Site icon Vistara News

MS Dhoni : ಧೋನಿಯ ಈ ಹಳೆಯ ಜಾಹೀರಾತುಗಳನ್ನು ಮರೆಯಲು ಸಾಧ್ಯವೇ?

m s dhoni

#image_title

ಬೆಂಗಳೂರು: ಕ್ಯಾಪ್ಟನ್‌ ಕೂಲ್‌ ಧೋನಿ (MS Dhoni) ಅವರು ಮೈದಾನದಲ್ಲಿ ಆಡುತ್ತಿದ್ದರೆ ಅದನ್ನು ನೋಡದೇ ಇರಲು ಸಾಧ್ಯವಿಲ್ಲ. ಈ ವರ್ಷದ ಐಪಿಎಲ್‌ನಲ್ಲಂತೂ ಎಷ್ಟೊಂದು ಅಭಿಮಾನಿಗಲೂ ಧೋನಿಯ ಆಟ ನೋಡಲೆಂದೇ ಸ್ಟೇಡಿಯಂಗೆ ಬಂದಿದ್ದರು ಎನ್ನುವುದನ್ನು ನಾವು ನೀವು ನೋಡಿದ್ದೇವೆ. ಅಂದ ಹಾಗೆ ಈ ಧೋನಿ ಕೇವಲ ಆಟದಲ್ಲಿ ಮಾತ್ರವಲ್ಲ, ನಟನೆಯಲ್ಲೂ ಎತ್ತಿದ ಕೈ. ಅದಕ್ಕೆಂದೇ ಅವರು ನಟಿಸಿರುವ ಹಲವಾರು ಜಾಹೀರಾತುಗಳು ಈಗಲೂ ಚಿರ ನೂತನ!

ಧೋನಿ ಅವರು ಬಹಳ ವರ್ಷಗಳ ಹಿಂದೆ ವೀಡಿಯೋಕಾನ್‌ ಜಾಹೀರಾತಿನಲ್ಲಿ ನಟಿಸಿದ್ದರು. ಅದರಲ್ಲಿ ಶಾರುಖ್‌ ಖಾನ್‌ ಕೂಡ ಇದ್ದರು. ವಿಶೇಷವೆಂದರೆ ಆ ಜಾಹೀರಾತಿನಲ್ಲಿ ಶಾರುಖ್‌ ಪಾತ್ರ ಧೋನಿಗೆ, ಹಾಗೆಯೇ ಧೋನಿಯ ಪಾತ್ರವನ್ನು ಶಾರುಖ್‌ಗೆ ನೀಡಲಾಗಿತ್ತು. ನಟನಾಗಿ ಧೋನಿ ಮಿಂಚಿದ್ದನ್ನು ಅನೇಕರು ಇಷ್ಟಪಟ್ಟಿದ್ದರು.


ಅದೇ ರೀತಿಯಲ್ಲಿ ಧೋನಿ ಅವರು ಪೆಪ್ಸಿ ಜಾಹೀರಾತಿನಲ್ಲೂ ಕಾಣಿಸಿಕೊಂಡಿದ್ದರು. ಅದರಲ್ಲಿ ಅವರು ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ರಜನಿಕಾಂತ್‌ ಸ್ಟೈಲ್‌ನಲ್ಲಿ ಮಿಂಚಿದ್ದರು. ಆ ಜಾಹೀರಾತನ್ನು ಕೂಡ ಯಾರೂ ಇಂದಿಗೂ ಮರೆತಿಲ್ಲ.


ಹಾಗೆಯೇ ಇನ್ನೂ ಹಲವಾರು ಜಾಹೀರಾತುಗಳಲ್ಲಿ ಧೋನಿ ಮಿಂಚಿದ್ದರು. ಅವರು ಕ್ರಿಕೆಟ್‌ ಮೈದಾನದಲ್ಲಿ ಬ್ಯಾಟ್‌ ಹಿಡಿದು ಆಡುವುದನ್ನು ಹಾಗೆಯೇ ಕೀಪರ್‌ ಆಗಿ ಕ್ಯಾಚ್‌ ಹಿಡಿಯುವುದನ್ನು ಮೆಚ್ಚಿದಂತೆಯೇ ಅಭಿಮಾನಿಗಳು ಅವರ ಜಾಹೀರಾತುಗಳನ್ನೂ ಮೆಚ್ಚಿಕೊಂಡಿದ್ದರು.

Exit mobile version