ಬೆಂಗಳೂರು: ಕೆ.ಎಲ್ ರಾಹುಲ್(kl rahul) ಅವರು ಮುಂದಿನ ಆವೃತ್ತಿಯ ಐಪಿಎಲ್ನಲ್ಲಿ(IPL 2025) ತಮ್ಮ ತವರು ತಂಡವಾದ ಆರ್ಸಿಬಿ(RCB) ಪರ ಆಡಬೇಕು ಎಂಬ ಬಯಕ್ಕೆಯನ್ನು ಈಗಾಗಲೇ ವ್ಯಕ್ಯಪಡಿಸಿದ್ದರು. ಇದೀಗ ಈ ಸಾಲಿಗೆ ಮತೋರ್ವ ಕನ್ನಡಿಗ ಆಟಗಾರ ಮನೀಷ್ ಪಾಂಡೆ(Manish Pandey) ಸೇರ್ಪಡೆಗೊಂಡಿದ್ದಾರೆ. ಆರ್ಸಿಬಿ ಪರ ಮತ್ತೆ ಆಡುವ ಆಸೆ ಇದೆ ಎಂದಿದ್ದಾರೆ.
ಪ್ರಸಕ್ತ ಸಾಗುತ್ತಿರುವ ಮಹಾರಾಜ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಮನೀಷ್ ಪಾಂಡೆ, ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಈ ವಿಚಾರವನ್ನು ತೆರೆದಿಟ್ಟಿದ್ದಾರೆ. ತವರಾದ ಆರ್ಸಿಬಿ ಪರ ಮತ್ತೊಮ್ಮೆ ಆಡುವ ಅವಕಾಶಕ್ಕಾಗಿ ಕಾಯುತ್ತಿರುವೆ. ಕೊಹ್ಲಿಯ ಜತೆಗೆ ಬ್ಯಾಟಿಂಗ್ ನಡೆಸುವ ಆಸೆ ಇದೆ. ನಾನು ಮಾತ್ರವಲ್ಲ, ಕರ್ನಾಟಕದ ಎಲ್ಲಾ ಕ್ರಿಕೆಟಿಗರು ಒಮ್ಮೆಯಾದರೂ ಆರ್ಸಿಬಿ ಪರ ಆಡುವ ಕನಸು ಕಾಣುತಿದ್ದಾರೆ ಎನ್ನುವ ಮೂಲಕ ಆರ್ಸಿಬಿ ಪರ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇದುವರೆಗೆ 7 ಐಪಿಎಲ್ ತಂಡಗಳ ಪರ ಆಡಿರುವ ಪಾಂಡೆ ಈ ಬಾರಿಯ ಆಟಗಾರರ ಹಾರಜಿಗೆ ಮುನ್ನ ಕೆಕೆಆರ್ ತಂಡದಿಂದ ರಿಲೀಸ್ ಆಗುವುದು ಬಹುತೇಕ ಖಚಿತ.
2009ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಮನೀಷ್ ಪಾಂಡೆ, ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದರು. ಶತಕ ಬಾರಿಸುವು ಮೂಲಕ ಈ ಸಾಧನೆ ಮಾಡಿದ ಮೊದಲ ಆನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದರು. ಇದುವರೆಗೂ 171 ಐಪಿಎಲ್ ಪಂದ್ಯಗಳನ್ನಾಡಿದ ಅವರು ಒಂದು ಶತಕ ಹಾಗೂ 22 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 3850 ರನ್ ಗಳಿಸಿದ್ದಾರೆ. ಇದರಲ್ಲಿ ಅಜೇಯ 114 ರನ್ ಗರಿಷ್ಠ ಮೊತ್ತವಾಗಿದೆ. ಈ ಬಾರಿ ಕೆಕೆಆರ್ ಪರ ಕೇವಲ 1 ಪಂದ್ಯ ಆಡಿ 42 ರನ್ ಬಾರಿಸಿದ್ದರು.
ಇದನ್ನೂ ಓದಿ Manish Pandey: ಕ್ರಿಕೆಟಿಗ ಮನೀಷ್ ಪಾಂಡೆ ದಾಂಪತ್ಯದಲ್ಲಿ ಬಿರುಕು!
2015ರಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯನ್ನಾಡುವ ಮೂಲಕ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಮನೀಷ್, ಇದುವರೆಗೂ 29 ಏಕದಿನ ಮತ್ತು 39 ಟಿ20 ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 566 ರನ್ ಮತ್ತು ಟಿ20ಯಲ್ಲಿ 709 ರನ್ ಬಾರಿಸಿದ್ದಾರೆ. ಏಕದಿನದಲ್ಲಿ ಒಂದು ಶತಕ ಮತ್ತು 2 ಅರ್ಧಶತಕ ಒಳಗೊಂಡಿದೆ. 2021ರಲ್ಲಿ ಶ್ರೀಲಂಕಾ ವಿರುದ್ಧ ಕೊಪನೆಯ ಬಾರಿ ಏಕದಿನ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಫಾರ್ಮ್ ಕಳೆದುಕೊಂಡು ಮತ್ತೆ ತಂಡಕ್ಕೆ ಕಮ್ಬ್ಯಾಕ್ ಮಾಡುವಲ್ಲಿ ವಿಫಲರಾಗಿದ್ದರು. ಬ್ಯಾಟಿಂಗ್ ಜತೆಗೆ ಚುರುಕಿನ ಫೀಲ್ಡಿಂಗ್ಗೆ ಇವರು ಹೆಸರುವಾಸಿ.
ಮತ್ತೆ ಆರ್ಸಿಬಿಗೆ ರಾಹುಲ್?
ಇದೇ ವರ್ಷ ನಡೆದಿದ್ದ ಐಪಿಎಲ್ ವೇಳೆ ಆರ್.ಅಶ್ವಿನ್ ಜತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ತನ್ನನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ ಎಂದು ಹೇಳಿದ್ದರು. ಇದೀಗ ಕೊಹ್ಲಿ ಮತ್ತೆ ರಾಹುಲ್ ಅವರನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.