Site icon Vistara News

CSK vs MI: ಬದ್ಧ ವೈರಿಗಳಾದ ಮುಂಬೈ-ಚೆನ್ನೈ ಕಾದಾಟಕ್ಕೆ ವೇದಿಕೆ ಸಿದ್ಧ; ಯಾರಿಗೆ ಗೆಲುವಿನ ಲಕ್​?

CSK vs MI

ಮುಂಬಯಿ: ಐಪಿಎಲ್‌ನ(IPL 2024) ಅತ್ಯಂತ ಯಶಸ್ವಿ ಮತ್ತು ಬದ್ಧ ಎದುರಾಳಿ ತಂಡಗಳಾದ ಮುಂಬೈ ಇಂಡಿಯನ್ಸ್(CSK vs MI)​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತಂಡಗಳ ಸೆಣಾಟಕ್ಕೆ ವೇದಿಕೆಯೊಂದು ಸಿದ್ಧವಾಗಿದೆ. ಭಾನುವಾರ ನಡೆಯುವ ದ್ವಿತೀಯ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಇದು ಇತ್ತಂಡಗಳ ಈ ಬಾರಿಯ ಕೂಟದ ಮೊದಲ ಮುಖಾಮುಖಿ. ಈ ಪಂದ್ಯಕ್ಕೆ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂ ಅಣಿಯಾಗಲಿದೆ.

ಪಂದ್ಯ ಆರಂಭಕ್ಕೂ ಮುನ್ನವೇ ಉಭಯ ತಂಡಗಳ ಮಧ್ಯೆ ಕಾತರ, ರೋಷ ಎಲ್ಲವು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಾವೇ ಬಲಿಷ್ಠ ಎಂದು ಕಿತ್ತಾಟ ಕೂಟ ಆರಂಭವಾಗಿದೆ. ಮಾಜಿ ನಾಯಕರಾದ ಧೋನಿ ಮತ್ತು ರೋಹಿತ್​ ಶರ್ಮ ನಡುವಿನ ಫೈಟ್​ ಎಂದೇ ಅಭಿಮಾನಿಗಳು ಈ ಪಂದ್ಯವನ್ನು ಬಿಂಬಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಧೋನಿ ಮತ್ತು ರೋಹಿತ್​ ನಾಯಕತ್ವದಲ್ಲಿ ಉಭಯ ತಂಡಗಳು ಒಟ್ಟು 4 ಬಾರಿ ಫೈನಲ್​ ಪಂದ್ಯದಲ್ಲಿ ಮುಖಾಮುಖಿಯಾದದ್ದು. 4 ಬಾರಿಯ ಪ್ರಶಸ್ತಿ ಕಾಳಗದಲ್ಲಿ ಮುಂಬೈ ತಂಡ ಚೈನ್ನೈ ವಿರುದ್ಧ ಮೂರು ಪಂದ್ಯಗಳನ್ನು ಗೆದ್ದಿದೆ. ಚೆನ್ನೈ ಒಂದು ಬಾರಿ ಮಾತ್ರ ಗದ್ದಿದೆ.

ಹ್ಯಾಟ್ರಿಕ್​ ಸೋಲಿನ ಬಳಿಕ ಎಚ್ಚೆತ್ತುಕೊಂಡ ಮುಂಬೈ ಇಂಡಿಯನ್ಸ್​ ಪಂದ್ಯದಿಂದ ಪಂದ್ಯಕ್ಕೆ ಶ್ರೇಷ್ಠ ಪ್ರದರ್ಶನವನ್ನು ತೋರುವ ಮೂಲಕ ಮುನ್ನುಗ್ಗುತ್ತಿದೆ. ಗಾಯದಿಂದ ಚೇತರಿಕೆ ಕಂಡು ತಂಡಕ್ಕೆ ಮರಳಿದ ಸೂರ್ಯಕುಮಾರ್​ ಅವರಂತು ಪ್ರಚಂಡ ಫಾರ್ಮ್​ನಲ್ಲಿದ್ದಾರೆ. ಆರಂಭಿಕರಾದ ರೋಹಿತ್​ ಮತ್ತು ಇಶಾನ್​ ಕೂಡ ಸದ್ಯ ಉತ್ತಮ ಲಯದಲ್ಲಿದ್ದಾರೆ. ಬೌಲಿಂಗ್​ನಲ್ಲಿ ಜಸ್​ಪ್ರೀತ್​ ಬುಮ್ರಾ ಒಬ್ಬರೇ ತಮ್ಮ ಮೊನಚಾದ ಬೌಲಿಂಗ್​ ಮೂಲಕ ಎದುರಾಳಿಗಳ ಕೋಟೆಯನ್ನು ಪುಡಿಮಾಡುವಲ್ಲಿ ಸಮರ್ಥರಿದ್ದಾರೆ. ಇದಕ್ಕೆ ಕಳೆದ ಆರ್​ಸಿಬಿ ವಿರುದ್ಧದ ಪಂದ್ಯವೇ ಸಾಕ್ಷಿ.

