ಲಕ್ನೋ: ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡದ ವೇಗಿ ಶಿವಂ ಮಾವಿ(Shivam Mavi) ಅವರು ಪಕ್ಕೆಲುಬು ಗಾಯದಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಐಪಿಎಲ್(IPL 2024) ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಳೆದ ಡಿಸೆಂಬರ್ನಲ್ಲಿ ನಡೆದಿದ್ದ ಆಟಗಾರರ ಹರಾಜಿನಲ್ಲಿ ಅವರನ್ನು ಲಕ್ನೋ ಫ್ರಾಂಚೈಸಿ 6.4 ಕೋಟಿ ನೀಡಿ ಖರೀದಿಸಿತ್ತು.
‘ಬಲಗೈ ವೇಗಿ ಶಿವಂ ಮಾವಿ ಅವರು ಹರಾಜಿನ ಬಳಿಕ ತಂಡ ಸೇರಿ ಸರಣಿಪೂರ್ವ ಶಿಬಿರದಲ್ಲಿಯೂ ಭಾಗವಹಿಸಿದ್ದರು. ತಂಡದ ಪರ ಶ್ರೇಷ್ಠ ಪ್ರದರ್ಶನ ತೋರಲು ಎದುರು ನೋಡುತ್ತಿದ್ದರು. ಆದರೆ ಇದಕ್ಕೆ ಗಾಯ ಅಡ್ಡಿಪಡಿಸಿದೆ. ಪಕ್ಕೆಲುಬು ಗಾಯದಿಂದ ಚೇತರಿಕೆ ಕಾಣಲು ಅವರಿಗೆ ಇನ್ನೂ ಹೆಚ್ಚಿನ ವಿಶ್ರಾಂತಿ ಬೇಕಾಗಿದೆ. ಹೀಗಾಗಿ ಅವರು ಈ ಬಾರಿಯ ಟೂರ್ನಿಯಿಂದ ಹೊರಗುಳಿಯಲು ನಿರ್ಧರಸಿದ್ದಾರೆ. ಅವರು ಸಂಪೂರ್ಣ ಚೇತರಿಸಿಕೊಂಡು ಮತ್ತಷ್ಟು ಬಲಿಷ್ಠವಾಗಿ ಹಿಂದಿರುಗುವ ವಿಶ್ವಾಸವಿದೆ’ ಎಂದು ಎಲ್‌ಎಸ್‌ಜಿ ಪ್ರಕಟಣೆಯಲ್ಲಿ ತಿಳಿಸಿದೆ.
25 ವರ್ಷದ ಶಿವಂ ಮಾವಿ ಕೊನೆಯ ಬಾರಿಗೆ ಆಗಸ್ಟ್ 2023ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದ್ದರು. ಇದಾದ ಬಳಿಕ ಗಾಯದಿಂದಾಗಿ ಉತ್ತರ ಪ್ರದೇಶದ ಪರ ಸಂಪೂರ್ಣ ದೇಶೀಯ ಋತುವನ್ನು ಮಿಸ್ ಮಾಡಿಕೊಂಡಿದ್ದರು. ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್ ಕಮ್ಬ್ಯಾಕ್ ನಿರೀಕ್ಷೆಯಲ್ಲಿದ್ದರು. ಆದರೆ ಇಲ್ಲೂ ಕೂಡ ಅವರಿಗೆ ಹಿನ್ನಡೆಯಾಗಿದೆ. ತಂಡದಿಂದ ದೂರ ಉಳಿದರೂ ಕೂಡ ನನ್ನ ಬೆಂಗಲ ಸದಾ ಇರುತ್ತದೆ ಎಂದು ಮಾವಿ ತಿಳಿಸಿದ್ದಾರೆ. ಜತೆಗೆ ತಂಡದ ಮುಂದಿನ ಪಂದ್ಯಗಳಿಗೂ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ IPL 2024: ಚೆನ್ನೈಗೆ ಆಘಾತ; ತಂಡ ತೊರೆದು ತವರಿಗೆ ಪ್ರಯಾಣಿಸಿದ ಸ್ಟಾರ್ ವೇಗಿ
You'll come back stronger, Shivam. And we're with you all the way. 💙 pic.twitter.com/zYSs3URV1p
— Lucknow Super Giants (@LucknowIPL) April 3, 2024
ಮಾವಿ ಭಾರತದ ಪರ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಕೆಕೆಆರ್ ಮೂಲಕ ಐಪಿಎಲ್ ಜರ್ನಿ ಆರಂಭಸಿದ ಮಾವಿ ಇದುವರೆಗೆ 32 ಪಂದ್ಯಗಳನ್ನು ಆಡಿ 30 ವಿಕೆಟ್ ಉರುಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ತಂಡದಲ್ಲಿದ್ದ ಅವರು ಒಂದೇ ಒಂದು ಪಂದ್ಯ ಆಡುವ ಅವಕಾಶವೂ ಸಿಕ್ಕಿರಲಿಲ್ಲ.
ಆರ್ಸಿಬಿ ವಿರುದ್ಧ ಗೆದ್ದು ಬೀಗಿದ ಲಕ್ನೋ
ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕನ್ನಡಿಗ ಕೆ. ಎಲ್ ರಾಹುಲ್ (KL Rahul) ನೇತೃತ್ವದ ಲಕ್ನೊ ಸೂಪರ್ ಜೈಂಟ್ಸ್ ತಂಡ ಆರ್ಸಿಬಿ ವಿರುದ್ಧ 28 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೆ ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 181 ರನ್ ಬಾರಿಸಿತು. ಬೆಂಗಳೂರು ಸ್ಟೇಡಿಯಮ್ನಲ್ಲಿ ಗೆಲ್ಲಬಹುದಾಗಿದ್ದ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ 19.4 ಓವರ್ಗಳಲ್ಲಿ 153 ರನ್ಗೆ ಆಲ್ಔಟ್ ಆಗಿ ಶರಣಾಗಿತ್ತು.