Site icon Vistara News

IPL 2024: ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ವೇಗದ ಅರ್ಧಶತಕ ಬಾರಿಸಿದ ಮೆಕ್‌ಗುರ್ಕ್

IPL 2024

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ, ಮಿಸ್ಟರ್​ 360 ಖ್ಯಾತಿಯ ಎಬಿಡಿ ವಿಲಿಯರ್ಸ್​ ಶೈಲಿಯಲ್ಲಿ ಹೊಡಿ-ಬಡಿ ಆಟವಾಡುತ್ತಿರುವ ಡೆಲ್ಲಿ ತಂಡದ ಆಸ್ಟ್ರೇಲಿಯಾದ ಯುವ ಬ್ಯಾಟರ್​ ಜೇಕ್ ಫ್ರೇಸರ್-ಮೆಕ್‌ಗುರ್ಕ್(Jake Fraser-McGurk) ಈ ಬಾರಿಯ ಐಪಿಎಲ್(IPL 2024)​ ಕೂಟದಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ದಾಖಲೆ ಬರೆದಿದ್ದಾರೆ.

ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿ ಮನಬಂದಂತೆ ಚೆಂಡನ್ನು ಕ್ರೀಡಾಂಗಣದ ಮೂಲೆ ಮೂಲೆಗೆ ಕಳುಹಿಸಿದ ಮೆಕ್‌ಗುರ್ಕ್ ಒಂದು ಹಂತದಲ್ಲಿ ಹೈದರಾಬಾದ್​ ಪಾಳಯಕ್ಕೆ ಸೋಲಿನ ಭಯ ಹುಟ್ಟಿಸಿದ್ದರು. ಸ್ಪಿನ್ನರ್​ ಮಯಾಂಕ್​ ಮಾರ್ಕಂಡೆ ಓವರ್​ನಲ್ಲಿ ಮೂರು ಸಿಕ್ಸರ್​ ಬಾರಿಸಿ ಕೇವಲ 15 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಈ ಮೂಲಕ ಈ ಆವೃತ್ತಿಯಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ಆಟಗಾರ ಎನಿಸಿಕೊಂಡರು. 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​ ದಾಖಲೆ ಪತನಗೊಂಡಿತು. ಐಪಿಎಲ್​ನಲ್ಲಿ ಅತಿ ಕಡಿಮೆ ಎಸೆತಗಳಿಂದ ಅರ್ಧಶತಕ ಬಾರಿಸಿದ ದಾಖಲೆ ರಾಜಸ್ಥಾನ್​ ರಾಯಲ್ಸ್​ ತಂಡದ ಆಟಗಾರ ಯಶಸ್ವಿ ಜೈಸ್ವಾಲ್​ ಹೆಸರಿನಲ್ಲಿದೆ. ಜೈಸ್ವಾಲ್​ 13 ಎಸೆತಗಳಿಂದ ಅರ್ಧಶತಕ ಬಾರಿಸಿದ್ದರು.

ಈ ಆವೃತ್ತಯ ಐಪಿಎಲ್​ನಲ್ಲಿ ವೇಗದ ಅರ್ಧಶತಕ


ಫ್ರೇಸರ್-ಮೆಕ್‌ಗುರ್ಕ್-15 ಎಸೆತ

ಅಭಿಷೇಕ್​ ಶರ್ಮ-16 ಎಸೆತ

ಟ್ರಾವಿಸ್​ ಹೆಡ್​-16 ಎಸೆತ

ಡೆಲ್ಲಿ ಪರ ದಾಖಲೆ


ಡೆಲ್ಲಿ ತಂಡದ ಪರ ಅತಿ ಕಡಿಮೆ ಎಸೆತಗಳಿಂದ ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಫ್ರೇಸರ್-ಮೆಕ್‌ಗುರ್ಕ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್​ ಮೋರಿಸ್​ ಹೆಸರಿನಲ್ಲಿತ್ತು. ಮೋರಿಸ್​ 2016ರಲ್ಲಿ ಗುಜರಾತ್​ ಲಯನ್ಸ್​ ವಿರುದ್ಧ 17 ಎಸೆತಗಳಲ್ಲಿ ಈ ದಾಖಲೆ ಬರೆದಿದ್ದರು.

ಇದನ್ನೂ ಓದಿ IPL 2024: ಇಂದು ಐಪಿಎಲ್​ನಲ್ಲಿ 2 ಪಂದ್ಯ; ಆರ್​ಸಿಬಿ-ಕೆಕೆಆರ್​ ಮೊದಲ ಮುಖಾಮುಖಿ

ಡೆಲ್ಲಿ ಪರ ವೇಗದ ಅರ್ಧಶತಕ


ಫ್ರೇಸರ್-ಮೆಕ್‌ಗುರ್ಕ್-15 ಎಸೆತ

ಕ್ರಿಸ್​ ಮೋರಿಸ್​- 17 ಎಸೆತ

ರಿಷಭ್​ ಪಂತ್​-18 ಎಸೆತ

ಪೃಥ್ವಿ ಶಾ-18 ಎಸೆತ

ಟ್ರಿಸ್ಟಾನ್ ಸ್ಟಬ್ಸ್-19 ಎಸೆತ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಲುಂಗಿ ಎನ್‌ಗಿಡಿ ಬದಲಿಗೆ ಆಲ್​ರೌಂಡರ್ ಜೇಕ್ ಫ್ರೇಸರ್-ಮೆಕ್‌ಗುರ್ಕ್(Jake Fraser-McGurk) ಅವರನ್ನು ಬದಲಿ ಆಟಗಾರನಾಗಿ ಮೂಲಬೆಲೆ 50 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತ್ತು. ಆಸ್ಟ್ರೇಲಿಯಾದ ಆಟಗಾರ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಇತ್ತೀಚೆಗೆ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಸುದ್ದಿಯಾಗಿದ್ದರು. ಲಿಸ್ಟ್ ಎ ಪಂದ್ಯದಲ್ಲಿ ಕೇವಲ 29 ಎಸೆತದಲ್ಲಿ ಶತಕ ಬಾರಿಸಿ ಅತ್ಯಂತ ವೇಗದ ಶತಕದ ವಿಶ್ವದಾಖಲೆ ಬರೆದಿದ್ದರು. ಇದೀಗ ಐಪಿಎಲ್​ನ್ಲಲಿಯೂ ಮಿಂಚಿನ ಬ್ಯಾಟಿಂಗ್​ ಮೂಲಕ ಸಂಚಲನ ಮೂಡಿಸಿದ್ದಾರೆ. ಹೈದರಾಬಾದ್​ ವಿರುದ್ಧ ಕೇವಲ 18 ಎಸೆತಗಳಿಂದ 5 ಬೌಂಡರಿ ಮತ್ತು 7 ಸೊಗಸಾದ ಸಿಕ್ಸರ್​ ನೆರವಿನಿಂದ 65 ರನ್​ ಬಾರಿಸಿದ್ದರು.

Exit mobile version