ಜೊಹಾನ್ಸ್ಬರ್ಗ್: ಸೌತ್ ಆಫ್ರಿಕಾ ಟಿ20(SA20) ಲೀಗ್ನ ಫೈನಲ್ ಪಂದ್ಯದಲ್ಲಿ ಡರ್ಬನ್ ಸೂಪರ್ ಜೈಂಟ್ಸ್ ವಿರುದ್ಧ 89 ರನ್ಗಳ ಅಂತರದ ಗೆಲುವು ಸಾಧಿಸಿದ ಸನ್ ರೈಸರ್ಸ್ ಈಸ್ಟರ್ನ್ ಕೇಪ್(Sunrisers Eastern Cape) ತಂಡವು ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೇ ಖುಷಿಯಲ್ಲಿ ತಂಡದ ಮಾಲಕಿ ಕಾವ್ಯಾ ಮಾರನ್(Kavya Maran) ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ವೈರಲ್(viral video) ಆಗಿದೆ.
ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಫೈಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡವು 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಗುರಿ ಬೆನ್ನತ್ತಿದ ಡರ್ಬನ್ ತಂಡವು 17 ಓವರ್ಗಳಲ್ಲಿ 115 ರನ್ಗೆ ಸರ್ವಪತನ ಕಂಡಿತು. ಸನ್ ರೈಸರ್ಸ್ ತಂಡವು 89 ರನ್ಗಳ ಭಾರೀ ಅಂತರದ ಗೆಲುವು ಸಾಧಿಸಿತು.
Kavya Maran Mam has something to say 🗣️🧡
— SunRisers OrangeArmy Official (@srhfansofficial) February 10, 2024
.
.
.#Sec #SunrisersEasternCape #Orangeramy pic.twitter.com/UbS6uiWVBy
ಮೊದಲು ಬ್ಯಾಟಿಂಗ್ ನಡೆಸಿದ ಸನ್ ರೈಸರ್ಸ್ ತಂಡದ ಜೋರ್ಡಾನ್ ಹೆರ್ಮಾನ್ ಮತ್ತು ಟಾಮ್ ಅಬೆಲ್ ಉತ್ತಮ ರನ್ ಪೇರಿಸಿದರು. ಅಬೆಲ್ 55 ರನ್ ಗಳಿಸಿದರೆ, ಜೋರ್ಡಾನ್ 42 ರನ್ ಮಾಡಿದರು. ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಜತೆಯಾದ ನಾಯಕ ಮಾರ್ಕ್ರಮ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅಜೇಯ 98 ರನ್ ಜತೆಯಾಟವಾಡಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಸ್ಟಬ್ಸ್ 30 ಎಸೆತಗಳಲ್ಲಿ 56 ರನ್ ಮಾಡಿದರೆ, ಮಾರ್ಕ್ರಮ್ 26 ಎಸೆತಗಳಲ್ಲಿ 42 ರನ್ ಗಳಿಸಿದರು. ಡರ್ಬನ್ ಪರ 38 ರನ್ ಗಳಿಸಿದ ವಿಯಾನ್ ಮುಲ್ಡರ್ ಅವರದ್ದೇ ಹೆಚ್ಚಿನ ಗಳಿಕೆ. ಉಳಿದ ಎಲ್ಲ ಬ್ಯಾಟರ್ಗಳು ಅಗ್ಗಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಸನ್ ರೈಸರ್ಸ್ ಪರ ಮ್ಯಾರ್ಕೊ ಜಾನ್ಸನ್ ಐದು ವಿಕೆಟ್, ಡ್ಯಾನಿಯಲ್ ವೂರಲ್ ಮತ್ತು ಬಾರ್ಟಮನ್ ತಲಾ ಎರಡು ವಿಕೆಟ್ ಕಿತ್ತರು.
ಇದನ್ನೂ ಓದಿ Kavya Maran | ಎಸ್ಆರ್ಎಚ್ ತಂಡದ ಮಾಲಕಿ ಕಾವ್ಯಾ ಮಾರನ್ಗೆ ಮದುವೆ ಪ್ರಪೋಸ್ ಮಾಡಿದ ಕ್ರಿಕೆಟ್ ಅಭಿಮಾನಿ!
Kavya Maran is over the moon after SEC won their second consecutive SA20 Title last night.#CricketTwitter pic.twitter.com/nuWIwJw88U
— Vibhor (@dhotedhulwate) February 11, 2024
ಸತತವಾಗಿ ಸನ್ ರೈಸರ್ಸ್ ಈಸ್ಟರ್ನ್ ಕೇಪ್ ತಂಡವು ಗೆಲುವು ಸಾಧಿಸಿದ್ದನ್ನು ಕಂಡು ಕಾವ್ಯಾ ಮಾರನ್ ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು, ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದಿರುವುದು ಸಂತಸ ತಂದಿದೆ. ತಂಡದ ಎಲ್ಲ ಆಟಗಾರರು ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದಾರೆ. ತಂಡದ ಸಿಬ್ಬಂದಿಗಳು ಕೂಡ ನೆರವು ನೀಡಿದ್ದಾರೆ ಎಂದು ಕಾವ್ಯಾ ಮಾರನ್ ಹೇಳಿದ್ದಾರೆ.
Normal people can see only a single trophy in the picture but in reality, there are two. Kavya Maran Ji is herself a huge achiever of excellence in managing a cricket team with passion.
— Abhishek Ojha (@vicharabhio) February 11, 2024
🧡 pic.twitter.com/Lnl70AU3ht