ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧದ ಪಂದ್ಯದಲ್ಲಿ(IPL 2024) ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮ(Rohit Sharma) ಅವರು ಮುಂಬೈ ಇಂಡಿಯನ್ಸ್(Mumbai Indians) ಪರ 200 ಪಂದ್ಯವನ್ನು ಪೂರ್ತಿಗೊಳಿಸಿದರು. ಈ ಸ್ಮರಣೀಯ ಪಂದ್ಯಕ್ಕೂ ಮುನ್ನ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರು ರೋಹಿತ್ಗೆ ವಿಶೇಷ ಜೆರ್ಸಿಯನ್ನು ನೀಡಿ ಗೌರವಿಸಿದರು.
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಕಳೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಸೋಲು ಕಂಡಿತ್ತು.
ರೋಹಿತ್ ಅವರು ಡೆಕ್ಕನ್ ಚಾರ್ಜಸ್ ವಿರುದ್ಧ ಆಡುವ ಮೂಲಕ ಐಪಿಎಲ್ ಜರ್ನಿ ಆರಂಭಿಸಿದರು. ಇದುವರೆಗೆ ಒಟ್ಟು 245 ಪಂದ್ಯಗಳನ್ನು ಆಡಿದ್ದು ಈ ಪೈಕಿ 200 ಪಂದ್ಯಗಳನ್ನು ಮುಂಬೈ ತಂಡದ ಪರ ಆಡಿದ್ದಾರೆ. ಜತೆಗೆ 5 ಟ್ರೋಫಿಗಳನ್ನು ಕೂಡ ಗೆದ್ದು ಕೊಟ್ಟಿದ್ದಾರೆ. ಒಟ್ಟಾರೆಯಾಗಿ 6 ಐಪಿಎಲ್ ಟ್ರೋಫಿ ಗೆದ್ದ ಸಾಧನೆ ಇವರದ್ದಾಗಿದೆ. ಒಂದು ಟ್ರೋಫಿ ಡೆಕ್ಕನ್ ಪರ ಗಿಲ್ ಕ್ರಿಸ್ಟ್ ನಾಯಕತ್ವದಲ್ಲಿ ಜಯಿಸಿದ್ದರು.
A special moment to mark a landmark occasion 😃
— IndianPremierLeague (@IPL) March 27, 2024
Rohit Sharma is presented with a special commemorative jersey by none other than the legendary Sachin Tendulkar on the occasion of his 200th IPL Match for @mipaltan 👏👏#TATAIPL | #SRHvMI | @ImRo45 | @sachin_rt pic.twitter.com/iFEH8Puvr7
2011 ರಲ್ಲಿ ಮುಂಬೈ ಸೇರಿದ ರೋಹಿತ್ ಇದುವರೆಗೂತಂಡದ ಪ್ರಮುಖ ಆಟಗಾರನಾಗಿದ್ದಾರೆ. ಈ ಬಾರಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಲಾಗಿದೆ. ಮುಂಬೈ ಪರ 195 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿ ಒಂದು ಶತಕ ಮತ್ತು 34 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಜೇಯ 109* ಅವರ ಗರಿಷ್ಠ ಸ್ಕೋರ್ ಆಗಿದೆ. ಒಟ್ಟಾರೆಯಾಗಿ ಐಪಿಎಲ್ನಲ್ಲಿ 6254 ರನ್ ಬಾರಿಸಿದ್ದಾರೆ.
ಇದನ್ನೂ ಓದಿ IPL 2024: ಇಲ್ಲಿ ಕೇವಲ 5 ರೂ.ಗೆ ಟಿಕೆಟ್ ಪಡೆದು ಐಪಿಎಲ್ ಪಂದ್ಯ ವೀಕ್ಷಿಸಬಹುದು
2013 ರಲ್ಲಿ ರಿಕಿ ಪಾಂಟಿಂಗ್‌ನಿಂದ ನಾಯಕತ್ವವನ್ನು ವಹಿಸಿಕೊಂಡ ರೋಹಿತ್ ಮುಂಬೈ ಇಂಡಿಯನ್ಸ್ ಅನ್ನು ಅಭೂತಪೂರ್ವ ಯಶಸ್ಸಿನತ್ತ ಮುನ್ನಡೆಸಿದರು. 10 ವರ್ಷಗಳ ಅವಧಿಯಲ್ಲಿ (2013, 2015, 2017, 2019, ಮತ್ತು 2020) ಎರಡು ಪ್ಲೇಆಫ್ ಪಂದ್ಯಗಳೊಂದಿಗೆ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಹೆಗ್ಗಳಿಕೆ ಇವರದ್ದಾಗಿದೆ.
Mumbai Indians special poster for Rohit Sharma 🔥 pic.twitter.com/H9tYLXkm9E
— Johns. (@CricCrazyJohns) March 27, 2024
ಇಂದಿನ ಪಂದ್ಯದ ಉಭಯ ಆಡುವ ಬಳಗ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ನಮನ್ ಧೀರ್, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ, ಪಿಯೂಷ್ ಚಾವ್ಲಾ, ಶಮ್ಸ್ ಮುಲಾನಿ, ಕ್ವೆನಾ ಮಫಕಾ.
ಸನ್ ರೈಸರ್ಸ್ ಹೈದರಾಬಾದ್: ಟ್ರಾವಿಸ್ ಹೆಡ್, ಮಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮಾ, ಏಡೆನ್ ಮರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್.