ಬೆಂಗಳೂರು: ಶನಿವಾರದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡ ಪಂಜಾಬ್(Punjab Kings) ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಜತೆಗೆ ಅಂಕಪಟ್ಟಿಯಲ್ಲಿ(IPL 2024 Points Table) ತನ್ನ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದೆ. 10 ಅಂಕ ಗಳಿಸಿರುವ ಸಂಜು ಸ್ಯಾಮ್ಸನ್ ಪಡೆ ಬಹುತೇಕ ಪ್ಲೇ ಆಫ್ ಸನಿಹ ಬಂದು ನಿಂತಿದೆ. ಇನ್ನುಳಿದ ಪಂದ್ಯಗಳಲ್ಲಿ ಕನಿಷ್ಠ 3 ಪಂದ್ಯ ಗೆದ್ದರೂ ಪ್ಲೇ ಆಫ್ ಟಿಕೆಟ್ ಅಧಿಕೃತಗೊಳ್ಳಲಿದೆ. ಪಂಜಾಬ್ ತಂಡ ಸೋತರೂ ಕೂಡ ಈ ಹಿಂದಿನಂತೆ 8ನೇ ಸ್ಥಾನದಲ್ಲೇ ಮುಂದುವರಿದಿದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 6 | 5 | 1 | 10 (+0.767) |
ಕೆಕೆಆರ್ | 4 | 3 | 1 | 6 (+1.528) |
ಚೆನ್ನೈ ಸೂಪರ್ ಕಿಂಗ್ಸ್ | 5 | 3 | 2 | 6 (+0.666) |
ಲಕ್ನೋ ಸೂಪರ್ಜೈಂಟ್ಸ್ | 5 | 3 | 2 | 6(+0.436) |
ಹೈದರಾಬಾದ್ | 5 | 3 | 2 | 6 (+0.344) |
ಗುಜರಾತ್ | 6 | 3 | 3 | 6 (-0.637) |
ಮುಂಬಯಿ | 5 | 2 | 3 | 4 (-0.073) |
ಪಂಜಾಬ್ | 6 | 2 | 4 | 4 (-0.218) |
ಡೆಲ್ಲಿ ಕ್ಯಾಪಿಟಲ್ಸ್ | 6 | 2 | 4 | 4 (-0.975) |
ಆರ್ಸಿಬಿ | 6 | 1 | 5 | 2 (-1.124) |
ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಂಜಾಬ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 147 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೊಂದು ಎಸೆತ ಬಾಕಿ ಇರುವಂತೆಯೇ 7 ವಿಕೆಟ್ ನಷ್ಟ ಮಾಡಿಕೊಂಡು 152 ರನ್ ಬಾರಿಸಿ ಗೆಲುವು ಸಾಧಿಸಿತು.
ಇದನ್ನೂ ಓದಿ IPL 2024 : ಗೆಲುವಿನ ಹಾದಿಗೆ ಮರಳಿದ ರಾಜಸ್ಥಾನ್, ಪಂಜಾಬ್ಗೆ ಮತ್ತೊಂದು ಸೋಲು
ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ಮೊದಲ ವಿಕೆಟ್ಗೆ 51 ರನ್ ಬಾರಿಸಿತು. ಬಳಿಕ ಯಶಸ್ವಿ ಜೈಸ್ವಾಲ್ 39 ರನ್ ಬಾರಿಸಿ ಔಟಾದರೆ ಉಡುಪಿ ಮೂಲದ ತನುಷ್ ಕೋಟ್ಯಾನ್ 24 ರನ್ ಬಾರಿಸಿದರು. ಸಂಜು ಸ್ಯಾಮ್ಸನ್ 18 ರನ್ ಗಳಿಸಿದರೆ ರಿಯಾನ್ ಪರಾಗ್ 23 ರನ್ ಕೊಡುಗೆ ಕೊಟ್ಟರು. ದ್ರುವ್ ಜುರೆಲ್ 6 ರನ್ಗೆ ಔಟಾದರೆ ಪೊವೆಲ್ 11 ರನ್ ಗಳಿಸಿದರು. ಕೊನೆಯಲ್ಲಿ ಶಿಮ್ರೋನ್ ಹೆಟ್ಮಾಯರ್ 3 ಸಿಕ್ಸರ್ ಹಾಗೂ 1 ಫೋರ್ ಸಮೇತ 27 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು. ಕೊನೇ ಓವರ್ನಲ್ಲಿ ರಾಜಸ್ಥಾನ್ ತಂಡಕ್ಕೆ 10 ರನ್ ಬೇಕಾಗಿತ್ತು. ಅರ್ಶ್ ದೀಪ್ ಓವರ್ ನಲ್ಲಿ ಈ ರನ್ ಗಳಿಸಿದ ಹೆಟ್ಮಾಯರ್ ತಂಡಕ್ಕೆ ಗೆಲುವು ತಂದು ಕೊಟ್ಟರು.