ಬೆಂಗಳೂರು: ಸೋಮವಾರ ನಡೆದ ಬೃಹತ್ ಮೊತ್ತದ ಐಪಿಎಲ್(IPL 2024) ಪಂದ್ಯದಲ್ಲಿ ತವರಿನ ತಂಡವಾದ ಆರ್ಸಿಬಿ(Royal Challengers Bengaluru) ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನದಿಂದ ಮೇಲೇರಲು ವಿಫಲವಾಯಿತು. ಗೆಲುವು ಸಾಧಿಸಿದ ಸನ್ರೈಸರ್ಸ್ ಹೈದರಾಬಾದ್(Sunrisers Hyderabad) 8 ಅಂಕದೊಂದಿಗೆ ಸದ್ಯ 4ನೇ ಸ್ಥಾನಿಯಾಗಿದೆ. ಒಟ್ಟು ಮೂರು ತಂಡಗಳು ತಲಾ 8 ಅಂಕ ಹೊಂದಿದೆ. ಉಳಿದೆರಡು ತಂಡಗಳೆಂದರೆ ಕೋಲ್ಕತ್ತಾ ಮತ್ತು ಚೆನ್ನೈ. ರನ್ ರೇಟ್ ಆಧಾರದಲ್ಲಿ ಕೆಕೆಆರ್ ದ್ವಿತೀಯ ಸ್ಥಾನಿಯಾಗಿದೆ. ಚೆನ್ನೈ ಮೂರನೇ ಸ್ಥಾನದಲ್ಲಿದೆ. ಹೈದರಾಬಾದ್ ಗೆಲುವಿನಿಂದ ಲಕ್ನೋ ಒಂದು ಸ್ಥಾನ ಕುಸಿತ ಕಂಡು 5ನೇ ಸ್ಥಾನ ಪಡೆದಿದೆ.
ಇಂದು ನಡೆಯುವ ರಾಜಸ್ಥಾನ್ ರಾಯಲ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಕೆಕೆಆರ್ ಗೆದ್ದರೆ 10 ಅಂಕದೊಂದಿಗೆ ಅಗ್ರಸ್ಥಾನಕ್ಕೇರಲಿದೆ. ರಾಜಸ್ಥಾನ್ ದ್ವಿತೀಯ ಸ್ಥಾನಕ್ಕೆ ಜಾರಲಿದೆ. ಒಂದೊಮ್ಮೆ ರಾಜಸ್ಥಾನ್ ಗೆದ್ದರೆ ಪ್ಲೇ ಆಫ್ ಟಿಕೆಟ್ ಬಹುತೇಕ ಖಚಿತಗೊಳ್ಳಲಿದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 6 | 5 | 1 | 10 (+0.767) |
ಕೆಕೆಆರ್ | 5 | 4 | 1 | 8 (+1.688) |
ಚೆನ್ನೈ ಸೂಪರ್ ಕಿಂಗ್ಸ್ | 6 | 4 | 2 | 8 (+0.726) |
ಹೈದರಾಬಾದ್ | 6 | 4 | 2 | 8(+0.502) |
ಲಕ್ನೋ | 6 | 3 | 3 | 6 (+0.038) |
ಗುಜರಾತ್ | 6 | 3 | 3 | 6 (-0.637) |
ಪಂಜಾಬ್ | 6 | 2 | 4 | 4 (-0.218) |
ಮುಂಬಯಿ | 6 | 2 | 4 | 4 (-0.234) |
ಡೆಲ್ಲಿ ಕ್ಯಾಪಿಟಲ್ಸ್ | 6 | 2 | 4 | 4 (-0.975) |
ಆರ್ಸಿಬಿ | 7 | 1 | 6 | 2 (-1.185) |
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಎಸ್ಆರ್ಎಚ್ ತಂಡ ವಿಶ್ವ ದಾಖಲೆಯ 287 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್ಸಿಬಿ ತಂಡ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 7 ವಿಕೆಟ್ಗೆ 262 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಆರ್ಸಿಬಿ ಪರ ಒನ್ ಮ್ಯಾನ್ ಆರ್ಮಿ ರೀತಿ ಹೋರಾಟ ಸಂಘಟಿಸಿದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ 35 ಎಸೆತಗಳಲ್ಲಿ 83 ರನ್ ಬಾರಿಸಿದರು.
ಇದನ್ನೂ ಓದಿ IPL 2024 : ಒಟ್ಟು ರನ್ ಗಳಿಕೆಯಲ್ಲೂ ಇತ್ತಂಡಗಳ ದಾಖಲೆ, ಆರ್ಸಿಬಿಯ ಚೇಸಿಂಗ್ 262 ರನ್ ಕೂಡ ರೆಕಾರ್ಡ್!
122 ರನ್ಗೆ 5 ವಿಕೆಟ್ ಕಳೆದುಕೊಂಡ ಆರ್ಸಿಬಿ ಮತ್ತೊಂದು ಬಾರಿ ದೊಡ್ಡ ರನ್ಗಳ ಅಂತರದಿಂದ ಸೋಲುವ ಸೂಚನೆ ಪಡೆಯಿತು. ಆದರೆ, ಈ ವೇಳೆ ಬ್ಯಾಟ್ ಮಾಡಲು ಬಂದ ದಿನೇಶ್ ಕಾರ್ತಿಕ್ ಬೆಂಗಳೂರಿನ ಸ್ಟೇಡಿಯಮ್ ಸುತ್ತಲೂ ಅಬ್ಬರಿಸಿದರು. ಕೇವಲ 35 ಎಸೆತ ಎದುರಿಸಿದ ಅವರು 7 ಸಿಕ್ಸರ್ ಹಾಗೂ 5 ಬೌಂಡರಿ ಸಮೇತ 83 ರನ್ ಬಾರಿಸಿದರು. ಅವರ ಬ್ಯಾಟಿಂಗ್ನಿಂದಾಗಿ ಆರ್ಸಿಬಿಗೆ 200 ರನ್ಗಳ ಗಡಿ ದಾಟಲು ಸಾಧ್ಯವಾಯಿತು. ಕೊನೆಯಲ್ಲಿ ಮಹಿಪಾಲ್ ಲಾಮ್ರೋರ್ 19 ರನ್ ಬಾರಿಸಿದರೆ ಅನುಜ್ ರಾವತ್ 25 ರನ್ ಮಾಡಿದರು. ಇವರ ಆಟದಿಂದಾಗಿ ಆರ್ಸಿಬಿಯ ಮರ್ಯಾದೆ ಉಳಿಯಿತು.