Site icon Vistara News

MS Dhoni: ಧೋನಿಯ ಮೊಣಕಾಲಿನ ಎಕ್ಸ್-ರೇ ಕಂಡು ಅಭಿಮಾನಿಗಳಿಗೆ ಹೆಚ್ಚಿದ ಆತಂಕ!

ms dhoni injury

ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಇದೇ ಡಿಸೆಂಬರ್​ 19 ರಂದು ದುಬೈನಲ್ಲಿ ನಡೆಯಲಿದೆ. ಎಲ್ಲ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ಮೊಣಕಾಲಿನ ಎಕ್ಸ್‌-ರೇ(Ms dhoni’s knee X-Ray) ಒಂದರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಧೋನಿ ಅವರ ಎಕ್ಸ್‌-ರೇ ಫೋಟೊ ಕಂಡ ಅವರ ಅಭಿಮಾನಿಗಳಿಗೆ ಚಿಂತೆಯೊಂದು ಮೂಡಿದ್ದು, ಧೋನಿ 2024ರ ಐಪಿಎಲ್​ ಆಡಲಿದ್ದಾರಾ ಎನ್ನುವ ಆತಂಕ ಕಾಡಲಾರಂಭಿಸಿದೆ. ವೈರಲ್​ ಆಗಿರುವ ಫೋಟೊದಲ್ಲಿ “ಇದು ಧೋನಿಯ ಮೊಣಕಾಲಿನ ಎಕ್ಸ್-ರೇ. ಮುರಿದು ಹೋಗಿರುವ ಈ ಮೂಳೆ ಸರಿಹೋಗಲು ಮತ್ತು ಅವರು ಚೇತರಿಸಿಕೊಳ್ಳಲು ಕನಿಷ್ಠ 9-10 ತಿಂಗಳುಗಳು ಬೇಕಾಗಬಹುದು” ಎಂದು ಬರೆಯಲಾಗಿದೆ.

ಅಸಲಿಗೆ ಇದು ಧೋನಿ ಅವರ ಮೊಣಕಾಲಿನ ಎಕ್ಸ್-ರೇ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಅಲ್ಲದೆ ಧೋನಿ ಅವರು ಈ ಫೋಟೊವನ್ನು ಕೂಡ ಹಂಚಿಕೊಂಡಿಲ್ಲ. ಐಪಿಎಲ್ ಹರಾಜು ಹತ್ತಿರ ಬರುತ್ತಿದ್ದು ಜತೆಗೆ 17ನೇ ಆವೃತ್ತಿಯ ಐಪಿಎಲ್​ ಧೋನಿ ಪಾಲಿಗೆ ಕೊನೆಯ ಐಪಿಎಲ್​ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಧೋನಿ ಅಭಿಮಾನಿಗಳಲ್ಲಿ ಹೆಚ್ಚಿನ ಆತಂಕ ಮತ್ತು ಕುತೂಹಲ ಕೆರಳಿಸುವ ನಿಟ್ಟಿನಲ್ಲಿ ಕೆಲ ನೆಟ್ಟಿಗರು ಈ ರೀತಿ ಸುಳ್ಳು ಎಕ್ಸ್-ರೇ ಫೋಟೊ ಹಂಚಿಕೊಂಡು ಇದು ಧೋನಿಯ ಮೊಣಕಾಲಿನ ಎಕ್ಸ್-ರೇ ಎಂದು ಎಲ್ಲಡೆ ಶೇರ್​ ಮಾಡುತ್ತಿದ್ದಾರೆ.

ಇದನ್ನೂ ಓದಿ IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ಈ ಬಾರಿ ನಿವೃತ್ತಿ ಖಚಿತ

ಮಹೇಂದ್ರ ಸಿಂಗ್​ ಧೋನಿ ಅವರು ಇದೇ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್​ ಬಳಿಕ ವಿದಾಯ ಹೇಳುತ್ತಾರೆ ಎನ್ನಲಾಗಿತ್ತು. ಅದರಲ್ಲೂ ಚೆನ್ನೈ ಸೂಪರ್​ ಕಿಂಗ್ಸ್​ ಫೈನಲ್​ ತಲುಪಿದಾಗ ಅಭಿಮಾನಿಗಳಲ್ಲಿ ಧೋನಿ ಖಚಿತವಾಗಿ ತಮ್ಮ ನಿವೃತ್ತಿ ನಿರ್ಧಾರ ಘೋಷಿಸುತ್ತಾರೆ ಎಂದು ಬೇಸರಗೊಂಡಿದ್ದರು. ಆದರೆ ಧೋನಿ ಅವರು ಕಪ್​ ಗೆದ್ದ ಬಳಿಕ ಅಭಿಮಾನಿಗಳ ಒತ್ತಾಯದ ಮೇರೆಗೆ ನಾನು ಮುಂದಿನ ಬಾರಿಯ ಐಪಿಎಲ್​ನಲ್ಲಿ ಆಡುತ್ತೇನೆ ಎಂದು ಹೇಳಿದ್ದರು. ಆದರೆ ಈ ಬಾರಿಯ ಐಪಿಎಲ್​ ಬಳಿಕ ಅವರು ನಿವೃತ್ತಿ ಹೇಳುವುದು ಖಚಿತವಾಗಿದೆ.

ಪ್ರಮುಖ ಆಟಗಾರರ ಉಳಿಕೆ

ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 19 ಆಟಗಾರರನ್ನು ಬಿಡುಗಡೆ ಮಾಡದ ಹಾಗೆಯೇ ಉಳಿಸಿಕೊಂಡಿದೆ. ಹಿಂದಿನ ಋತುವಿನಲ್ಲಿ ಐದನೇ ಐಪಿಎಲ್ ಟ್ರೋಫಿಯನ್ನು ಗೆದ್ದ ತಂಡದಲ್ಲಿದ್ದ ಎಂಟು ಆಟಗಾರರನ್ನು ಕೈಬಿಟ್ಟಿದೆ. ಐಪಿಎಲ್ 2024 ರ ಹರಾಜಿಗೆ ಸಜ್ಜಾಗುತ್ತಿರುವಾಗ, ಚೆನ್ನೈ ಮೂಲದ ಫ್ರಾಂಚೈಸಿ ತಮ್ಮ ತಂಡವನ್ನು ಪೂರ್ಣಗೊಳಿಸಲು 31.4 ಕೋಟಿ ರೂಪಾಯಿ ಉಳಿಸಿಕೊಂಡಿದೆ. ಪ್ರಮುಖವಾಗಿ ತಂಡವು ತನ್ನ ಬೌಲಿಂಗ್ ಘಟಕವನ್ನು ಬಲಪಡಿಸಬೇಕಾಗಿದೆ.

Exit mobile version