Site icon Vistara News

IPL 2024 Points Table: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ರಾಜಸ್ಥಾನ್​

IPL 2024 Points Table

ಜೈಪುರ: ರಾಜಸ್ಥಾನ್​ ರಾಯಲ್ಸ್​(Rajasthan Royals) ತಂಡದ ಗೆಲುವಿನ ನಾಗಲೋಟ ಮತ್ತೆ ಮುಂದುವರಿದಿದೆ. ಸೋಮವಾರ ರಾತ್ರಿ ನಡೆದ ಐಪಿಎಲ್(IPL 2024)​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians)​ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿ ಅಂಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಜತೆಗೆ 14 ಅಂಕದೊಂದಿಗೆ ಬಹುತೇಕ ಪ್ಲೇ ಆಫ್​ ಟಿಕೆಟ್​ ಖಚಿತ ಪಡಿಸಿಕೊಂಡಿದೆ. ಇನ್ನೊಂದು ಗೆಲುವು ಸಾಧಿಸಿದರೆ ಇದು ಅಧಿಕೃತಗೊಳ್ಳಲಿದೆ. ಸೋಲು ಕಂಡ ಮುಂಬೈ ತಂಡದ ಪ್ಲೇ ಆಫ್​ ಹಾದಿ ಕಠಿಣಗೊಂಡಿದೆ.

ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಈ ಪಂದ್ಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಸಾಗಲಿದೆ. ಈ ಪಂದ್ಯಕ್ಕೆ ಮಳೇಯ ಭೀತಿಯೂ ಇದೆ. ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳ ಪ್ಲೇ ಆಫ್​ ರೇಸ್​ಗೆ ಹಿನ್ನಡೆ ಉಂಟಾಗಲಿದೆ. ಚೆನ್ನೈ 4ನೇ ಸ್ಥಾನದಲ್ಲಿದ್ದರೆ, ಲಕ್ನೋ 5ನೇ ಸ್ಥಾನಿಯಾಗಿದೆ.

ಇದನ್ನೂ ಓದಿ IPL 2024 : ಮುಂಬೈ ವಿರುದ್ಧ ರಾಜಸ್ಥಾನ್​ ತಂಡಕ್ಕೆ 9 ವಿಕೆಟ್​ ಅಮೋಘ​ ಗೆಲುವು

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​87114 (+0.698)
ಕೆಕೆಆರ್​​75210 (+1.206)
ಹೈದರಾಬಾದ್​​75210 (+0.914)
ಚೆನ್ನೈ ಸೂಪರ್​ ಕಿಂಗ್ಸ್​​​​7428 (+0.726)
ಲಕ್ನೋ7438 (+0.123)
ಗುಜರಾತ್8448 (-1.055)
ಮುಂಬೈ8356 (-0.227)
ಡೆಲ್ಲಿ8356 (-0.477)
ಪಂಜಾಬ್​8264 (-0.292)
ಆರ್​ಸಿಬಿ8172 (-1.046)

9 ವಿಕೆಟ್​ ಗೆಲುವು


ಫಾರ್ಮ್​ಗೆ ಮರಳಿದ ಯಶಸ್ವಿ ಜೈಸ್ವಾಲ್ ಅವರ ಅಬ್ಬರದ ಅಜೇಯ ಶತಕ (104 ರನ್, 60 ಎಸೆತ, 9 ಫೋರ್, 7 ಸಿಕ್ಸರ್​) ಹಾಗೂ ಸಂದೀಪ್​ ಶರ್ಮಾ (4 ಓವರ್, 18 ರನ್, 5 ವಿಕೆಟ್​​) ಅವರ ಮಾರಕ ಬೌಲಿಂಗ್ ದಾಳಿಯಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 38ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 9 ವಿಕೆಟ್​ಗಳ ಅಮೋಘ ಗೆಲುವು ಸಾಧಿಸಿತು.

ಇಲ್ಲಿನ ಸವಾಯ್​ ಮಾನ್​ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಮೊದಲು ಬ್ಯಾಟ್​ ಮಾಡಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 179 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ಇನ್ನೂ 8 ಎಸೆತಗಳು ಉಳಿದಿರುವಂತೆಯೇ 1 ವಿಕೆಟ್ ನಷ್ಟಕ್ಕೆ 183 ರನ್ ಬಾರಿಸಿ ಗೆಲುವು ಕಂಡಿತು.

Exit mobile version