಂಬಯಿ: ಇಂಡಿಯನ್​ ಪ್ರೀಮಿಯರ್​ ಲೀಗ್ನ(IPL 2024) 17ನೇ ಆವೃತ್ತಿಯಲ್ಲಿ ಈಗಾಗಲೇ 5 ಪಂದ್ಯಗಳು ಮುಗಿದಿದ್ದು ಇದೀಗ ಕೂಟದ 2 ಗುಂಪುಗಳನ್ನು ಬಿಸಿಸಿಐ ಪ್ರಕಟಿಸಿದೆ. ಬದ್ಧ ಎದುರಾಳಿಗಳಾದ ಚೆನ್ನೈ ಸೂಪರ್​ ಕಿಂಗ್ಸ್(CSK)​ ಮತ್ತು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು(RCB) ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಕೂಟದಲ್ಲಿ ಭಾಗವಹಿಸುವ ಒಟ್ಟು 10 ತಂಡಗಳನ್ನು ತಲಾ 5 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಮುಂಬೈ, ಕೆಕೆಆರ್​, ರಾಜಸ್ಥಾನ, ಡೆಲ್ಲಿ, ಲಕ್ನೋ ತಂಡೆಗಳು ‘ಎ’ ಗುಂಪಿನ ತಂಡಗಳಾದರೆ, ಸಿಎಸ್​ಕೆ, ಆರ್​ಸಿಬಿ, ಸನ್​ರೈಸರ್ಸ್​, ಪಂಜಾಬ್​, ಗುಜರಾತ್​ ‘ಬಿ’ ಗುಂಪಿನಲ್ಲಿವೆ. ಪ್ರತಿ ತಂಡ ತನ್ನ ಗುಂಪಿನ ತಂಡಗಳ ವಿರುದ್ಧ ಒಮ್ಮೆ ಮತ್ತು ಎದುರಾಳಿ ಗುಂಪಿನ ತಂಡಗಳ ಎದುರು ತಲಾ 2 ಪಂದ್ಯಗಳನ್ನು ಆಡಲಿದೆ. ಚೆನ್ನೈ ಮತ್ತು ಆರ್​ಸಿಬಿ ಈಗಾಗಲೇ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾದ ಕಾರಣ ಲೀಗ್​ನಲ್ಲಿ ಮುಖಾಮುಖಿಯಾಗಲು ಸಾಧ್ಯವಿಲ್ಲ. ಪ್ಲೇ ಆಫ್​ ಅಥವಾ ಫೈನಲ್​ನಲ್ಲಿ ಮಾತ್ರ ಎದುರಾಗುವ ಅವಕಾಶವಿದೆ.

‘ಎ’ ಗುಂಪಿನ ತಂಡಗಳು‘ಬಿ’ ಗುಂಪಿನ ತಂಡಗಳು
ಮುಂಬೈ ಇಂಡಿಯನ್ಸ್​ಚೆನ್ನೈ ಸೂಪರ್​ ಕಿಂಗ್ಸ್​
ಕೋಲ್ಕತ್ತಾ ನೈಟ್​ ರೈಡರ್ಸ್​ರಾಯಲ್​ ಚಾಲೆಂಜರ್ಸ್​ ಬೆಂಗಳೂರು
ರಾಜಸ್ಥಾನ್​ ರಾಯಲ್ಸ್​ಸನ್​ರೈಸರ್ಸ್​ ಹೈದರಾಬಾದ್​
ಡೆಲ್ಲಿ ಕ್ಯಾಪಿಟಲ್ಸ್​ಗುಜರಾತ್​ ಟೈಟಾನ್ಸ್​
ಲಕ್ನೋ ಸೂಪರ್​ ಜೈಂಟ್ಸ್​ಪಂಜಾಬ್​ ಕಿಂಗ್ಸ್​

ಅಂಕಪಟ್ಟಿಯಲ್ಲಿ ಮೊದಲ 4 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ ಆಫ್​ ಟಿಕೆಟ್​ ಪಡೆಯಲಿದೆ. ಮೊದಲ 2 ಸ್ಥಾನದಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್‌ ಆಡಿ ಇಲ್ಲಿ ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. 3 ಮತ್ತು 4ನೇ ಸ್ಥಾನಗಳಲ್ಲಿರುವ ತಂಡಗಳು ಎಲಿಮಿನೇಟರ್‌ನಲ್ಲಿ ಆಡಲಿದೆ. ಇಲ್ಲಿ ಗೆದ್ದ ತಂಡ, ಮೊದಲ ಪ್ಲೇ ಆಫ್​ನಲ್ಲಿ ಸೋತ ತಂಡದೊಂದಿಗೆ 2ನೇ ಕ್ವಾಲಿಫೈಯರ್‌ ಪಂದ್ಯ ಆಡಲಿದೆ. 2ನೇ ಪ್ಲೇ ಆಫ್​ನಲ್ಲಿ ಗೆದ್ದ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಲೀಗ್​ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಕ್ಕೆ ಹೆಚ್ಚಿನ ಲಾಭ ಸಿಗಲಿದೆ.

ಇದನ್ನೂ ಓದಿ IPL 2024: ಪಂದ್ಯ ಸೋತರೂ ದಾಖಲೆ ಬರೆದ ​ಜಸ್​ಪ್ರೀತ್​ ಬುಮ್ರಾ

ಚೆನ್ನೈಯಲ್ಲಿ ಫೈನಲ್​


ವಿಶ್ವದ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಂ ಆಗಿರುವ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಾರಿಯ ಐಪಿಎಲ್(IPL 2024)​ ಫೈನಲ್(IPL 2024 final)​ ಪಂದ್ಯ ನಡೆಯುವುದಿಲ್ಲ ಎಂದು ವರದಿಯಾಗಿದೆ. ಬಿಸಿಸಿಐ(BCCI) ಮೂಲಗಳ ಪ್ರಕಾರ ಇಲ್ಲಿ ಒಂದು ಕ್ವಾಲಿಫೈಯರ್ ಮತ್ತು ಒಂದು ಎಲಿಮಿನೇಟರ್ ಪಂದ್ಯ ಮಾತ್ರ ನಡೆಯಲಿದೆ ಎನ್ನಲಾಗಿದೆ. ಫೈನಲ್​ ಚೆನ್ನೈಯ ಚೆಪಾಕ್​ ಸ್ಟೇಡಿಯಂನಲ್ಲಿ(Chepauk will also host the IPL 2024 final) ನಡೆಯಲಿದೆ ಎಂದು ವರದಿಯಾಗಿದೆ. ಮೇ 26ರಂದು ಐಪಿಎಲ್ ಫೈನಲ್ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಕೆಲವೇ ದಿನಗಳಲ್ಲಿ ಬಿಸಿಸಿಐ ನೀಡಲಿದೆ.

Exit mobile version