ಹೈದರಾಬಾದ್: ಈ ಬಾರಿಯ ಐಪಿಎಲ್ನಲ್ಲಿ(IPL 2024) ಪ್ರಚಂಡ ಬ್ಯಾಟಿಂಗ್ ಮೂಲಕ ಪಂದ್ಯದಿಂದ ಪಂದ್ಯಕ್ಕೆ ಬೃಹತ್ ಮೊತ್ತ ಪೇರಿಸಿ ದಾಖಲೆ ಬರೆಯುತ್ತಿರುವ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ತಂಡದ ಆಟಗಾರರು ಸದ್ಯ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಇದೇ ವೇಳೆ ತೆಲುಗಿನ ಖ್ಯಾತ ನಟ ಮಹೇಶ್ ಬಾಬು(Mahesh Babu) ಅವರು ಆಟಗಾರರನ್ನು ಭೇಟಿಯಾಗಿದ್ದಾರೆ. ಈ ಫೋಟೊವನ್ನು ಫ್ರಾಂಚೈಸಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಕನ್ನಡಿಗ ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಅಭಿಷೇಕ್ ಶರ್ಮ ಸೇರಿ ಕೆಲ ಆಟಗಾರರು ನೆಚ್ಚಿನ ನಟನೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಜತೆಗೆ ಕೆಲ ಕಾಲ ಕುಶಲೋಪರಿ ನಡೆಸಿದ್ದಾರೆ.
ಸದ್ಯ ಹೈದರಾಬಾದ್ ಆಡಿದ 7 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯವನ್ನು ಏಪ್ರಿಲ್ 25 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಮೊದಲ ಮುಖಾಮುಖಿಯಲ್ಲಿ ಆರ್ಸಿಬಿ ವಿರುದ್ಧ 287 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ಬಾರಿಸಿದ ತಂಡವೆಂಬ ದಾಖಲೆ ನಿರ್ಮಿಸಿತ್ತು. ಇದಕ್ಕೂ ಮುನ್ನ ಮುಂಬೈ ವಿರುದ್ಧ 277 ರನ್ ಬಾರಿಸಿತ್ತು. ಒಟ್ಟು ಈ ಬಾರಿಯ ಐಪಿಎಲ್ನಲ್ಲಿ ಮೂರು ಬಾರಿ 200 ಪ್ಲಸ್ ಮೊತ್ತ ಪೇರಿಸಿದ ಸಾಧನೆ ಹೈದರಾಬಾದ್ ತಂಡದ್ದು.
ಅಗ್ರಸ್ಥಾನ ಕಾಯ್ದುಕೊಂಡ ರಾಜಸ್ಥಾನ್
ಜೈಪುರ: ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ಗೆಲುವಿನ ನಾಗಲೋಟ ಮತ್ತೆ ಮುಂದುವರಿದಿದೆ. ಸೋಮವಾರ ರಾತ್ರಿ ನಡೆದ ಐಪಿಎಲ್(IPL 2024) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ತಂಡವನ್ನು 9 ವಿಕೆಟ್ಗಳಿಂದ ಮಣಿಸಿ ಅಂಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜತೆಗೆ 14 ಅಂಕದೊಂದಿಗೆ ಬಹುತೇಕ ಪ್ಲೇ ಆಫ್ ಟಿಕೆಟ್ ಖಚಿತ ಪಡಿಸಿಕೊಂಡಿದೆ. ಇನ್ನೊಂದು ಗೆಲುವು ಸಾಧಿಸಿದರೆ ಇದು ಅಧಿಕೃತಗೊಳ್ಳಲಿದೆ. ಸೋಲು ಕಂಡ ಮುಂಬೈ ತಂಡದ ಪ್ಲೇ ಆಫ್ ಹಾದಿ ಕಠಿಣಗೊಂಡಿದೆ.
ಇದನ್ನೂ ಓದಿ IPL 2024 : ಮುಂಬೈ ವಿರುದ್ಧ ರಾಜಸ್ಥಾನ್ ತಂಡಕ್ಕೆ 9 ವಿಕೆಟ್ ಅಮೋಘ ಗೆಲುವು
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 8 | 7 | 1 | 14 (+0.698) |
ಕೆಕೆಆರ್ | 7 | 5 | 2 | 10 (+1.206) |
ಹೈದರಾಬಾದ್ | 7 | 5 | 2 | 10 (+0.914) |
ಚೆನ್ನೈ ಸೂಪರ್ ಕಿಂಗ್ಸ್ | 7 | 4 | 2 | 8 (+0.726) |
ಲಕ್ನೋ | 7 | 4 | 3 | 8 (+0.123) |
ಗುಜರಾತ್ | 8 | 4 | 4 | 8 (-1.055) |
ಮುಂಬೈ | 8 | 3 | 5 | 6 (-0.227) |
ಡೆಲ್ಲಿ | 8 | 3 | 5 | 6 (-0.477) |
ಪಂಜಾಬ್ | 8 | 2 | 6 | 4 (-0.292) |
ಆರ್ಸಿಬಿ | 8 | 1 | 7 | 2 (-1.046) |