Site icon Vistara News

IPL 2024: ಪಂದ್ಯದ ವೇಳೆ ತುಂಡಾಗಿ ಬಿದ್ದ ಸ್ಪೈಡರ್‌ಕ್ಯಾಮ್ ಕೇಬಲ್​; ತಪ್ಪಿದ ಭಾರಿ ಅನಾಹುತ

IPL 2024

ಜೈಪುರ: ಕ್ರಿಕೆಟ್ ಪಂದ್ಯದ ವೇಳೆ ಸಾಮಾನ್ಯವಾಗಿ ಮಳೆ, ಮಂದಬೆಳಕು, ಔಟ್‌ಫೀಲ್ಡ್ ಒದ್ದೆ, ಹೊನಲು ಬೆಳಕಿನ ಸಮಸ್ಯೆಯಂಥ ಕಾರಣಗಳಿಂದ ಆಟ ಸ್ಥಗಿತಗೊಳ್ಳುವುದನ್ನು ನೋಡಿದ್ದೇವೆ. ಭಾನುವಾರ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ವಿಭಿನ್ನ ಕಾರಣಕ್ಕೆ ಕೆಲಕಾಲ ಆಟ ಸ್ಥಗಿತಗೊಂಡಿತು. ಐಪಿಎಲ್​ನ(IPL 2024) ರಾಜಸ್ಥಾನ್​ ರಾಯಲ್ಸ್(Rajasthan Royals)​ ಮತ್ತು ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ನಡುವಣ ಪಂದ್ಯ ಆರಂಭಗೊಂಡ ಕೆಲವೇ ನಿಮಿಷದಲ್ಲಿ ಸ್ಪೈಡರ್ ಕ್ಯಾಮೆರಾದ(Spidercam ) ಕೇಬಲ್​ ಏಕಾಏಕಿ ತುಂಡಾಗಿ ಪಿಚ್​ ಮೇಲೆ ಬಿದ್ದಿತು. ಇದರಿಂದ ಕೆಲಕಾಲ ಆಟ ಸ್ಥಗಿತಗೊಂಡಿತು.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ರಾಜಸ್ಥಾನ್​ ರಾಯಲ್ಸ್​ 2 ಎಸೆತಗಳನ್ನು ಎದುರಿಸಿದ್ದ ವೇಳೆ ಸ್ಪೈಡರ್ ಕ್ಯಾಮೆರಾದ ಕೇಬಲ್​ ತುಂಡಾಗಿ ಪಿಚ್ ಮೇಲೆ ಬಿದ್ದಿತು. ಬಳಿಕ ಮೈದಾನ ಸಿಬ್ಬಂದಿಗಳು ಇದನ್ನು ತೆರವುಗೊಳಿಸಿ ಸರಿಪಡಿಸಿದ ಬಳಿಕ ಪಂದ್ಯವನ್ನು ಮುಂದುವರಿಸಲಾಯಿತು.​

ಸಂಜು ಬೊಂಬಾಟ್​ ಬ್ಯಾಟಿಂಗ್​


ಈ ಪಂದ್ಯದಲ್ಲಿ ರಾಜಸ್ಥಾನ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ಭರ್ಜರಿ ಬ್ಯಾಟಿಂಗ್​ ನಡೆಸಿ ಗಮನಸೆಳೆದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟ ಸಂಜು ಪಂದ್ಯದ ಕೊನೆಯ ಎಸೆತದವರೆಗೂ ಲಕ್ನೋ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಮೂರನೇ ವಿಕೆಟ್‌ಗೆ ರಿಯಾನ್ ಪರಾಗ್ ಜತೆ ಸೇರಿ ಕೇವಲ 59 ಎಸೆತಗಳಲ್ಲಿ 93 ರನ್‌ಗಳ ಜತೆಯಾಟವಾಡಿ ತಂಡಕ್ಕೆ ನೆರವಾದರು.

ಇದನ್ನೂ ಓದಿ IPL 2024: ಕ್ರೀಡಾಂಗಣದಲ್ಲೇ ಸಿಗರೇಟ್ ಸೇದಿದ ಶಾರುಖ್ ಖಾನ್; ಛೀಮಾರಿ ಹಾಕಿದ ನೆಟ್ಟಿಗರು

ಸ್ಪೋಟಕ ಬ್ಯಾಟಿಂಗ್ ನಡೆಸಿದ ರಿಯಾನ್ ಪರಾಗ್ 29 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 43 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮ್ಸನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಕೇವಲ 33 ಎಸೆತಗಳನ್ನು ಎದುರಿಸಿ 21ನೇ ಐಪಿಎಲ್ ಶತಕ ಸಿಡಿಸಿ ಮಿಂಚಿದರು. ಅಂತಿಮವಾಗಿ 52 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 82 ರನ್ ಬಾರಿಸಿದರು.

ಅರ್ಧಶತಕ ಬಾರಿಸಿದ ಸಂಜು 2020 ರಿಂದ ಆಡಿದ ಪ್ರತಿ ಐಪಿಎಲ್​ನ ಮೊದಲ ಪಂದ್ಯದಲ್ಲಿಯೂ 50 ಪ್ಲಸ್​ ಮೊತ್ತ ಗಳಿಸಿದ ಸಾಧನೆ ಮಾಡಿದರು. ಲಕ್ನೋ ಪರ ನವೀನ್ ಉಲ್ ಹಕ್ 41 ರನ್ ನೀಡಿ ಎರಡು ವಿಕೆಟ್ ಪಡೆದರೆ, ರವಿ ಬಿಷ್ಣೋಯಿ ಹಾಗೂ ಮೊಯ್ಸಿನ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

Exit mobile version