ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ನ 2ನೇ(India vs England 2nd Test) ದಿನದಾಟದಲ್ಲಿ ಟೀಮ್ ಇಂಡಿಯಾದ ಘಾತಕ ವೇಗಿ ಜಸ್ಪ್ರೀತ್ ಬುಮ್ರಾ ಅವರು ಜೋ ರೂಟ್(Joe Root) ವಿಕೆಟ್ ಕೀಳುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ.
ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ 6 ವಿಕೆಟ್ಗೆ 336 ರನ್ ಗಳಿಸಿದಲ್ಲಿಂದ ದ್ವಿತೀಯ ದಿನದಾಟ ಆರಂಭಿಸಿದ ಭಾರತ ಯಶಸ್ವಿ ಜೈಸ್ವಾಲ್(209) ಅವರ ದ್ವಿಶತಕದ ನೆರವಿನಿಂದ 396 ರನ್ ಬಾರಿಸಿತು. 179 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಜೈಸ್ವಾಲ್ ಇದನ್ನು ದ್ವಿಶತಕವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.
ಗುರಿ ಬೆನ್ನಟ್ಟಿರುವ ಇಂಗ್ಲೆಂಡ್ ಪ್ರಮುಖ ಆಟಗಾರರ ವಿಕೆಟ್ ಕಳೆದುಕೊಂಡು ಇನಿಂಗ್ಸ್ ಹಿನ್ನಡೆ ಭೀತಿಯಲ್ಲಿದೆ. ಜೋ ರೂಟ್ ಅವರ ವಿಕೆಟ್ ಕೀಳುವ ಮೂಲಕ ಜಸ್ಪ್ರೀತ್ ಬುಮ್ರಾ ಅವರು ಟೆಸ್ಟ್‌ನಲ್ಲಿ ರೂಟ್ ಅವನ್ನು 8ನೇ ಬಾರಿ ಔಟ್ ಮಾಡಿದ ದಾಖಲೆ ತಮ್ಮದಾಗಿಸಿಕೊಂಡರು. ಬುಮ್ರಾ ಅವರು 20 ಇನ್ನಿಂಗ್ಸ್‌ಗಳಲ್ಲಿ ರೂಟ್ಗೆ ಬಿಟ್ಟುಕೊಟ್ಟದ್ದು ಕೇವಲ 245 ರನ್ ಮಾತ್ರ. 8 ಬಾರಿ ವಿಕೆಟ್ ಉಡಾಯಿಸಿದ್ದಾರೆ.
74 seconds of Bumrah owning Root in test cricketpic.twitter.com/8wMeoT4W7s
— Spartan (@_spartan_45) February 3, 2024
ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಮೂರನೇ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಜೈಸ್ವಾಲ್ ಪಾತ್ರರಾಗಿದ್ದಾರೆ. ಮಾಜಿ ಬ್ಯಾಟರ್ ವಿನೋದ್ ಕಾಂಬ್ಳಿ 1993 ರಲ್ಲಿ ವಾಂಖೆಡೆಯಲ್ಲಿ ಇಂಗ್ಲೆಂಡ್ ವಿರುದ್ಧ 21 ವರ್ಷ 32 ದಿನಗಳ ವಯಸ್ಸಿನಲ್ಲಿ ದ್ವಿಶತಕ ಬಾರಿಸಿ, ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುನಿಲ್ ಗವಾಸ್ಕರ್ 21 ವರ್ಷ 277 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಭಾರತದ ಎರಡನೇ ಕಿರಿಯ ಬ್ಯಾಟರ್ ಆಗಿದ್ದಾರೆ.
ಇದನ್ನೂ ಓದಿ Yashasvi Jaiswal : ದ್ವಿಶತಕ ಬಾರಿಸಿ ನೂತನ ದಾಖಲೆ ಸೃಷ್ಟಿಸಿದ ಯಶಸ್ವಿ ಜೈಸ್ವಾಲ್
19 ವರ್ಷ 140 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
Timber Striker Alert 🚨
— BCCI (@BCCI) February 3, 2024
A Jasprit Bumrah special 🎯 🔥
Drop an emoji in the comments below 🔽 to describe that dismissal
Follow the match ▶️ https://t.co/X85JZGt0EV#TeamIndia | #INDvENG | @Jaspritbumrah93 | @IDFCFIRSTBank pic.twitter.com/U9mpYkYp6v
ಟೆಸ್ಟ್‌ನಲ್ಲಿ ಭಾರತದ ಪರ 200 ರನ್ ಗಳಿಸಿದ ಕಿರಿಯ ಆಟಗಾರ
ವಿನೋದ್ ಕಾಂಬ್ಲಿ 224 vs ಇಂಗ್ಲೆಂಡ್ ಮುಂಬೈ 1993 (21 ವರ್ಷ 35 ದಿನ)
ವಿನೋದ್ ಕಾಂಬ್ಲಿ 227 vs ಜಿಂಬಾಬ್ವೆ ಡೆಲ್ಲಿ 1993 (21 ವರ್ಷ 55 ದಿನ)
ಸುನಿಲ್ ಗವಾಸ್ಕರ್ 220 vs ವೆಸ್ಟ್ ಇಂಡಿಸ್ ಪೋರ್ಟ್ ಆಫ್ ಸ್ಪೇನ್ 1971 (21 ವರ್ಷ 283 ದಿನ)
ಯಶಸ್ವಿ ಜೈಸ್ವಾಲ್ 209 vs ಇಂಗ್ಲೆಂಡ್ ವೈಜಾಗ್ 2024(22 ವರ್ಷ 37ದಿನ)
ಟೆಸ್ಟ್ ನಲ್ಲಿ ಭಾರತದ ಪರ ಎಡಗೈ ಬ್ಯಾಟರ್‌ಗಳಿಂದ ದ್ವಿಶತಕ
239 ಸೌರವ್ ಗಂಗೂಲಿ vs ಪಾಕಿಸ್ತಾನ ಬೆಂಗಳೂರು 2007
227 ವಿನೋದ್ ಕಾಂಬ್ಲಿ vs ಜಿಂಬಾಬ್ವೆ ನವದೆಹಲಿ 1993
224 ವಿನೋದ್ ಕಾಂಬ್ಲಿ vs ಇಂಗ್ಲೆಂಡ್ ಮುಂಬೈ 1993
206 ಗೌತಮ್ ಗಂಭೀರ್ vs ಆಸ್ಟ್ರೇಲಿಯಾ ನವದೆಹಲಿ 2006
209 ವೈ ಜೈಸ್ವಾಲ್ vs ಇಂಗ್ಲೆಂಡ್ ವಿಶಾಖಪಟ್ಟಣಂ 2024