Site icon Vistara News

KKR vs DC: ಮೊದಲ ಸೋಲಿಗೆ ಸೇಡು ತೀರಿಸಿಕೊಂಡೀತೇ ಡೆಲ್ಲಿ?; ಕೆಕೆಆರ್​ ಎದುರಾಳಿ

KKR vs DC

ಕೋಲ್ಕತ್ತಾ: ಆರಂಭಿಕ ಹಂತದಲ್ಲಿ ಸತತ ಸೋಲಿಗೆ ತುತ್ತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್(KKR vs DC)​ ಇದೀಗ ಬಲಿಷ್ಠ ತಂಡಗಳಿಗೆ ಸೋಲುಣಿಸುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರಿದೆ. ಸೋಮವಾರದ ಮಹತ್ವದ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಆಡಲಿದೆ. ಈ ಪಂದ್ಯವನ್ನು ಗೆದ್ದು ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡರೆ ಪಂತ್​ ಬಳಗದ ಪ್ಲೇ ಆಫ್ ಮೇಲೆ ಒಂದು ಹಂತದ ತನಕ ನಿರೀಕ್ಷೆ ಇರಿಸಿಕೊಳ್ಳಬಹುದು. ಸದ್ಯ ಹತ್ತರಲ್ಲಿ 5 ಪಂದ್ಯಗಳನ್ನಷ್ಟೇ ಜಯಿಸಿರುವ ಡೆಲ್ಲಿ ಉಳೆದೆಲ್ಲ ಪಂದ್ಯಗಳನ್ನು ದೊಡ್ಡ ಅಂತರದಿಂದ ಜಯಿಸಿದರೆ ಪ್ಲೇ ಆಫ್​ ಟಿಕೆಟ್​ ಖಚಿತಗೊಳ್ಳಲಿದೆ.

ಈ ಬಾರಿಯ ಟೂರ್ನಿಯ ಮೊದಲ ಹಂತದ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಡೆಲ್ಲಿ 106 ರನ್​ ಅಂತರದ ಹೀನಾಯ ಸೋಲು ಕಂಡಿತ್ತು. ಈ ಸೋಲನ್ನೇ ಡೆಲ್ಲಿ ಚಾಲೆಂಜ್‌ ಆಗಿ ಸ್ವೀಕರಿಸಿ ನಾಳಿನ ಪಂದ್ಯದಲ್ಲಿ ಸೇಡು ತೀರಿಸಿಕೊಂಡೀತೇ ಎನ್ನುವುದು ಪಂದ್ಯದ ಕುತೂಹಲ. ಎದುರಾಳಿ ಯಾರೇ ಆಗಿರಲಿ ದಂಡಿಸುವುದೊಂದೆ ಎನ್ನ ಗುರಿ ಎಂದು ಬ್ಯಾಟಿಂಗ್​ ನಡೆಸುತ್ತಿರುವ 22ರ ಪೋರ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಈ ಪಂದ್ಯದ ಪ್ರಮುಖ ಹೈಲೆಟ್ಸ್​. ಈಗಾಗಲೇ ಅವರು ಜಸ್​ಪ್ರೀತ್​ ಬುಮ್ರಾ ಸೇರಿ ವಿಶ್ವದ ಘಾತಕ ಬೌಲರ್​ಗಳಿಗೆ ಸತತ ಸಿಕ್ಸರ್​ ರುಚಿ ತೋರಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಈ ಪಂದ್ಯದಲ್ಲಿಯೂ ಡೆಲ್ಲಿ ಇವರ ಮೇಲೆ ಹೆಚ್ಚಿನ ಬರವಸೆ ಇರಿಸಿದೆ.

ಆರಂಭಿಕ ಪಂದ್ಯಗಳಲ್ಲಿ ಸತತವಾಗಿ ಗೆದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಕೆಕೆಆರ್​ ಆ ಬಳಿಕ ಸೋಲಿನ ಹಾದಿ ಹಿಡಿದಿದೆ. ಅದರಲ್ಲೂ ಕಳೆದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ 260 ಗಡಿ ದಾಡಿಯೂ ಈ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿ ಹೀನಾಯ ಸೋಲು ಕಂಡಿತ್ತು. ದಾಖಲೆಯ 24 ಕೋಟಿ ವೀರ ಮಿಚೆಲ್​ ಸ್ಟಾರ್ಕ್​ ಸಂಪೂರ್ಣ ವಿಫಲರಾಗಿದ್ದಾರೆ. ಅನ್​ಕ್ಯಾಪ್ಡ್​ ಬ್ಯಾಟರ್​ಗಳು ಸಹ ಇವರಿಗೆ ಸಿಕ್ಸರ್​ ಮೂಲಕ ದಂಡಿಸುತ್ತಿದ್ದಾರೆ.

ಇದನ್ನೂ ಓದಿ IPL 2024: 41ನೇ ವಯಸ್ಸಿನಲ್ಲೂ ದಾಖಲೆ ಬರೆದ ಅಮಿತ್ ಮಿಶ್ರಾ

ಪಿಚ್​ ರಿಪೋರ್ಟ್​

ಉಭಯ ತಂಡಗಳು ಇದುವರೆಗಿನ ಐಪಿಎಲ್​ನಲ್ಲಿ 33 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಕೆಕೆಆರ್​ 17 ಪಂದ್ಯ ಗೆದ್ದರೆ, ಡೆಲ್ಲಿ 15 ಪಂದ್ಯ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಈಡನ್‌ ಗಾರ್ಡನ್ಸ್‌ನ(Eden Gardens) ಪಿಚ್​ ಸೀಮರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಇಲ್ಲಿ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಿನ ಅವಕಾಶ ಏಕೆಂದರೆ ರಾತ್ರಿಯ ವೇಳೆ ಇಲ್ಲಿ ಇಬ್ಬಿನಿ ಸಮಸ್ಯೆ ಕಾಡಲಿದೆ. ಇದು ಬೌಲರ್​ಗಳಿಗೆ ಕಷ್ಟಕರವಾಗಲಿದೆ. ಕೈಯಲ್ಲಿ ಸರಿಯಾಗಿ ಚೆಂಡು ನಿಲ್ಲದೆ ನಿರ್ದಿಷ್ಟ ಗುರಿಗೆ ಬೌಲಿಂಗ್​ ಮಾಡಲು ಸಾಧ್ಯವಾಗುವುದಿಲ್ಲ. ಟಾಸ್​ ಗೆದ್ದ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರೆ ಉತ್ತಮ.

ಸಂಭಾವ್ಯ ತಂಡಗಳು


ಡೆಲ್ಲಿ ಕ್ಯಾಪಿಟಲ್ಸ್​: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕುಮಾರ್ ಕುಶಾಗ್ರಾ, ಶಾಯ್ ಹೋಪ್, ರಿಷಬ್ ಪಂತ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್​ ಪಟೇಲ್, ಕುಲದೀಪ್ ಯಾದವ್, ಲಿಜಾದ್ ವಿಲಿಯಮ್ಸ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್.

ಕೆಕೆಆರ್:​ ಫಿಲಿಪ್ ಸಾಲ್ಟ್, ಸುನಿಲ್ ನರೈನ್, ಆಂಗ್ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ದುಷ್ಮಂತ ಚಮೀರಾ/ ವಿಚೆಲ್​ ಸ್ಟಾರ್ಕ್​, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.

Exit mobile version