Site icon Vistara News

IPL 2024: ಅಭ್ಯಾಸದ ವೇಳೆ ರಾಹುಲ್​ಗೆ ಪತ್ನಿಯಿಂದ ಸಾಥ್​; ವಿಡಿಯೊ ವೈರಲ್​

IPL 2024

ಲಕ್ನೋ: ನಿನ್ನೆಯಷ್ಟೇ ಕೆ.ಎಲ್​ ರಾಹುಲ್(KL Rahul)​ ಅವರು 32ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇಂದು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದ್ದಾರೆ. ಈ ಪಂದ್ಯಕ್ಕೆ ರಾಹುಲ್​ ಅಭ್ಯಾಸ ನಡೆಸುವ ವೇಳೆ ಪತ್ನಿ ಅಥಿಯಾ ಶೆಟ್ಟಿ(Athiya Shetty) ಕೂಡ ಸಾತ್​ ನೀಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ರಾಹುಲ್​ ಅವರು ಅಭ್ಯಾಸ ನಡೆಸುವ ವೇಳೆ ಅಥಿಯಾ ಶೆಟ್ಟಿ ರಾಹುಲ್​ ಅವರ ಲಕ್ನೋ ತಂಡದ ಜೆರ್ಸಿ ತೊಟ್ಟು ಮಾತನಾಡುತ್ತಿರುವ ವಿಡಿಯೊ ವೈರಲ್​ ಆಗಿದೆ. ರಾಹುಲ್​ ನಿನ್ನೆ ರಾತ್ರಿ ತಂಡದ ಆಟಗಾರರೊಂದಿಗೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಅಥಿಯಾ ಶೆಟ್ಟಿ ಲಕ್ನೋಗೆ ಬಂದಿದ್ದರು. ಇಂದು ನಡೆಯುವ ಪಂದ್ಯದ ವೇಳೆಯೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕೆ.ಎಲ್‌. ರಾಹುಲ್‌ ಅವರು ಹುಟ್ಟಿದ್ದು ಏಪ್ರಿಲ್​ 18, 1992ರಲ್ಲಿ. ಬೆಂಗಳೂರಿನಲ್ಲಿ ಜನಿಸಿದ ಅವರು ಬಾಲ್ಯ ಕಳೆದದ್ದು ಮಂಗಳೂರಿನಲ್ಲಿ. ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‌ನ ಎನ್‌ಐಟಿಕೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದ ಅವರು, ಪಿಯುಸಿ ವಿದ್ಯಾಬ್ಯಾಸವನ್ನು ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಪಡೆದರು. ಬಳಿಕ ಕ್ರಿಕೆಟ್​ಗಾಗಿ ಬೆಂಗಳೂರಿನತ್ತ ಮುಖ ಮಾಡಿದ್ದರು. ಎಲ್ಲೇ ಇದ್ದರೂ ಕನ್ನಡದ ಪ್ರೇಮವನ್ನು ಅವರು ಮರೆತಿಲ್ಲ. ಕರ್ನಾಟಕ ಮೂಲದ ಕ್ರಿಕೆಟಿಗರಲ್ಲಿ ಕನ್ನಡವನ್ನೇ ಮಾತನಾಡಿ ಹಲವು ಬಾರಿ ಕನ್ನಡಿಗರ ಮನ ಗೆದ್ದಿದ್ದರು.

ಕೆ.ಎಲ್​ ರಾಹುಲ್​ ಅವರು ಭಾರತ ಪರ ಪದಾರ್ಪಣೆ ಮಾಡಿದ್ದು ಟೆಸ್ಟ್​ ಕ್ರಿಕೆಟ್​ ಆಡುವ ಮೂಲಕ. 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ. ಚೊಚ್ಚಲ ಏಕದಿನ ಪಂದ್ಯವನ್ನು 2016ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿ ಈ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ್ದರು. ಇದೇ ವರ್ಷ ಜಿಂಬಾವ್ವೆ ವಿರುದ್ಧವೇ ಟಿ20 ಕ್ರಿಕೆಟ್​ಗೂ ಅಡಿಯಿರಿಸಿದ್ದರು. ಹಲವು ಸರಣಿಗಳಲ್ಲಿ ಹಂಗಾಮಿ ನಾಯಕನಾಗಿ ಸರಣಿ ಗೆದ್ದ ಸಾಧನೆಯೂ ಇವರದ್ದಾಗಿದೆ. ಸದ್ಯ ಐಪಿಎಲ್​ನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ನಾಯಕನಾಗಿ ಆಡುತ್ತಿದ್ದಾರೆ.

ಇದನ್ನೂ ಓದಿ IPL 2024: ಡಿಆರ್​ಎಸ್​ ಚೀಟಿಂಗ್ ವೇಳೆ ಸಿಕ್ಕಿ ಬಿದ್ದ ಮುಂಬೈ ಇಂಡಿಯನ್ಸ್​; ವಿಡಿಯೊ ವೈರಲ್​

ಇಂದು ನಡೆಯುವ ಐಪಿಎಲ್(IPL 2024)​ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ತಂಡ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಇದುವರೆಗೆ ಐಪಿಎಲ್​ನಲ್ಲಿ ಮೂರು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ತಲಾ ಒಂದು ಪಂದ್ಯಗಳಲ್ಲಿ ಉಭಯ ತಮಡಗಳು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.​

Exit mobile version