ಶ್ರೀನಗರ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದ ಚೆರ್ಸೂ ಪ್ರದೇಶದ ಬ್ಯಾಟ್ ತಯಾರಿಕಾ(Sachin Tendulkar visits bat manufacturing factory) ಕಾರ್ಖಾನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಪತ್ನಿ ಅಂಜಲಿ, ಪುತ್ರಿ ಸಾರಾ ಕೂಡ ಜತೆಗಿದ್ದರು. ಸಚಿನ್ ಅವರು ಈ ಬ್ಯಾಟ್ ಫ್ಯಾಕ್ಟರಿಗೆ ಭೇಟಿ ನೀಡಿದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Sachin Tendulkar, with wife Anjali and daughter Sara, visits a cricket bat manufacturing unit at Charsoo in Pulwama district on Saturday. pic.twitter.com/fSUtL12nsa
— Sanjay Kishore (@saintkishore) February 18, 2024
ಬ್ಯಾಟ್‌ಗಳನ್ನು ತಯಾರಿಸುವ MJ ಸ್ಪೋರ್ಟ್ಸ್ ಫ್ಯಾಕ್ಟರಿಗೆ ಸಚಿನ್ ಭೇಟಿ ನೀಡಿದ ವೇಳೆ ಅಲ್ಲಿನ ಕಾರ್ಮಿಕರೊಂದಿಗೆ ಸಂವಾದ ನಡೆಸಿದ್ದಾರೆ. ಈ ಬ್ಯಾಟ್ ಕಂಪೆನಿ ಸಹೋದರರಾದ ಮಂಜೂರ್ ಮತ್ತು ಜಾವಿದ್ ಅವರ ಒಡೆತನದಲ್ಲಿದೆ. ಸಚಿನ್ ಅವರು ಇಲ್ಲಿ ತಯಾರಿಸುವ ಬ್ಯಾಟ್ಗಳ ಗುಣಮಮಟ್ಟನ್ನು ಪರೀಕ್ಷೆ ಮಾಡಲು ಆಗಮಿಸಿದ್ದಾಗಿ ವರದಿಯಾಗಿದೆ. ಇಲ್ಲಿನ ಕಾರ್ಮಿಕರಿಗೆ ಸಚಿನ್ ಆಟೋಗ್ರಾಫ್ ಕೂಡ ನೀಡಿದ್ದಾರೆ.
ಇದನ್ನೂ ಓದಿ Viral News: ಕಿಚ್ಚ ಸುದೀಪ್-ಸಚಿನ್ ತೆಂಡೂಲ್ಕರ್ ಫೋಟೋ ವೈರಲ್!
Sachin Tendulkar in Pulwama, #Kashmir.@sachin_rt pic.twitter.com/4nRErj642O
— Kamran Ali Mir (@kamranalimir) February 17, 2024
ಕ್ರಿಕೆಟ್ ಆಟಗಾರರಿಗೆ ಸ್ಫೂರ್ತಿ
24 ವರ್ಷಗಳ ಕ್ರಿಕೆಟ್ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್, 201 ವಿಕೆಟ್, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್ ಎಲ್ಲ ಕ್ರಿಕೆಟ್ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.
Sachin Tendulkar Enjoying Kashmiri Hospitality.@sachin_rt along with his family visited a bat manufacturing unit in Charsoo Awantipora.pic.twitter.com/pVpovnfNd8
— CrickeTendulkar 🇮🇳 (@CrickeTendulkar) February 18, 2024
ಸಚಿನ್ ತನ್ನ ಕೊನೆಯ ಟೆಸ್ಟ್ ಅಂತಾರಾಷ್ಟ್ರೀಯ ಪಂದ್ಯವನ್ನು 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿದ್ದರು. 2012ರಲ್ಲಿ ಅವರು ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಸಾರಸ್ಯವೆಂದರೆ ಸಚಿನ್ ತಮ್ಮ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದ್ದು ಮತ್ತು ವಿದಾಯ ಹೇಳಿದ್ದು ಪಾಕಿಸ್ತಾನ ತಂಡದ ವಿರುದ್ಧ.