ನವದೆಹಲಿ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಬೃಹತ್ ಮೊತ್ತದ ಪಂದ್ಯದಲ್ಲಿ(IPL 2024) ಆತಿಥೇಯ ಡೆಲ್ಲಿ ಕ್ಯಾಪಿಲಟ್ಸ್ ತಂಡ 20 ರನ್ಗಳ ಗೆಲುವು ಸಾಧಿಸಿ ತನ್ನ ಪ್ಲೇ ಆಫ್ ರೇಸ್ ಹಾದಿಯನ್ನು ಜೀವಂತವಿರಿಸಿದೆ. ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ(IPL 2024 Points Table) 5ನೇ ಸ್ಥಾನಕ್ಕೇರಿದೆ. ಈ ಹಿಂದೆ 5 ನೇ ಸ್ಥಾನಿಯಾಗಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ 6ನೇ ಸ್ಥಾನಕ್ಕೆ ಕುಸಿದಿದೆ. ಸೋಲು ಕಂಡರೂ ರಾಜಸ್ಥಾನ್ 2ನೇ ಸ್ಥಾನದಲ್ಲೇ ಉಳಿದಿದೆ.
ಇಂದು ನಡೆಯುವ ಪಂದ್ಯದಲ್ಲಿ 4ನೇ ಸ್ಥಾನಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಅಗಲಿವೆ. ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಯಾರೇ ಗೆದ್ದರೂ 14 ಅಂಕದೊಂದಿಗೆ 3ನೇ ಸ್ಥಾನಕ್ಕೇರಲಿದ್ದಾರೆ. ಈ ತಂಡ ಯಾವುದು ಎನ್ನುವುದು ಈ ಪಂದ್ಯದ ಕುತೂಹಲ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಕೆಕೆಆರ್ | 11 | 8 | 3 | 16 (+1.453) |
ರಾಜಸ್ಥಾನ್ ರಾಯಲ್ಸ್ | 11 | 8 | 3 | 16 (+0.476) |
ಚೆನ್ನೈ | 11 | 6 | 5 | 14 (+0.700) |
ಹೈದರಾಬಾದ್ | 11 | 6 | 5 | 12 (-0.065) |
ಡೆಲ್ಲಿ | 12 | 6 | 6 | 12 (-0.316) |
ಲಕ್ನೋ | 11 | 6 | 5 | 12 (-0.371) |
ಆರ್ಸಿಬಿ | 11 | 4 | 7 | 8 (-0.049) |
ಪಂಜಾಬ್ | 10 | 4 | 6 | 8 (-0.062) |
ಮುಂಬೈ | 12 | 4 | 8 | 8 (-0.212) |
ಗುಜರಾತ್ | 11 | 4 | 7 | 8 (-1.320) |
ಅರುಣ್ ಜೇಟ್ಲಿ ಕ್ರಿಕ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 221 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ಗೆ 201 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ IPL 2024 : ರಾಜಸ್ಥಾನ್ ವಿರುದ್ಧ ಡೆಲ್ಲಿಗೆ 20 ರನ್ ಗೆಲುವು, ಪ್ಲೇಆಫ್ ಕನಸು ಜೀವಂತ
ಸಂಜು ಸ್ಯಾಮ್ಸನ್ ಕ್ರೀಸ್ನಲ್ಲಿರುವ ತನಕ ಪಂದ್ಯ ರಾಜಸ್ಥಾನ್ ಪರವಾಗಿತ್ತು. ಆದರೆ, ಸಂಜು ವಿಕೆಟ್ ಪತನದ ಬಳಿಕ ಏಕಾಏಕಿ ಕುಸಿತ ಕಂಡ ರಾಜಸ್ತಾನ್ ಸೋಲಿಗೆ ಸಿಲುಕಿತು. ಕುಲ್ದೀಪ್ ಯಾದವ್ 25 ರನ್ಗಳಗೆ ಪ್ರಮುಖ 2 ವಿಕೆಟ್ ಉರುಳಿಸುವ ಮೂಲಕ ಕೊನೇ ಹಂತದಲ್ಲಿ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಸಂಜು 46 ಎಸೆತಕ್ಕೆ 86 ರನ್ ಬಾರಿಸಿ ಹೋಪ್ ಹಿಡಿದ ಸೂಪರ್ ಕ್ಯಾಚ್ಗೆ ವಿಕೆಟ್ ಕೈಚೆಲ್ಲಿದರು.