ಚೆನ್ನೈ ಕೂಡ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಬಲಿಷ್ಠವಾಗಿದೆ, ನಾಯಕ ಗಾಯಕ್ವಾಡ್​ ಮತ್ತು ಅಜಿಂಕ್ಯಾ ರಹಾನೆ ಅವರು ಮುಂಬೈ ಅವರೇ ಆಗಿರುವ ಕಾರಣ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿದ ಅನುಭವ ಇದ್ದೇ ಇದೆ. ಜತೆಗೆ ಶಾರ್ದೂಲ್​ ಠಾಕೂರ್​ಗೂ ತವರಿನ ಪಂದ್ಯ. ಹೀಗಾಗಿ ಈ ಮೂವರು ತವರಿನ ಲಾಭವೆತ್ತಬಹುದು. ರಚಿನ್​ ರವೀಂದ್ರ, ಇಂಪ್ಯಾಕ್ಟ್​ ಆಟಗಾರ ಶಿವಂ ದುಬೆ, ರಚಿನ್​ ರವೀಂದ್ರ, ಜಡೇಜಾ ಮತ್ತು ಧೋನಿ ಕೂಡ ಅಂತಿಮ ಹಂತದಲ್ಲಿ ಬಿಗ್​ ಹಿಟ್ಟಿಂಗ್​ ಶಾಟ್​ ಹೊಡೆಯುವ ಚಾಕಕ್ಯತೆ ಹೊಂದಿದ್ದಾರೆ. ಒಟ್ಟಾರೆ ಈ ಪಂದ್ಯವನ್ನು ಅಭಿಮಾನಿಗಳು ಹೈವೋಲ್ಟೇಜ್​ ಎಂದು ನಿರೀಕ್ಷೆ ಮಾಡಿದ್ದಾರೆ.

ಇದನ್ನೂ ಓದಿ IPL 2024: ಆರ್​ಸಿಬಿಗೆ ಬಿಗ್​ ಶಾಕ್​; ಐಪಿಎಲ್​ ಟೂರ್ನಿಯಿಂದ ಹೊರ ಬಿದ್ದ ಆಲ್​ರೌಂಡರ್​!

ಮುಖಾಮುಖಿ


ಇತ್ತಂಡಗಳು ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿ 36 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಮುಂಬೈ 20 ಪಂದ್ಯ ಗೆದ್ದರೆ, ಚೆನ್ನೈ 16 ಪಂದ್ಯಗಳನ್ನಷ್ಟೇ ಗೆದ್ದಿದೆ. ಆದರೆ ಕಳೆದ ಆವೃತ್ತಿಯಲ್ಲಿ ಚೆನ್ನೈ ಆಡಿದ 2 ಪಂದ್ಯಗಳನ್ನು ಗೆದ್ದಿತ್ತು. ಹೀಗಾಗಿ ಈ ಬಾರಿ ಮುಂಬೈ ಸೇಡು ತೀರಿಸಿಕೊಂಡಿತೇ ಎಂದು ಕಾದು ನೋಡಬೇಕಿದೆ.

ಸಂಭಾವ್ಯ ತಂಡ


ಮುಂಬಯಿ: ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್​ ಕೀಪರ್​), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಮೊಹಮ್ಮದ್ ನಬಿ, ಶ್ರೇಯಸ್ ಗೋಪಾಲ್, ಜಸ್​ಪ್ರೀತ್​ ಬುಮ್ರಾ, ಜೆರಾಲ್ಡ್ ಕೋಟ್ಜಿ, ಆಕಾಶ್ ಮಧ್ವಲ್.

ಚೆನ್ನೈ ಸೂಪರ್​ ಕಿಂಗ್ಸ್​: ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೆರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್​ ಕೀಪರ್​), ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.

Exit mobile version