Site icon Vistara News

WPL 2024: ಡಬ್ಲ್ಯೂಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ತಾರೆಯರಿಂದ ನೃತ್ಯ ಪ್ರದರ್ಶನ

WPL 2024

ಬೆಂಗಳೂರು: 2ನೇ ಆವೃತ್ತಿಯ(WPL 2024) ಮಹಿಳಾ ಪ್ರೀಮಿಯರ್‌ ಲೀಗ್‌(ಡಬ್ಲ್ಯೂಪಿಎಲ್) ಟೂರ್ನಿ ಆರಂಭಕ್ಕೆ ಇನ್ನು ಮೂರೇ ದಿನಗಳು ಬಾಕಿ ಉಳಿದಿದೆ. ಫೆಬ್ರವರಿ 23ರಿಂದ ಬೆಂಗಳೂರಿನಲ್ಲಿ ಟೂರ್ನಿ ಆರಂಭಗೊಳ್ಳಲಿದೆ. ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಕೆಲವು ಸ್ಟಾರ್​ಗಳು ಕಾಣಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯದ ಮಾಹಿತಿ ಪ್ರಕಾರ ಬಾಲಿವುಡ್​ ನಟ ಕಾರ್ತಿಕ್ ಆರ್ಯನ್ (Kartik Aaryan) ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಇವರ ಜತೆ ಕರ್ನಾಟಕದ ಕೆಲವು ಸಿನೆಮಾ ತಾರೆಯರು ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಫೆಬ್ರವರಿ 23 ರಂದು ಸಂಜೆ 6:30 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಚೊಚ್ಚಲ ಆವೃತ್ತಿಯಾದ ಕಳೆದ ಬಾರಿಯ ಉದ್ಘಾಟನಾ ಸಮಾರಂಭದಲ್ಲಿ ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಮತ್ತು ಗಾಯಕ ಎಪಿ ಧಿಲ್ಲೋನ್ ಪ್ರದರ್ಶನ ನೀಡಿದ್ದರು. ಕೂಟದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಮತ್ತು ರನ್ನರ್​ ಅಪ್​ ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಲಿದೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಡಬ್ಲ್ಯುಪಿಎಲ್ 2024ರ ಆವೃತ್ತಿ ಕೂಡ ಕಳೆದ ವರ್ಷದಂತೆ ಅದೇ ಸ್ವರೂಪದಲ್ಲಿ ನಡೆಯಲಿದೆ. ಲೀಗ್ ಹಂತದಲ್ಲಿ ಅಗ್ರ ಮೂರು ಸ್ಥಾನ ಪಡೆದ ತಂಡಗಳು ಪ್ಲೇ ಆಫ್​ಗಳಿಗೆ ಅರ್ಹತೆ ಪಡೆಯುತ್ತವೆ. ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್​ನಲ್ಲಿ ಆಡಿ ಫೈನಲ್​ ಪ್ರವೇಶಿಸಲಿದೆ.

ಇದನ್ನೂ ಓದಿ WPL 2024 : ಆರ್​ಸಿಬಿ ತಂಡಕ್ಕೆ ಆಘಾತ, ಎಡಗೈ ಬ್ಯಾಟರ್​ ಟೂರ್ನಿಯಿಂದ ಔಟ್​

ಮೊದಲ ಆವೃತ್ತಿಯಲ್ಲಿ ಎಲ್ಲ ಪಂದ್ಯಗಳನ್ನು ಮುಂಬೈಯಲ್ಲಿ ನಡೆಸಲಾಗಿತ್ತು. ಆದರೆ ಈ ಬಾರಿ 2 ತಾಣಗಳಲ್ಲಿ ಪಂದ್ಯಾವಳಿ ನಡೆಯಲಿದೆ. ಈ ತಾಣಗಳೆಂದರೆ ಬೆಂಗಳೂರು ಮತ್ತು ನವದೆಹಲಿ. ಈಗಾಗಲೇ ಬೆಂಗಳೂರು ಚರಣದ 11 ಪಂದ್ಯಗಳ ಟಿಕೆಟ್​ ಮಾರಟ ಆರಂಭಗೊಂಡಿದೆ. ಬುಕ್​ಮೈಶೋ ವೆಬ್​ಸೈಟ್​ನಲ್ಲಿ ಟಿಕೆಟ್​ಗಳು ಲಭ್ಯವಿದ್ದು, 100 ರೂ. ಮುಖಬೆಲೆ ಹೊಂದಿವೆ.

ಪೂರ್ಣ ವೇಳಾಪಟ್ಟಿ


ಫೆಬ್ರವರಿ 23- ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್: ಬೆಂಗಳೂರು

ಫೆಬ್ರವರಿ 24- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಯುಪಿ ವಾರಿಯರ್ಸ್: ಬೆಂಗಳೂರು

ಫೆಬ್ರವರಿ 25- ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ಬೆಂಗಳೂರು

ಫೆಬ್ರವರಿ 26 -ಯುಪಿ ವಾರಿಯರ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್: ಬೆಂಗಳೂರು

ಫೆಬ್ರವರಿ 27- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಜೈಂಟ್ಸ್: ಬೆಂಗಳೂರು

ಫೆಬ್ರವರಿ 28- ಮುಂಬೈ ಇಂಡಿಯನ್ಸ್ ವಿರುದ್ಧ ಯುಪಿ ವಾರಿಯರ್ಸ್: ಬೆಂಗಳೂರು

ಫೆಬ್ರವರಿ 29- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್: ಬೆಂಗಳೂರು

ಮಾರ್ಚ್ 1-ಯುಪಿ ವಾರಿಯರ್ಸ್ ವಿರುದ್ಧ ಗುಜರಾತ್ ಜೈಂಟ್ಸ್; ಬೆಂಗಳೂರು

ಮಾರ್ಚ್ 2-ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್: ಬೆಂಗಳೂರು

ಮಾರ್ಚ್ 3- ಗುಜರಾತ್ ಜೈಂಟ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್: ಬೆಂಗಳೂರು

ಮಾರ್ಚ್ 4- ಯುಪಿ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ಬೆಂಗಳೂರು

ಮಾರ್ಚ್ 5 -ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ದೆಹಲಿ

ಮಾರ್ಚ್ 6 – ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೆಹಲಿ

ಮಾರ್ಚ್ 7 – ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್: ದೆಹಲಿ

ಮಾರ್ಚ್ 8 – ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್: ದೆಹಲಿ

ಮಾರ್ಚ್ 9-ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಜೈಂಟ್ಸ್: ದೆಹಲಿ

ಮಾರ್ಚ್ 10-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು: ದೆಹಲಿ

ಮಾರ್ಚ್ 11- ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್: ದೆಹಲಿ

ಮಾರ್ಚ್ 12- ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು; ದೆಹಲಿ

ಮಾರ್ಚ್ 13-ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಜೈಂಟ್ಸ್: ದೆಹಲಿ

ಮಾರ್ಚ್ 15 -ಎಲಿಮಿನೇಟರ್: ದೆಹಲಿ

ಮಾರ್ಚ್ 17 -ಫೈನಲ್: ದೆಹಲಿ

Exit mobile version