Site icon Vistara News

IPL 2024: ಇಂದು ಐಪಿಎಲ್​ನಲ್ಲಿ 2 ಪಂದ್ಯ; ಆರ್​ಸಿಬಿ-ಕೆಕೆಆರ್​ ಮೊದಲ ಮುಖಾಮುಖಿ

IPL 2024

ಬೆಂಗಳೂರು: ಇಂದು (ಭಾನುವಾರ) ಐಪಿಎಲ್​ನಲ್ಲಿ(IPL 2024) 2 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ಮುಖಾಮುಖಿಯಾದರೆ, ದಿನದ ಮತ್ತೊಂದು ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್(Gujarat Titans)​ ಮತ್ತು ಪಂಜಾಬ್​ ಕಿಂಗ್ಸ್​(Punjab Kings) ಸೆಣಸಾಟ ನಡೆಸಲಿದೆ. ಒಟ್ಟಾರೆಯಾಗಿ ಇಂದು ದಿನವಿಡಿ ಕ್ರಿಕೆಟ್​ ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸಿಗಲಿದೆ.

ಗೆಲ್ಲಲೇ ಬೇಕಾದ ಒತ್ತಡದಲ್ಲಿ ಆರ್​ಸಿಬಿ


ಆರ್‌ಸಿಬಿ ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪ್ಲೇ ಆಫ್ ಜೀವಂತರವಿರಿಸಬೇಕಿದ್ದರೆ ಆರ್​ಸಿಬಿಗೆ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡವಿದೆ. ಒಂದೊಮ್ಮೆ ಸೋತರೆ ಟೂರ್ನಿಯಿಂದ ಬಹುತೇಖ ಹೊರಬೀಳಲಿದೆ. ಇದನ್ನೂ ತಪ್ಪಿಸಬೇಕಾದರೆ ಆರ್​ಸಿಬಿ ತಂಡ ಕೆಕೆಆರ್​ ವಿರುದ್ಧದ ಪಂದ್ಯದಿಂದಲೇ ಗೆಲುವಿನ ಅಭಿಯಾನ ಆರಂಭಿಸಬೇಕಿದೆ. ಆದರೆ ಮಾತ್ರ ಪ್ಲೇ ಆಫ್ ಆಸೆ ಜೀವಂತವಿರುತ್ತದೆ.

ಕೆಜೆಆರ್​ಗೆ ಚಿಂತೆಯಿಲ್ಲ


ಕೆಕೆಆರ್​ ತಂಡ ಆಡಿದ 6 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 8 ಅಂಕ ಸಂಪಾದಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಿಯಾಗಿದೆ. ಹೀಗಾಗಿ ಆರ್​ಸಿಬಿ ವಿರುದ್ಧ ಸೋತರೂ ಕೂಡ ತಂಡಕ್ಕೆ ಯಾವುದೇ ಹಾನಿಯಾಗದು. ಇನ್ನುಳಿದ 7 ಪಂದ್ಯಗಳಲ್ಲಿ ಕನಿಷ್ಠ 3 ಅಥವಾ 4 ಪಂದ್ಯ ಗೆದ್ದರೂ ಸುಲಭವಾಗಿ ಪ್ಲೇ ಆಫ್​ಗೇರಬಹುದು.

ಗ್ರೀನ್​ ಜೆರ್ಸಿಯಲ್ಲಿ ಕಣಕ್ಕೆ


ಗೋ ಗ್ರೀನ್​ ಅಭಿಯಾನದ ಭಾಗವಾಗಿ ಆರ್​ಸಿಬಿ ಈ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ(RCB Green Jersey) ಆಡಲಿದೆ. ಆರ್​ಸಿಬಿ ಈ ಜೆರ್ಸಿಯಲ್ಲಿ ಕಣಕ್ಕಿಳಿದ ಬಹುತೇಕ ಪಂದ್ಯದಲ್ಲಿ ಸೋಲು ಕಂಡಿದೆ. ಆರ್​ಸಿಬಿ ಐಪಿಎಲ್‌ನಲ್ಲಿ ಹಸಿರು ಜೆರ್ಸಿಯಲ್ಲಿ ಇದುವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದೆ. ಗೆದ್ದಿದ್ದು ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದ 8 ಪಂದ್ಯಗಳಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಅದರಲ್ಲೂ ಈ ಬಾರಿ ಆರ್​ಸಿಬಿ ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಸಾಧಿಸಿದೆ. ಹೀಗಾಗಿ ಕೆಕೆಆರ್​ ವಿರುದ್ಧ ಗೆಲುವು ಸಾಧಿಸೀತೇ, ಈ ಉಡುಗೆ ಆರ್​ಸಿಬಿ ಪಾಲಿಗೆ ಅದೃಷ್ಟ ತಂದೀತೇ ಎಂಬುದು ಎಲ್ಲರ ನಿರೀಕ್ಷೆ.

ಇದನ್ನೂ ಓದಿ IPL 2024 POINTS TABLE: ಹೈದರಾಬಾದ್​ಗೆ ಭರ್ಜರಿ ಗೆಲುವು; ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

ಗುಜರಾತ್​ ಸವಾಲಿಗೆ ಪಂಜಾಬ್​ ಸಿದ್ಧ


ದಿನದ ಮತ್ತೊಂದು ಪಂದ್ಯದಲ್ಲಿ ಪ್ರತಿ ಪಂದ್ಯದಲ್ಲಿಯೂ ಗೆಲುವಿನಂಚಿಗೆ ಬಂದು ವಿರೋಚಿತ ಸೋಲು ಕಾಣುತ್ತಿರುವ ಪಂಜಾಬ್​ ಕಿಂಗ್ಸ್(Punjab Kings)​ ತಂಡ ಗುಜರಾತ್​ ಟೈಟಾನ್ಸ್(PBKS vs GT)​ ವಿರುದ್ಧ ಆಡಲಿದೆ.ಪಂಜಾಬ್‌ನ ನೂತನ ಹೋಮ್‌ ಗ್ರೌಂಡ್‌ ಆಗಿರುವ ಮುಲ್ಲಾನ್‌ಪುರ್‌ನಲ್ಲಿ ಈ ಮಹತ್ವದ ಮುಖಾಮುಖಿ ಸಾಗಲಿದೆ. ಪ್ಲೇ ಆಫ್​ ಹಾದಿ ಜೀವಂತವಿರಿಸಬೇಕಿದ್ದರೆ ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಮುಖ್ಯ. ಹೀಗಾಗಿ ಈ ಪಂದ್ಯ ರೋಚಕವಾಗಿ ಸಾಗುವ ನಿರೀಕ್ಷೆ ಇದೆ.

ಗುಜರಾತ್​ ಟೈಟಾನ್ಸ್ ಮತ್ತು ಪಂಜಾಬ್​ ಕಿಂಗ್ಸ್ ಇದುವರೆಗೆ ಒಟ್ಟು 4 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಉಭಯ ತಂಡಗಳು ಕೂಡ ತಲಾ 2 ಗೆಲುವು ಮತ್ತು ಸೋಲು ಕಂಡಿದೆ. ಕಳೆದ ಆವೃತ್ತಿಯ ಮುಖಾಮುಖಿಯಲ್ಲಿ ಪಂಜಾಬ್​ ಗೆಲುವು ಸಾಧಿಸಿತ್ತು.

Exit mobile version